News Karnataka Kannada
Friday, May 03 2024
ಉಡುಪಿ

ಮಾರಿಗುಡಿ ಜೀರ್ಣೋದ್ಧಾರ: ಸಚಿವ ಸುನೀಲ್ ಕುಮಾರ್’ ದಶ ಪ್ರಶ್ನೆಗಳ ಸವಾಲ್ ಹಾಕಿದ ಶುಭದ ರಾವ್

Shubhada Rao challenges Sunil Kumar for doing politics in religious places
Photo Credit : News Kannada

ಕಾರ್ಕಳ: ಕಾರ್ಕಳ ಮಾರಿಗುಡಿಯ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವವು ದೇವಿಯ ಇಚ್ಚೆಯಂತೆ ಭಕ್ತಾಭಿಮಾನಿಗಳು ಹಾಗೂ ದಾನಿಗಳ ಸಹಕಾರದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಆದರೆ ತಾವೂ ಮತ್ತು ತಮ್ಮ ಹಿಂಬಾಲಕರು ದೇವಳದ ಜೀರ್ಣೋದ್ಧಾರಕ್ಕೆ ನೀವೇ ಕಾರಣ ಎನ್ನುತ್ತಿದ್ದಾರೆ ಇದನ್ನು‌ ಯಾರೂ ಒಪ್ಪಲು ಸಾದ್ಯವಿಲ್ಲ. ಹಾಗಾಗಿ ಈ ಬಗ್ಗೆ ನಿಮಗೆ ಹಲವು ಪ್ರಶ್ನೆಯನ್ನು ಕೇಳಲು‌ ಬಯಸುತ್ತೇನೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು, ಶುಭದ ರಾವ್ ಹೇಳಿದರು. ಸುದ್ದಿಗೋಷ್ಠಿ ನಡೆಸಿದ ಶುಭದ ರಾವ್‌ ಸಚಿವರಿಗೆ ಹತ್ತು ಪ್ರಶ್ನೆಗಳನ್ನು ಕೇಳಿದ್ದು, ಸ್ಪಷ್ಟೀಕರಣ ನೀಡುವಂತೆ ಕೋರಿದ್ದಾರೆ.
.

1 )ಕಾರ್ಕಳ ಮಾರಿಗುಡಿ ಜೀರ್ಣೋದ್ದಾರಕ್ಕೆ ನಿಮ್ಮ ಸರಕಾರದಿಂದ ಬಂದಿರುವ ಅನುದಾನ ಎಷ್ಟು? ತಾವು ಮತ್ತು ಮುಜುರಾಯಿ ಸಚಿವರು ಭಾಷಣದಲ್ಲಿ ಹೇಳಿದ ಅನುದಾನ ಬಿಡುಗಡೆಯಾಗಿದೆಯೇ ?

2)ರಾಜ್ಯದಲ್ಲಿ ನಿಮ್ಮದೇ ಸರಕಾರವಿದ್ದು ದೇವಸ್ಥಾನಕ್ಕೆ ಬೇಕಾಗಿರುವ ಕೋಟ್ಯಾಂತರ ರೂಪಾಯಿಯ ಮರಗಳನ್ನು
ಅರಣ್ಯ ಇಲಾಖೆಯಿಂದ ಪಡೆಯುವ ಅವಕಾಶವಿದ್ದರೂ‌ ಪಡೆಯದೆ ನಿಮ್ಮ ‌ಮಿತ್ರನ ಮರದ ಮಿಲ್ಲಿನಿಂದಲೇ ಪಡೆಯಲು ಕಾರಣ ಏನು ?

3) ಅನುವಂಶಿಕ ಹಿರಿಯ ಆಡಳಿತ ಮೊಕ್ತೇಸರರನ್ನು ಪೂಜೆಗೆ ಕುಳ್ಳಿರಿಸದಿರಲು ಕಾರಣವೇನು?
4)ಉದ್ದೇಶಿತ ಮಾರಿಯಮ್ಮ ಸಭಾಭವನದ ಜಾಗವನ್ನು ನಿಮ್ಮ ಮಿತ್ರನಿಗೆ ಕಾನೂನು ಬಾಹಿರವಾಗಿ 99 ವರ್ಷಕ್ಕೆ ಲೀಸ್ ನಲ್ಲಿ ನೀಡಲು ಕಾರಣವೇನು?

5)ಮುಜುರಾಯಿ ಇಲಾಖೆಯ ಗಮನಕ್ಕೆ ತಾರದೆ ಅವರ ಅನುಮತಿಯೂ ಇಲ್ಲದೆ ತೆಗೆದ ಜೀರ್ಣೋದ್ಧಾರ ಹುಂಡಿಯ ಹಣದ ಲೆಕ್ಕವನ್ನು ನೀಡದಿರಲು ಕಾರಣವೇನು?

6) ಬ್ರಹ್ಮಕಲಶೋತ್ಸವದ ನಂತರ ನಡೆಯುವ ದೃಡ ಕಲಶ ಕಾರ್ಯಕ್ರಮಕ್ಕೆ, ಹಗಲು ರಾತ್ರಿ ದುಡಿದ ಕಾರ್ಯಕರ್ತರನ್ನು ಆಹ್ವಾನಿಸದೆ ನಿರ್ಲಕ್ಷಿಸಲು ಕಾರಣ ಏನು ?

7)ಮಾರಿಗುಡಿಯ ಹೊರ ಆವರಣದಲ್ಲಿದ್ದ ಅಂಗಡಿಗಳನ್ನು ಕೆಡಹಿ‌ ಅವರನ್ನು ಬೀದಿ ಪಾಲು ಮಾಡಿದ್ದೀರಿ. ಆವರಿಗೆ ಇನ್ನೂ ಪರ್ಯಾಯ ವ್ಯವಸ್ಥೆ ಕಲ್ಪಿಸದಿರಲು ಕಾರಣವೇನು?

8) ಪೆರ್ವಾಜೆ ಮಹಾಲಿಂಗೇಶ್ವರ ದೇವಳದ ಜಾಗದಲ್ಲಿ ತಾವು ಮತ್ತು ‌ತಮ್ಮ ಹಿಂಬಾಲಕರು ಭೂ-ವ್ಯವಹಾರ ನಡೆಸುತ್ತಿರುವುದು ಸುಳ್ಳೆ ?

9)ಪಡುತಿರುಪತಿ ಶ್ರೀ ವೆಂಕಟರಮಣ ದೇವಳದ ರಥ ಬೀದಿಯ ಒಳಚರಂಡಿ ಕಾಮಗಾರಿ ಕಳಪೆಯಾಗಿದೆ ಎಂದು ಗೊತ್ತಿದ್ದರೂ ಕೋಟ್ಯಂತರ ರೂ ಬಿಲ್ಲು ಪಾವತಿಸಿದ್ದು ಯಾಕೆ ?

10) ಪರಶುರಾಮ ಥೀಂ-ಪಾರ್ಕ್ನಲ್ಲಿ ತುಳುನಾಡಿನ ನಂಬಿಕೆಯ ದೈವ ದೇವರನ್ನು ಅವಮಾನಿಸಿರುವ ಹಿಂದೆ ನಿಮ್ಮ ಉದ್ದೇಶ ಏನು ? ಸತ್ಯಾಸತ್ಯತೆ ತಿಳಿದ ಬಳಿಕವೂ ಅದನ್ನು ಸರಿಪಡಿಸದೆ ಮೌನವಾಗಿರಲು ಕಾರಣವೇನು?

ಪತ್ರಿಕಾ ಗೋಷ್ಠಿಯಲ್ಲಿ ಸುರೇಂದ್ರ ಶೆಟ್ಟಿ ಸದಸ್ಯರು ಕೆಪಿಸಿಸಿ, ಸದಾಶಿವ ದೇವಾಡಿಗ ಅದ್ಯಕರು ಬ್ಲಾಕ್ ಕಾಂಗ್ರೇಸ್ ಕಾರ್ಕಳ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು