News Karnataka Kannada
Friday, May 03 2024
ಉಡುಪಿ

ಪವಿತ್ರ ತೀರ್ಥಕ್ಷೇತ್ರ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ತಾಣವೆಂದು ಘೋಷಿಸಿರುವ ಆದೇಶ ರದ್ದುಪಡಿಸಿ

Cancel the order declaring Sammeda Shikharji, the holy pilgrimage site of Jainism in Jharkhand, as a tourist destination
Photo Credit : News Kannada

ಉಡುಪಿ: ಜಾರ್ಖಂಡ್ ನ ಗಿರಡಿ ಜಿಲ್ಲೆಯ ಜೈನ ಧರ್ಮದ ಪವಿತ್ರ ತೀರ್ಥಕ್ಷೇತ್ರ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ತಾಣವೆಂದು ಘೋಷಿಸಿರುವ ಆದೇಶವನ್ನು ಕೂಡಲೇ ರದ್ದುಪಡಿಸಬೇಕು ಎಂದು‌ ಆಗ್ರಹಿಸಿ ಉಡುಪಿ ಜಿಲ್ಲೆಯ ಜೈನ ಸಮುದಾಯದವರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ಜಾರ್ಖಂಡ್ ನ ಸಮ್ಮೇದ ಶಿಖರ್ಜಿಯು ಜೈನ ಧರ್ಮದ ಅನಾದಿ- ಪರಮ ಪಾವನ ಕ್ಷೇತ್ರ. ಇದು ಜೈನರ 20 ತೀರ್ಥಂಕರರು ಮುಕ್ತಿ ಹೊಂದಿದ ಸ್ಥಳವಾಗಿದೆ. ಇದರ ದರ್ಶನಕ್ಕಾಗಿ ವಿಶ್ವದ ನಾನಾಭಾಗಗಳಿಂದ ಜೈನರು ಧಾವಿಸಿ ಬರುತ್ತಿದ್ದಾರೆ. ಬ್ರಿಟಿಷರೂ ಕೂಡ ಇದು ಜೈನರ ಪುಣ್ಯಕ್ಷೇತ್ರ ಎಂದು ಆದೇಶ ನೀಡಿದ್ದಾರೆ. ಆದರೆ ಸ್ವಾತಂತ್ರ್ಯ ನಂತರದ ಬಂದ ಸರಕಾರಗಳು ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾದ ಜೈನರ ತೀರ್ಥಕ್ಷೇತ್ರದ ವಿಚಾರದಲ್ಲಿ ಅಭದ್ರತೆಯ ವಾತಾವರಣ ನಿರ್ಮಿಸುತ್ತಿವೆ. ಜೈನರ ಪುತಿರೋಧದ ನಡುವೆಯೂ ಜಾರ್ಖಂಡ್ ರಾಜ್ಯ ಸರಕಾರ ಈ ಪವಿತ್ರ ಸ್ಥಳವನ್ನು ಪುವಾಸಿತಾಣವನ್ನಾಗಿ ಘೋಷಿಸುವ ಮೂಲಕ ಅಪವಿತ್ರಗೊಳಿಸುವ ಹುನ್ನಾರಕ್ಕೆ ಮುಂದಾಗಿದೆ ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಧರಣಿ ಉದ್ದೇಶಿಸಿ ಮಾತನಾಡಿದ ಜೈನ ಧರ್ಮದ ಮುಖಂಡ ಡಾ. ಆಕಾಶ್ ರಾಜ್ ಜೈನ್ ಅವರು, ಇಡೀ ಜಗತ್ತಿಗೆ ಅಹಿಂಸಾ ಮಾರ್ಗವನ್ನು ಹೇಳಿಕೊಟ್ಟ ಜೈನ ಧರ್ಮದ ಪವಿತ್ರವಾದ ಸ್ಥಳಕ್ಕೆ ಚ್ಯುತಿ ತರುವ ಕೆಲಸಕ್ಕೆ ಸರಕಾರ ಕೈಹಾಕಿದೆ. ಒಮ್ಮೆ ಪವಿತ್ರ ಸಮ್ಮೇದ ಶಿಖರ್ಜಿ ತೀರ್ಥಕ್ಷೇತ್ರವನ್ನು ಪ್ರವಾಸಿ ತಾಣವೆಂದು ಘೋಷಣೆ ಮಾಡಿದರೆ, ಅಲ್ಲಿ ಮದ್ಯಸೇವನೆ, ಮಾಂಸಹಾರ ಹಾಗೂ ಇತರೆ ಚಟುವಟಿಕೆಗಳಿಗೆ ಅವಕಾಶ ನೀಡಿದಂತೆ ಆಗುತ್ತದೆ. ಇದು ಜೈನರ ಅಹಿಂಸಾ ಭಾವನೆಗೆ ಧಕ್ಕೆ ತರುವ ಕೆಲಸ. ಮೊಘಲರ ಕಾಲದಲ್ಲೂ ಈ ಕ್ಷೇತ್ರದಲ್ಲಿ ಮಾಂಸಹಾರ ಸೇವನೆ ಅವಕಾಶ ಇರಲಿಲ್ಲ‌. ಹೀಗಾಗಿ ಇಂತಹ ಪವಿತ್ರ ಕ್ಷೇತ್ರ ವನ್ನು ಉಳಿಸಿಕೊಂಡು ಹೋಗುವುದು ಮುಖ್ಯವಾಗಿದೆ. ಆದ್ದರಿಂದ ಸರಕಾರ ಹೊರಡಿಸಿರುವ ಆದೇಶವನ್ನು ಕೂಡಲೇ ರದ್ದುಪಡಿಸಬೇಕೆಂದು ಅವರು ಆಗ್ರಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು