News Karnataka Kannada
Saturday, May 04 2024
ಉಡುಪಿ

ಕಾರ್ಕಳ: 18ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಡಾ ಯು.ಬಿ. ರಾಜಲಕ್ಷ್ಮೀ ಆಯ್ಕೆ

Udupi
Photo Credit : News Kannada

ಕಾರ್ಕಳ: ಫೆಬ್ರವರಿ 12ರಂದು ನಡೆಯಲಿರುವ ಕಾರ್ಕಳ ತಾಲೂಕು 18ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕರ್ನಾಟಕ ರಾಜ್ಯೋೋತ್ಸವ ಪ್ರಶಸ್ತಿ ಪುರಸ್ಕೃತೆ, ತರಂಗ ವಾರ ಪತ್ರಿಕೆಯ ಸಂಪಾದಕಿ ಡಾ ಯು. ಬಿ. ರಾಜಲಕ್ಷ್ಮೀ ಅವರನ್ನು ಉಡುಪಿ ಜಿಲ್ಲೆಯ ಅಧ್ಯಕ್ಷರಾದ ನೀಲಾವರ ಸುರೆಂದ್ರ ಅಡಿಗರ ಅಧ್ಯಕ್ಷತೆಯ ಜಿಲ್ಲಾ ಸಮಿತಿಯು ಸರ್ವಾನುಮತದಿಂದ ಆಯ್ಕೆ ಮಾಡಿದೆ‌.

ಪತ್ರಿಕೋದ್ಯಮ, ಸಾಹಿತ್ಯ, ಲಲಿತಕಲಾ ಕ್ಷೇತ್ರದಲ್ಲಿ ಅಹರ್ನಿಶಿ ದುಡಿಯುತ್ತಿರುವ ಇವರು ಕಳೆದ ಸುಮಾರು ನಾಲ್ಕು ದಶಕಗಳಿಂದ ಸಮಗ್ರ ಕುಟುಂಬಕ್ಕೆ ಸಮೃದ್ಧ ಸಾಪ್ತಾಾಹಿಕ ತರಂಗ ವಾರಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪತ್ರಿಕಾ ಕ್ಷೇತ್ರದಲ್ಲಿ ಸುಮಾರು 38 ವರ್ಷಗಳ ಅನುಭವ. ಮೈಸೂರು ವಿಶ್ವವಿದ್ಯಾಾಲಯದ ಎಂ. ಎ. ಪದವೀಧರೆ ಪತ್ರಿಕೋದ್ಯಮದಲ್ಲಿ ಹಂಪಿ ವಿಶ್ವವಿದ್ಯಾಾಲಯದಿಂದ ಡಾಕ್ಟರೇಟ್ ಆಫ್ ಲಿಟರೇಚರ್ ಪದವಿ ಪಡೆದವರು.

ನಾಡಿನ ಪ್ರಸಿದ್ಧ ದಿನಪತ್ರಿಕೆಗಳಾದ ಮುಂಗಾರು, ಹೊಸದಿಗಂತ, ಟೈಮ್ಸ್ ಆಫ್ ಡೆಕ್ಕನ್‌ಗಳಲ್ಲಿ ವರದಿಗಾರ್ತಿಯಾಗಿ ಸೇವೆ ಸಲ್ಲಿಸಿದ್ದಾಾರೆ. 1987ರಲ್ಲಿ ಪ್ರತಿಷ್ಠಿತ ಮಣಿಪಾಲ ತರಂಗ ವಾರಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಸೇರಿ, ಬಳಿಕ ಭಡ್ತಿ ಪಡೆದು ಸಂಪಾದಕರಾಗಿದ್ದಾರೆ. ತರಂಗ ಬಳಗದ ಮಕ್ಕಳ ಪತ್ರಿಕೆ ತುಂತುರು ಪಾಕ್ಷಿಕದ ಸಮಗ್ರ ಜವಾಬ್ದಾರಿಯ ನಿರ್ವಹಣೆ ಮಾಡಿ ಬರಹದ ಜತೆ ನಿರ್ವಹಣೆಯಲ್ಲಿ ಸೈ ಎನ್ನಿಸಿಕೊಂಡವರು. ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯೆಯಾಗಿ 2012-2015ರ ವರೆಗೆ ಸೇವೆ ಸಲ್ಲಿಸಿದ್ದಾಾರೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಂಬಂಧಪಟ್ಟ ಹಲವಾರು ಸಂಘ ಸಂಸ್ಥೆಗಳ ಸ್ಥಾಪಕರಾಗಿ, ಪದಾಧಿಕಾರಿಗಳಾಗಿ ಸಂಘಟನಾ ಚಾತುರ‌್ಯವನ್ನು ಸಾಬೀತು ಪಡಿಸಿದ್ದಾರೆ.

ಬಹು ಜನಪ್ರಿಯ ಕೃತಿ ಉಡುಪಿ ಅಡುಗೆ, ನೂಪುರ, ಶಂಖನಾದ ಮೊದಲಾದ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾಾರೆ. ಅಂದರಿಗೆಂದೇ ಉಡುಪಿ ಅಡುಗೆ ಪುಸ್ತಕದ ಬ್ರೈಲ್ ಆವೃತ್ತಿಯನ್ನು ಮೊತ್ತಮೊದಲು ಹೊರತಂದು ನೂತನ ದಾಖಲೆ ಸೃಷ್ಟಿಸಿದ್ದಾರೆ. ತುಲಾ ಪ್ರಕಾಶನದ ನಿರ್ವಹಣೆ, ಫೋಟೋಗ್ರಫಿ, ವಿಡಿಯೋಗ್ರಫಿ, ಪ್ರವಾಸ ಹವ್ಯಾಸ, ಸಾಕ್ಷ್ಯಚಿತ್ರಗಳ ನಿರೂಪಣೆ, ನಿರ್ದೇಶನ ಜೊತೆಗೆ ಮಂಗಳೂರು ಆಕಾಶವಾಣಿಯ ಬಿಹೈಗ್ರೇಡ್ ನಾಟಕ ಕಲಾವಿದೆಯಾಗಿ ಸುಮಾರು 250ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದವರು.

ಬಾನುಲಿಗಾಗಿ ಅನೇಕ ರೂಪಕಗಳ ಪ್ರಸ್ತುತಿ, ವೈವಿಧ್ಯಮಯ ಚಟುವಟಿಕೆ ಜತೆಗೆ ಹಾರ್ಮೋನಿಯಂ, ವಯೋಲಿನ್, ವೀಣೆ ನುಡಿಸುವುದರಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಅಗ್ರಗಣ್ಯ ಸಂಗೀತ ಗುರುಗಳ ಶಿಷ್ಯೆಯಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ, ಭರತನಾಟ್ಯ ಪ್ರದರ್ಶನ ನೀಡಿರುವ ಬಹಮುಖ ಪ್ರತಿಭೆಯುಳ್ಳವರು. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯ ಅಕಾಡೆಮಿ ಪ್ರಶಸ್ತಿ, ಮಂತ್ರಾಲಯದ ಸುಜಯಶ್ರೀ ಪ್ರಶಸ್ತಿ, ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯದ ಎಸ್‌ಎಸ್‌ಎಫ್ ಉಪ್ಪಿನ ಅತ್ಯುತ್ತಮ ಪತ್ರಕರ್ತೆ ಪ್ರಶಸ್ತಿ ನಾಡಿನ ಖ್ಯಾತ ಪತ್ರಕರ್ತರಾದ ಪಾಟೀಲ ಪುಟ್ಟಪ್ಪ ಅವರ ಹೆಸರಿನಲ್ಲಿ ಸಾಧಕ ಪತ್ರಕರ್ತರಿಗೆಂದೇ ನೀಡುವ ಪಾಟೀಲ ಪುಟ್ಟಪ್ಪ ಪ್ರಶಸ್ತಿ ಖಾದ್ರಿ ಶ್ಯಾಮಣ್ಣ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿ ಗೌರವ ಪುರಸ್ಕಾಾರಗಳನ್ನು ಪಡೆದಿದ್ದಾರೆ. ಅಧ್ಯಯನ, ಬರವಣಿಗೆಯ ಕೌಶಲ ಸಿದ್ಧಿಯಿಂದ ಜನಮನ್ನಣೆ ಪಡೆದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು