ಕುಂದಾಪುರ: ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಶ್ರೀ ಅಗಸ್ತೇಶ್ವರ,ಶ್ರೀ ಮಹಾಗಣಪತಿ,ಶ್ರೀ ವಿಶಾಲಾಕ್ಷಿ ಅಮ್ಮನವರ ದೇವಸ್ಥಾನಕ್ಕೆ ಭಕ್ತರೊಬ್ಬರು ಕೊಡ ಮಾಡಿದ ನೂತನ ಬ್ರಹ್ಮರಥವನ್ನು ವೈಭವದ ಮೆರವಣಿಗೆ ಮೂಲಕ ಅದ್ಧೂರಿ ಆಗಿ ಬರಮಾಡಿಕೊಳ್ಳಲಾಯಿತು.
ವಾದ್ಯಗೋಷ್ಠಿ, ಚಂಡವಾದನ ಮೆರವಣಿಗೆಯ ಸೊಬಗನ್ನು ಹೆಚ್ಚಿಸಿತು.ಭಕ್ರರು ಸಮವಸ್ತ್ರ ಧರಿಸಿ ಮೆರವಣಿಗೆಯಲ್ಲಿ ಸಾಗಿದರು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಅರ್ಚಕರು,ಗ್ರಾಮಸ್ಥರು ಉಪಸ್ಥಿತರಿದ್ದರು.