News Karnataka Kannada
Thursday, April 25 2024
Cricket
ಉಡುಪಿ

ಉಚ್ಚಿಲದಲ್ಲಿ ಟ್ರಾನ್ಸ್‌ಫಾರ್ಮರ್‌ನ ಸ್ಟೇ ವಯರ್‌ನಲ್ಲಿ ವಿದ್ಯುತ್‌ ಪ್ರವಹಿಸಿ ಗರ್ಭಿಣಿ ಹಸು ಸಾವು

ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಪಣಿಯೂರು ಕ್ರಾಸ್ ಜಂಕ್ಷನ್ ಬಳಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ನ ಸ್ಟೇ ವಯರ್‌ಗೆ ಸಿಲುಕಿ ಗರ್ಭಿಣಿ ಹಸುವೊಂದು ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಪ್ರಾಣಬಿಟ್ಟ ಹೃದಯ ವಿದ್ರಾವಕ ಘಟನೆ ನಿನ್ನೆ ಸಂಜೆ ನಡೆದಿದೆ.
Photo Credit : News Kannada

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಪಣಿಯೂರು ಕ್ರಾಸ್ ಜಂಕ್ಷನ್ ಬಳಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ನ ಸ್ಟೇ ವಯರ್‌ಗೆ ಸಿಲುಕಿ ಗರ್ಭಿಣಿ ಹಸುವೊಂದು ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಪ್ರಾಣಬಿಟ್ಟ ಹೃದಯ ವಿದ್ರಾವಕ ಘಟನೆ ನಿನ್ನೆ ಸಂಜೆ ನಡೆದಿದೆ.

ಉಚ್ಚಿಲ ಭಾಸ್ಕರ ನಗರ ನಿವಾಸಿ ಇಸ್ಮಾಯಿಲ್‌ ಅವರ ತಿಂಗಳ ಗರ್ಭಿಣಿ ಹಸುವೊಂದು ಮೇವನ್ನು ಹರಿಸಿಕೊಂಡು ಉಚ್ಚಿಲ ಪಣಿಯೂರು ಕ್ರಾಸ್ ಜಂಕ್ಷನ್ ಬಳಿ ಬಂದಿದ್ದು, ಈ ವೇಳೆ ಹೆದ್ದಾರಿ ಬಳಿಯ ವಿದ್ಯುತ್ ಟ್ರಾನ್ಸ್ಫಾರ್ಮರ್‌ ಬಳಿ ಮೇಯುತ್ತಿದ್ದಾಗ ಟ್ರಾನ್ಸ್ಫಾರ್ಮರ್‌ನ ಸ್ಟೇ ವಯರ್‌ಗೆ ಸಿಲುಕಿಕೊಂಡಿದೆ. ಅದರಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದಾಗ ಹಳೆಯ ಜೋತು ಬಿದ್ದಿದ್ದ ಸ್ಟೇ ವಯರ್ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಗೆ ತಗುಲಿದ ಪರಿಣಾಮ ಹಸುವಿಗೆ ವಿದ್ಯುತ್ ಶಾಕ್ ಹೊಡೆದಿದೆ. ಇದರಿಂದ ಹಸು ಅಲ್ಲೇ ಅಸುನೀಗಿದೆ.

ಮಾಹಿತಿ ಪಡೆದ ಮೆಸ್ಕಾಂ ನಿರ್ವಾಹಕ ಸ್ಥಳಕ್ಕೆ ಬಂದು ವಿದ್ಯುತ್ ನಿಲುಗಡೆಗೊಳಿಸಿದ್ದಾರೆ. ಸದಾ ಜನನಿಬಿಡ, ವಾಹನ ದಟ್ಟಣೆಯಿಂದ ಕೂಡಿದ ಈ ಪ್ರದೇಶದಲ್ಲಿ ಹಳೆಯ ಸ್ಟೇ ವಯರ್ ಹೊಂದಿದ್ದ ಈ ಮೆಸ್ಕಾಂ ವಿದ್ಯುತ್ ಟ್ರಾನ್ಸ್ಫಾರ್ಮರ್ ಸಮರ್ಪಕ ನಿರ್ವಹಣೆ ಇಲ್ಲದೆ ಇಂತಹ ಅವಘಡ ಘಟಿಸಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶವ್ಯಕ್ತವಾಗಿದೆ. ಮೆಸ್ಕಾಂ ಈ ಬಗ್ಗೆ ಕ್ರಮಕೈಗೊಂಡು ದನದ ಮಾಲೀಕರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು