News Karnataka Kannada
Thursday, May 02 2024
ಉಡುಪಿ

 ಕಾರ್ಕಳ: ಚುನಾವಣೆ ವೆಚ್ಚಕ್ಕೆ ಹಣ ನೀಡುವಂತೆ ಮತದಾರರ ಮುಂದೆ ಬೇಡಿಕೆಯಿಟ್ಟ ಮುತಾಲಿಕ್‌

'Panchajanya', muthalik's organising office in Karkala, inaugurated
Photo Credit : News Kannada

ಕಾರ್ಕಳ: ಹಿಂದುತ್ವದ ಉಳಿವಿಗಾಗಿ ಕಾರ್ಕಳ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುತ್ತಿದ್ದೇನೆ. ನನಗೆ ವೋಟಿನ ಜೊತೆ ನೂರರ ನೋಟು ಕೊಡಿ. ನನ್ನಲ್ಲಿ ಯಾವುದೇ ಬ್ಯಾಂಕ್ ಖಾತೆಗಳಿಲ್ಲನಾನೊಬ್ಬ ಸನ್ಯಾಸಿ, ಹಣಬಲವಿಲ್ಲ. ಕಾರ್ಯಕರ್ತರೆ ನನ್ನ ಆಸ್ತಿ. ಪ್ರಾಮಾಣಿಕತೆ ಹಿಂದುತ್ವವೆ ನನಗೆ ಶ್ರಿರಕ್ಷೆ . ನನ್ನ ಮತಪ್ರಚಾರಕ್ಕೆ ಕಾರ್ಯಕರ್ತರ ಖರ್ಚಿಗೆ ಹಣದ ಸಹಕಾರ ಕೊಡಿ. ನಾನು ಅದರ ಋಣವನ್ನು ತೀರಿಸಲು ಬದ್ಧನಿದ್ದೇನೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.

ಅವರು ಕಾರ್ಕಳ ಪರಪುನಲ್ಲಿ ನೂತನ ಕಾರ್ಯಾಲಯ ಪಂಚಜನ್ಯಾ ಉದ್ಘಾಟನೆ ಸಂದರ್ಭದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮಲೆನಾಡು ಭಾಗಗಳಲ್ಲಿ ಮಂಗಗಳ ಕಾಟವನ್ನು ತಪ್ಪಿಸಲು ಮಂಕಿಪಾರ್ಕ್ನಿರ್ಮಾಣಕ್ಕೆ ಒತ್ತು , ಅಡಿಕೆ ಬೆಳೆಗಾರರಿಗೆ ಎಲೆಚುಕ್ಕಿ ರೋಗಕ್ಕೆ ಪರಿಹಾರ, ಚರ್ಮಗಂಟು ರೋಗದಿಂದ ಮೃತಪಟ್ಟ ಗೋವುಗಳಿಗೆ ಪರಿಹಾರ ನೀಡಲು ಸರಕಾರವನ್ನು ಆಗ್ರಹಿಸಿದರು. ಕಾರ್ಕಳ ವಿಧಾನ ಕ್ಷೇತ್ರದಲ್ಲಿ ಏಳು ಹೋಬಳಿಗಳಿದ್ದು ಸರಕಾರದ ವತಿಯಿಂದ ಗೋಶಾಲೆ ನಿರ್ಮಾಣ ಮಾಡಲಾಗುವುದು. ಗೋಕಳ್ಳತನ ಮಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಲು ಬದ್ಧರಾಗಿದ್ದೇವೆ ಎಂದ ಅವರು ವೆಲೆಂಟೈನ್ಸ್ ಡೇ ಯನ್ನು ಪ್ರೇಮಿಗಳ ದಿನದ ಬದಲಾಗಿ ಗೋವನ್ನು ಅಪ್ಪುವ ದಿನವನ್ನಾಗಿ ಆಚರಿಸಲು ಕರೆ ನೀಡಿದರು.

ಕೇಂದ್ರ ಸರ್ಕಾರದ ಅನುದಾನದಿಂದ ರಾಜ್ಯದ ಮುಖ್ಯ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಅದಕ್ಕಾಗಿ ಸಂಸದೆ ಶೋಭ ಕರಂದ್ಲಾಜೆ ಅವರಿಗೆ ಅಭಿನಂದನೆ ಸಲ್ಲಿಸಿದರು. ರಾಜ್ಯ ಸರ್ಕಾರದ ವತಿಯಿಂದ ರಸ್ತೆಗಳಿಗೆ ಬಂದ ಅನುದಾನದ ಬಗ್ಗೆ ಸಚಿವ ಸುನೀಲ್ ಕುಮಾರ್ ಬಹಿರಂಗಗೊಳಿಸಬೇಕು ಎಂದು ಮುತಾಲಿಕ್ ಆಗ್ರಹಿಸಿದರು.

ಮೂರು ವರ್ಷಗಳಿಂದ ಕಾರ್ಕಳ ತಾಲೂಕು ಗ್ರಂಥಾಲಯ ಉದ್ಘಾಟನೆಗೊಂಡಿಲ್ಲ, ಹೆಬ್ರಿ ಸರಕಾರಿ ಆಸ್ಪತ್ರೆಯನ್ನು ತಾಲೂಕು ಆಸ್ಪತ್ರೆಯಾಗಿ ಮಾರ್ಪಡಿಸಬೇಕು. ನಗರದ ಮುಖ್ಯರಸ್ತೆಗಳಷ್ಟೇ ಅಭಿವೃದ್ಧಿಗೊಂಡಿವೆ. ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕಿದೆ ಎಂದರು.

ರಾಜ್ಯದ ೫ ಕಡೆಗಳಲ್ಲಿ ಸ್ವಾಮೀಜಿಗಳು ಸೇರಿದಂತೆ ಪ್ರಭಾವಿಗಳು ಸ್ಪರ್ಧೆಗೆ ಇಳಿಯಲಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರಗಳು ಹಾಗೂ ವ್ಯಕ್ತಿಗಳ ಹೆಸರನ್ನು ನಾನೇ ಬಹಿರಂಗಗೊಳಿಸುವೆ. ಉಳ್ಳಾಲದಲ್ಲಿ ಸ್ಪರ್ಧಿಸುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುತಾಲಿಕ್, ನನ್ನ ಅಯ್ಕೆ ಕಾರ್ಕಳ. ಅದೇ ಫೈನಲ್ ಎಂದರು.

ರಾಜ್ಯ ರಾಜಕಾರಣದಲ್ಲಿ ಸಿಡಿ ರಾಜಕಾರಣ ಶೋಭೆ ತರುವಂಥದಲ್ಲ. ಬೇರೆ ವ್ಯಕ್ತಿಗಳ ಬಗ್ಗೆ ಅಪಹಾಸ್ಯ ಮಾಡಬಾರದು. ತನ್ನ ಸಾಧನೆಯನ್ನು ಪ್ರಾಮಾಣಿಕವಾಗಿ ತೋರಿಸಿ ನಿಷ್ಠೆ ಯಿಂದ ಗೆಲ್ಲುವಂತೆ ಕರೆನೀಡಿದರು.

ಕಲಬುರಗಿಯ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಇತ್ತೀಚೆಗೆ ನಡೆದ ಧರ್ಮ ದಂಗಲ್ , ಹಿಜಾಬ್ ವಿಚಾರಗಳು ,ಅಜಾನ್ ಸಮಸ್ಯೆಗಳು, ಗೋಕಳ್ಳತನ, ಗೋಹತ್ಯೆಗಳಲ್ಲಿ ನಡೆದ ಹೋರಾಟಗಳಲ್ಲಿ ಕೂಡ ಸಚಿವ ಸುನಿಲ್ ಕುಮಾರ್ ಕಾರ್ಯಕರ್ತರಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಿದರು.

ಈ ಭಾಗದಲ್ಲಿ ಅನೇಕ ಹಿಂದೂ ಕಾರ್ಯಕರ್ತರು ಅನೇಕ ಕೇಸ್ ಗಳನ್ನು ಹಾಕಿಸಿಕೊಂಡು ರೌಡಿ ಶೀಟರ್‌ಗಳಾಗಿದ್ದಾರೆ . ಮಂಗಳೂರಿನಲ್ಲಿ ಶಾಸಕರ ಪ್ರಯತ್ನದಿಂದ ಹಿಂದೂ ಕಾರ್ಯಕರ್ತರ ಮೇಲಿನ ರೌಡಿ ಶೀಟರ್ ಪಟ್ಟವನ್ನು ರದ್ದು ಮಾಡಲಾಗಿದೆ. ಆದರೆ ಕಾರ್ಕಳದ ಹಿಂದೂ ಕಾರ್ಯಕರ್ತರಿಗೆ ರೌಡಿ ಶೀಟರ್ ಪಟ್ಟ ರದ್ದು ಮಾಡದೆ ಶೋಷಣೆ ಮಾಡಲಾಗುತಿದೆ. ಅದಕ್ಕೆ ಕಾರಣ ಸಚಿವ ಸುನೀಲ್ ಕುಮಾರ್ ಅವರ ಇಚ್ಛಾಶಕ್ತಿಯ ಕೊರತೆ. ಭಗವಧ್ವಜ ಹಿಡಿದು ವಿಧಾನ ಸಭೆ ಪ್ರವೇಶಿಸಲು ಮುತಾಲಿಕ್ ಅವರನ್ನು ಬೆಂಬಲಿಸಿ ಹುರಿದುಂಬಿಸಿ ಎಂದರು .

ಸುದ್ದಿ ಗೋಷ್ಠಿಯಲ್ಲಿ ವಕೀಲ ಹರೀಶ್ ಅಧಿಕಾರಿ, ಪುರಸಭಾ ಸದಸ್ಯ ಲಕ್ಷಿನಾರಾಯಣ ಮಲ್ಯ , ಶ್ರೀರಾಮ ಸೇನೆ ರಾಜ್ಯದ್ಯಕ್ಷ ಗಂಗಾಧರ್ ಕುಲಕರ್ಣಿ ಮೊದಲಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು