News Karnataka Kannada
Friday, May 03 2024
ಉಡುಪಿ

ಕುಂದಗನ್ನಡ ಅಕಾಡೆಮಿ ರಚನೆಗೆ ನಿರಾಕರಣೆ: ಸುನೀಲ್ ಪದತ್ಯಾಗಕ್ಕೆ ಅಪ್ಪಣ್ಣ ಹೆಗ್ಡೆ ಆಗ್ರಹ

Kundapur Kannada Academy: B Appanna Hegde demands Sunil's resignation
Photo Credit : News Kannada

ಕುಂದಾಪುರ: ಕುಂದಾಪುರ ಕನ್ನಡ ರಚನೆ ಕುರಿತಂತೆ ಯಾವುದೇ ಅಧ್ಯಯನವನ್ನಾಗಲಿ ಈ ಭಾಗದ ಜನಪ್ರತಿನಿಧಿಗಳ ಜೊತೆ ಸಮಾಲೋಚನೆಯನ್ನಾಗಲಿ ನಡೆಸದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಕುಂದಗನ್ನಡ ಅಕಾಡೆಮಿಯ ಅವಶ್ಯಕತೆ ಇಲ್ಲ ಎನ್ನಔ ನಿರಂಕುಶವಾದವನ್ನು ಮುಂದಿಟ್ಟಿದ್ದಾರೆ. ಕುಂದಗನ್ನಡಿಗರ ಭಾವನೆಗಳಿಗೆ ಸ್ಪಂದನೆ ಕೊಡದಿರುವ ಅವರು ಪದತ್ಯಾಗ ಮಾಡಲಿ ಎಂದು ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

ಅತ್ಯಂತ ಕಡಿಮೆ ಪ್ರಮಾಣದ ಜನರು ಮಾತನಾಡುವ ಭಾಷೆಗೆ ಅಕಾಡೆಮಿಗಳಿವೆ.ಹಾಗಿದ್ದ  25-30 ಲಕ್ಷ ಜನ ಮಾತಾಡುವ ಕುಂದಾಪ್ರ ಕನ್ನಡವನ್ನು ಅವಗಣಿಸಿದ್ದು ಇಲ್ಲಿಗೆ ಮಾಡಿದ ಅವಮಾನ ಹೇಳಿಕೆ ಕೊಡುವ ಮೊದಲು ಸಚಿವರು ಯೋಚಿಸಬೇಕಿತ್ತು.

ರಾಜ್ಯದ ವಿವಿಧ ಗಡಿಭಾಗಗಳಲ್ಲಿ, ನೆರೆರಾಜ್ಯದ ಭಾಷೆಗಳ ಪ್ರಭಾವವಿರುವ ಕನ್ನಡ ಮಾತಾಡುತ್ತಾರೆ. ಆದರೆ ಕುಂದಾಪ್ರ ಕನ್ನಡ ಅಂತಹ ಯಾವುದೇ ಅನ್ಯಭಾಷಾ ಪ್ರಭಾವವನ್ನು ಹೊಂದಿಲ್ಲ ಎಂದರು.

ಭಾಷಾ ಸಂಶೋಧನೆಗಾಗಿ ಅಕಾಡೆಮಿ ಬೇಕು, ಹಳೆಗನ್ನಡದ ಅನೇಕ ಪದಗಳು ಇಂದಿಗೂ ಉಳಿದಿರುವುದು ಕುಂದಾಪ್ರ ಕನ್ನಡದಲ್ಲಿ, ಕುಂದಗನ್ನಡ ಅಧ್ಯಯನ ಪೀಠ ಮಂಗಳೂರು ವಿ.ವಿ.ಯಲ್ಲಿ ರಚನೆಯಾಗಿದ್ದರೂ‌ ಅನುದಾನವೂ ಇನ್ನೂ ಅನುಷ್ಠಾನವೂ ಇಲ್ಲ ಎಂದಾಗಿದೆ.

ಈಗ ಆಕಾಡೆಮಿಯೂ ಇಲ್ಲ ಎನ್ನುವ ಮೂಲಕ ನಮ್ಮನ್ನು ಕಡೆಗಣಿಸಲಾಗಿದೆ.ನಮಗೆ ನ್ಯಾಯ ದೊರೆಯದೇ ಹೋದರೆ ಹೋರಾಟ ಸಿದ್ಧ ಎಂದಿದ್ದಾರೆ.

ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಉಮೇಶ್ ಪುತ್ರನ್, ಕುಂದಪ್ರಭ ಸಂಸ್ಥೆಯ ಯು.ಎಸ್ ಶೆಣೈ,ಬಂಟರ ಯಾನೆ ನಾಡವರ ಸಂಘದ ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ, ಕುಂದಾಪುರ ಜಿಲ್ಲಾ ಹೋರಾಟ ಸಮಿತಿ ಸಂಚಾಲಕ ಮುಂಬಾರು ದಿನಕರ ಶೆಟ್ಟಿ, ರತ್ನಾಕರ ಶೆಟ್ಟಿ,ಗಣಪತಿ ಶ್ರೀಯಾನ್, ವೆಂಕಟೇಶ ಪೈ ಉಪಸ್ಥಿತರಿದ್ದರು.

ವಿಧಾನ ಪರಿಷತ್ ನಲ್ಲಿ ಚರ್ಚೆ:ವಿಧಾನ ಪರಿಷತ್ ಸಭೆಯಲ್ಲಿ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ  ಶೂನ್ಯವೇಳೆಯಲ್ಲಿ ಕುಂದಾಪುರ ಕನ್ನಡ ಭಾಷಾ ಅಕಾಡೆಮಿ ಸ್ಥಾಪನೆಗೆ ಆಗ್ರಹಿಸಿದ್ದರು.

ಕಾಂಗ್ರೆಸ್ ಪಕ್ಷದ ಮುಖಂಡ ಬಿ.ಕೆ.ಹರಿಪ್ರಸಾದ್‌ ಕೂಡಾ ಆಕಾಡೆಮಿ ರಚನೆಗೆ ಬೆಂಬಲ ನೀಡಿದ್ದರು. ಆದರೆ ಸಚಿವರು, ಕರ್ನಾಟಕದಲ್ಲಿ ಕಲಬುರಗಿ ಭಾಗದ ಕನ್ನಡ,ಧಾರವಾಡ ಭಾಗದ ಕನ್ನಡ,ಮೈಸೂರು ಭಾಗದಲ್ಲಿ ಆಡುವ ಕನ್ನಡ, ಕರಾವಳಿ ಭಾಗದ ಕನ್ನಡ,ಮಧ್ಯ ಕರ್ನಾಟಕದ ಕನ್ನಡ ಭಾಷೆಯಲ್ಲಿ ವಿಭಿನ್ನತೆಯನ್ನು ಹೊಂದಿರುವ ಕನ್ನಡಕ್ಕೆ ಕುಂದಾಪುರ ಪ್ರತ್ಯೇಕ ಕನಡ ಆಕಾಡೆಮಿ ಸ್ಥಾಪಿಸುವುದು ಕನ್ನಡ ಭಾಷಾ ಸಮಗ್ರತೆಯ ದೃಷ್ಟಿಯಿಂದ ಸೂಕ್ತವಲ್ಲ ಎಂದು ಬಿಖಿತ ಉತ್ತರ ನೀಡಿದ್ದರು.

ವಿಧಾನ ಪರಿಷತ್ ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಕುಂದಗನ್ನಡ ಅಕಾಡೆಮಿಯ ಅಸ್ತಿತ್ವದ್ದ ಬಗ್ಗೆ ವಿರುದ್ದವಾಗಿ ಮಾತನಾಡಿದ್ದರಿಂದ ಅವರ ಹೇಳಿಕೆ ಕುಂದಾಪುರದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.

ಕುಂದಾಪುರ ಅಕಾಡೆಮಿ ಸ್ಥಾಪನೆ ಬಗ್ಗೆಯ ವಿಷಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾವು ಪಡೆದುಕೊಳ್ಳಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು