News Karnataka Kannada
Monday, April 29 2024
ಉಡುಪಿ

ಒಳಚರಂಡಿ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಕಾರ್ಕಳ ಪುರಸಭೆಯಲ್ಲಿ ಪ್ರತಿಪಕ್ಷ ಸದಸ್ಯರ ಆರೋಪ

Opposition members in Karkala municipality allege cosmic corruption in sewerage scheme
Photo Credit : News Kannada

ಕಾರ್ಕಳ: ಹೊಸ ಹೊಸ ಯೋಜನೆಗಳು ಜಾರಿಗೊಂಡರೂ, ಸಮರ್ಪಕವಾಗಿ ಅನುಷ್ಟಾನಗೊಳ್ಳದೇ ಇದ್ದ ಪರಿಣಾಮವಾಗಿ ಮತ್ತಷ್ಟು ಸಮಸ್ಸೆಗಳನ್ನು ಕಾರ್ಕಳದ ನಾಗರಿಕರು ಎದುರಿಸಬೇಕಾಗಿದೆ. ಇದಕ್ಕೆ ಇಂಬು ನೀಡುವಂತೆ ಕೋಟ್ಯಾಂತರ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಒಳಚರಂಡಿ ಯೋಜನೆಯೂ ಅಂತಿಮ ಹಂತಕ್ಕೆ ತಲುಪುವ ಮುನ್ನವೇ ಅದರಿಂದ ಹೊರಸೋಸುವ ಮಲಮಿಶ್ರತ ತ್ಯಾಜ್ಯ ನೀರು ೧೦ಕ್ಕೂ ಮಿಕ್ಕಿದ ಬಾವಿಗಳಿಗೆ ಲೀನವಾಗಿದೆ. ದಿನಬಳಕೆಗೆ ಅದೇ ಬಾವಿಯ ನೀರನ್ನು ಉಪಯೋಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾದುದರಿಂದ ನಾಗರಿಕರಲ್ಲಿ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ ಎಂದು ಪುರಸಭಾ ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷ ಸದಸ್ಯರು ಆಡಳಿತದ ವಿರುದ್ಧ ಹರಿಹಾಯ್ದರು.

ಪುರಸಭಾ ಅಧ್ಯಕ್ಷೆ ಸುಮ ಕೇಶವ ಅಧ್ಯಕ್ಷತೆಯಲ್ಲಿ ಮಂಗಳವಾರ ಬೆಳಿಗ್ಗೆ ಪುರಸಭಾ ಸಾಮಾನ್ಯ ಸಭೆ ಆರಂಭಗೊಳ್ಳುತ್ತಿದ್ದಂತೆ ಪ್ರತಿಪಕ್ಷ ಸದಸ್ಯ ಶುಭದರಾವ್ ಮೇಲಿನ ವಿಚಾರವನ್ನು ಕಲಾಪದ ಮುಂದಿಟ್ಟರು. ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧಿಕಾರಿಗಳು, ಇಂಜಿನಿಯರ್ ಹಾಗೂ ಕಂಟ್ರಾಕ್ಟರ್‌ದಾರ ಬೇಜವಾಬ್ದಾರಿಯಿಂದಾಗಿ ಸಮಸ್ಸೆ ಎದುರಾಗಿದೆ.

ಯೋಜನೆ ಸಮರ್ಪಕವಾಗಿರದ ಹಿನ್ನಲ್ಲೆಯಿಂದಾಗಿ ಮಳೆಕಾಲದಲ್ಲಿ ಒಳಚರಂಡಿಯ ತ್ಯಾಜ್ಯ ನೀರು ಚೇಂಬರ್ ಮೂಲಕ ಹೊರಚಿಮ್ಮಿ ಸಾರ್ವಜನಿಕ ರಸ್ತೆ ಮೂಲಕ ಹರಿದು ಹೋಗುತ್ತಿತ್ತು. ಕಾಮಗಾರಿಯ ಗುಣಮಟ್ಟವನ್ನು ಕಾಪಾಡುವ ನಿಟ್ಟಿನಲ್ಲಿ ಒಳಚರಂಡಿಯ ತಳಭಾಗದಲ್ಲಿ ಪೈಪ್ ಜೋಡಿಸಿ ಅದನ್ನು ತೆರೆದ ತೋಡಿಗೆ ಸಂಪರ್ಕಿಸಿದುದರಿಂದ ಅದು ಪರಿಸರದ ಬಾವಿಗಳಿಗೆ ತ್ಯಾಜ್ಯ ನೀರು ಲೀನವಾಗುತ್ತಿರುವುದು ಸಮಸ್ಸೆಗೆ ಮೂಲ ಕಾರಣವಾಗಿದೆ.

ಇದೇ ಪರಿಸರದಲ್ಲಿ ಪಡುತಿರುಪತಿ ದೇವಳವೂ ಇದೇ. ಸ್ವಚ್ಚತೆಗೆ ಒತ್ತು ನೀಡದೇ ಧಾರ್ಮಿಕ ಕಾರ್ಯಕ್ಕೆ ದಕ್ಕೆ ಯಾಗುತ್ತಿದೆ. ಇದೇ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ತಪಿಸ್ಥರರ ವಿರುದ್ಧ ಕೇಸುದಾಖಲಿಸಬೇಕು ಎಂದು ಪುರಸಭಾ ಆಡಳಿತದ ವಿರುದ್ಧ ಆರೋಪದ ಸುರಿಮಳೆ ಗೈದರು.

ಇದಕ್ಕೆ ಪುಷ್ಟಿ ನೀಡಿ ಮಾತನಾಡಿದ ಪುರಸಭಾ ಪ್ರತಿಪಕ್ಷ ನಾಯಕ್ ಅಶ್ಪಕ್ ಅಹಮ್ಮದ್ ಮಾತನಾಡಿ, ಒಳಚರಂಡಿ ಯೋಜನೆಯ ಖರ್ಚು ವೆಚ್ಚದ ಕುರಿತು ಸಂಬAಧ ಪಟ್ಟ ಅಧಿಕಾರಿಗಳು ಇದುವರೆಗೂ ಸಾರ್ವಜನಿಕ ಲೆಕ್ಕ ಪತ್ರ ನೀಡಿಲ್ಲ. ಆ ಯೋಜನೆಗೆ ಕಾರ್ಕಳ ಪುರಸಭೆ ನಾಗರಿಕರು ನೀಡುವ ತೆರಿಗೆ ಹಣವನ್ನು ಪಾವತಿಸಲಾಗುತ್ತಿದೆ. ದಾಖಲೆ ಸಹಿತ ಲೆಕ್ಕಪತ್ರ ನೀಡುವಂತೆ ಇಂಜಿನಿಯರ್ ಅವರನ್ನು ಸಾಮಾನ್ಯ ಸಭೆಯ ಕಲಾಪಕ್ಕೆ ಆಹ್ವಾನಿಸಿದರೆ ನಮಗೆ ಗಿಳಿಪಾಠ ಹೇಳಿ. ಕಲಾಪಕ್ಕೆ ಅಗೌರವ ತೋರುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.

ಪ್ರವಾಸದ್ಯೋಮಕ್ಕೆ ಕುತ್ತು
ಕರಿಯಕಲ್ಲು ಕಾರ್ಕಳವು ಧಾರ್ಮಿಕ, ಐತಿಹಾಸಿಕ ಪ್ರಸಿದ್ಧವಾಗಿದೆ. ದೇಶ ವಿದೇಶಗಳಿಂದ ಪ್ರತಿದಿನ ಅಸಂಖ್ಯಾತರು ಕಾರ್ಕಳಕ್ಕೆ ಅಗಮಿಸುತ್ತಿದ್ದಾರೆ. ಐತಿಹಾಸಿಕ ಗೋಮಟ್ಟಬೆಟ್ಟದ ತಳಭಾಗದಲ್ಲಿ ಇದ್ದ ಸಾರ್ವಜನಿಕ ಶೌಚಾಲಯಕ್ಕೆ ಬೀಗ ಜಡಿದು ನಾಲ್ಕು ತಿಂಗಳುಗಳೇ ಸಂದಾಯವಾಗಿದೆ. ಪ್ರವಾಸಿಗರು ಹಾಗೂ ಭಕ್ತಾದಿಗಳು ದೇಹ ಭಾದೆ ತೀರಿಸಿಕೊಳ್ಳಲು ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಎಂದು ಕೌನ್ಸಿಲರ್ ವಿನ್ನಿಬೋಲ್ಡ್ ಮೆಂಡೋನ್ಸಾ ಸದನದ ಗಮನಕ್ಕೆ ತಂದರು.

ಇದಕ್ಕೆ ಪೂರಕವಾಗಿ ಮಾತನಾಡಿದ ಅಶ್ಪಕ್ ಅಹಮ್ಮದ್ ಮಾತನಾಡಿ, ಕಾರ್ಕಳ ನಗರದ ಹಲವೆಡೆ ಪ್ರವಾಸಿಗರು ಹಾದು ಹೋಗುತ್ತಾರೆ. ಕೆಲವಡೆ ಶೌಚಾಲಯ ಇದ್ದರೂ, ಅದಕ್ಕೆ ಅಗತ್ಯ ಇರುವು ನೀರಿನ ಸರಬರಾಜು ಹಾಗೂ ಸ್ವಚ್ಚತೆ ಕಾಪಾಡುವಲ್ಲಿ ಆಡಳಿತ ವರ್ಗ ವಿಫಲವಾಗಿದೆ. ಬಂಗ್ಲೆಗುಡ್ಡೆ ಪರಿಸರದರಲ್ಲಿ ಶುಲ್ಕ ಪಾವತಿಸಿ ದೇಹಭಾದೆ ತೀರಿಸಿಕೊಳ್ಳಲು ಶೌಚಾಲಯ ನಿರ್ಮಿಸಿ ವರ್ಷವೇ ಸಂದಿದೆ. ಇದುವರೆಗೆ ಶೌಚಫಿಟ್ ಜೋಡಣೆಯಾಗದೇ ಯೋಜನೆ ಅಪೂರ್ಣಗೊಂಡಿದೆ. ಸ್ವಚ್ಚ ಕಾರ್ಕಳ ಸುಂದರ ಕಾರ್ಕಳ ಪರಿಪಲ್ಪನೆಗೆ ಇದು ಕಪ್ಪುಚುಕ್ಕಿಯಾಗಿದೆ.

ಕುಡಿಯುವ ನೀರಿನ ತಾತ್ವಾರ!
ಕಡುಬೇಸಿಗೆ ಎದುರಾಗುತ್ತಿರುವ ಮುನ್ನವೇ ಪುರಸಭಾ ಕೆಲವೆಡೆಗಳಿಗೆ ಸಮರ್ಪಕವಾಗಿ ಪುಡಿಯುವ ನೀರನ್ನು ಸರಬರಾಜು ಆಗುತ್ತಿಲ್ಲ ಆರೋಪಗಳು ಕೇಳಿಬರುತ್ತಿದೆ.

ಅಗತ್ಯವೆನಿಸಿದ ಕಡೆಗಳಿಗೆ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕವೇ ಕುಡಿಯುವ ನೀರನ್ನು ಸರಬರಾಜು ಮಾಡಬೇಕಾದ ಜವಾಬ್ದಾರಿ ಕಾರ್ಕಳ ಪುರಸಭೆಯದಾಗಿದೆ. ಅದಕ್ಕಾಗಿ ಕೂಡಲೇ ಟೆಂಡರ್ ಕರೆಯಬೇಕೆಂದು ಮಾಜಿ ಅಧ್ಯಕ್ಷೆ ಪ್ರತಿಮಾ ರಾಣೆ ಸಭೆಯಲ್ಲಿ ಪ್ರಸ್ತಾಪಿಸಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು