News Karnataka Kannada
Friday, May 03 2024
ಉಡುಪಿ

ಕಾರ್ಕಳ: ಧಾರ್ಮಿಕ ನೆಲೆಯಲ್ಲಿ ಮಾನವೀಯ ಮೌಲ್ಯಕ್ಕೆ ಒತ್ತು

Emphasis on human values on religious grounds
Photo Credit : News Kannada

ಕಾರ್ಕಳ: ಧಾರ್ಮಿಕ ನೆಲಯು ಮಾನವೀಯ ಮೌಲ್ಯತಗಳಿಗೆ ಹೆಚ್ಚಿನ ರೀತಿಯಲ್ಲಿ ಒತ್ತು ನೀಡಲಾಗುತ್ತಿದೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ.

ಕಾರ್ಕಳದ ಐತಿಹಾಸಿಕ ಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಜರಗುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಶುಭ ಸಂದರ್ಭದಲ್ಲಿ ನಿಟ್ಟೆಯ ಮಾತೃಜಾ ಸೇವಾ ಸಿಂಧು ಇವರ ಮುಂದಾಳತ್ವದಲ್ಲಿ ‘ಭವತಿ ಭಿಕ್ಷಾಂ ದೇಹಿ’ ಎಂಬ ವಿಶಿಷ್ಠ ಕಾರ್ಯಕ್ರವೊಂದನ್ನು ಹಮ್ಮಿಕೊಂಡಿದ್ದಾರೆ.

ಉಡುಪಿಯ ಶಂಕರಪುರ ನಿವಾಸಿಯಾಗಿರುವ ಸಚಿನ್ ಮತ್ತು ಸೌಮ್ಯ ದಂಪತಿಗಳ ೦೯ ತಿಂಗಳ ಸಮೀಕ್ಷಾ ಮಗುವಿನ ಹೃದಯದಲ್ಲಿ ರಕ್ತ ಸಂಚಾರದ ತೊಡಗಿಸಿ ಬಲುದೊಡ್ಡ ಸಮಸ್ಸೆ ಎದುರುಗೊಂಡಿದೆ. ಅದಕ್ಕಾಗಿ ಸುಮಾರು ರೂ.೬ ಲಕ್ಷ ವೆಚ್ಚ ತಗಲಲಿದ್ದು, ಭಕ್ತಾದಿಗಳಿಂದ ಸಂಗ್ರಹವಾಗುವ ಮೊತ್ತವನ್ನು ಒಟ್ಟು ಸೇರಿಸಿ ಮಗುವಿನ ಚಿಕಿತ್ಸೆಗಾಗಿ ಭರಸಲು ಮುಂದಾಗಿದೆ ನಿಟ್ಟೆ ಮಾತೃಜಾ ಸೇವಾ ಸಿಂಧು ತಂಡ.

ವಿಶಿಷ್ಠ ರೀತಿಯಲ್ಲಿ ವೇಷ ಭೂಷಣದೊಂದಿಗೆ ಇಬ್ಬರು ವ್ಯಕ್ತಿಗಳು ಭಕ್ತಾದಿಗಳನ್ನು ಆಕರ್ಷಿಸುವಂತ ಸತ್ಕಾರ್ಯಕ್ಕೆ ಮುಂದಾಗಿದ್ದಾರೆ. ಅವರಲ್ಲಿ ಓರ್ವರು ಕಾರ್ಕಳ ವಿಸ್ತೃತ ಬಸ್ ನಿಲ್ದಾಣ ಪರಿಸರದಲ್ಲಿ ಹಾಗೂ ಮತ್ತೊಬ್ಬರು ದೇವಸ್ಥಾನದ ಪರಿಸರದಲ್ಲಿ ಕಂಡುಬದರು. ಸ್ವಯಂ ಖುದ್ದಾಗಿ ಅವರಿಬ್ಬರು ಹಾಗೂ ಅಕ್ಕಪಕ್ಕದಲ್ಲಿ ರಟ್ಟಿನ ಬಾಕ್ಸ್ ಹಿಡಿದು ನಿಂತಿರುವ ಹಲವು ಯುವಕ ಯುವತಿರು ಕಾಣಸಿಗುತ್ತಾರೆ. ರಟ್ಟಿನ ಬಾಕ್ಸ್ಗೆ ನೆರವಿನ ಕುರಿತು ಮಾಹಿತಿಯುಳ್ಳ ಪತ್ರವನ್ನು ಅಂಟಿಸಿಲಾಗಿದೆ.

ತಂಡದ ಸದಸ್ಯರು ಅವಶ್ಯಕತೆಗೆ ಅನುಗುಣವಾಗಿ ವೇಷಪೂಷಣ ಹಾಕಿಕೊಂಡು ಬದಲಿಸುತ್ತಾರೆ.

ಸೂಡಾ, ಕಡಂದಲೆಯಲ್ಲಿ ಶ್ರೀ ಕ್ಷೇತ್ರದಲ್ಲಿ ಸಂಗ್ರಹವಾದ ಮೊತ್ತ ರೂ.೧.೭೩ ಲಕ್ಷ: ಸೂಡಾ ಮತ್ತು ಕಡಂದಲೆ ಶ್ರೀ ಕ್ಷೇತ್ರದಲ್ಲಿ ಇದೇ ರೀತಿಯಲ್ಲಿ ಸಂಗ್ರಹವಾಗಿರುವ ಒಟ್ಟು ಮೊತ್ತ ರೂ.೧.೭೩ ಲಕ್ಷ ಆಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ಸದಸ್ಯರು ಪ್ರತಿ ತಿಂಗಳು ತಮ್ಮಂದಾದ ಮೊತ್ತವನ್ನು ಸಂಘದ ಅಕೌಂಟಿಗೆ ಪಾವತಿಸುತ್ತಿದ್ದಾರೆ.

ಆರೋಗ್ಯ ಚಿಕಿತ್ಸೆಯ ನೆರವಿಗಾಗಿ ಕೋರಿಕೆ ಸಲ್ಲಿಸುವವರ ಪೂರ್ಣ ಮಾಹಿತಿ ಸಂಗ್ರಹಿಸಿದ ಬಳಿಕ ಅರ್ಹ ಫಲಾನುಭವಿಗಳಿಗೆ ನಿಟ್ಟೆಯ ಮಾತೃಜಾ ಸೇವಾ ಸಿಂಧು ಮುಂದಾಗುತ್ತಿದೆ. ನೆರವಿನ ರೂಪದಲ್ಲಿ ಸಂಗ್ರಹವಾಗುವ ಮೊತ್ತವು ಆರ್ಹ ಫಲಾನುಭವಿಗಳ ಚಿಕಿತ್ಸೆ ವಿನಿಯೋಗಿಸಿ ಸತ್ಕಾರ್ಯ ನಡೆಯಲಿ.

ಮಾನವೀಯ ಮೌಲ್ಯಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ: ಮಾನವೀಯ ಮೌಲ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇಂತಹ ಸೇವಾ ಮನೋಭಾವವನ್ನು ಸಮಾಜವು ಒಪ್ಪಿಕೊಳ್ಳುತ್ತದೆ. ಜೊತೆಗೆ ಕಿಂಚಿತ್ತು ನೆರವಿಗೂ ಮುಂದಾಗುತ್ತದೆ ಎಂದು ಸಂಗೀತ ತರಬೇತುದಾರ,ಶಿಕ್ಷಕ ಯೋಗೀಶ್ ಕಿಣಿ ಹೇಳುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು