News Karnataka Kannada
Sunday, May 12 2024
ಉಡುಪಿ

ಬೈಂದೂರು: ಸಾವಿನಲ್ಲೂ ಒಂದಾದ ದಂಪತಿ, ಪತಿಯ ಪಾರ್ಥಿವ ಶರೀರದ ಎದುರೇ ಪ್ರಾಣ ಬಿಟ್ಟ ಪತ್ನಿ

Couple dies in death, wife dies in front of husband's body
Photo Credit : News Kannada

ಬೈಂದೂರು: 50 ವರ್ಷಕ್ಕೂ ಅಧಿಕ ಒಟ್ಟಾಗಿ ಬಾಳಿ‌ ಬದುಕಿ‌ದ ದಂಪತಿ ಸಾವಿನಲ್ಲೂ ಜೊತೆಯಾದ ವಿಲಕ್ಷಣ ಘಟನೆಯೊಂದು ಬೈಂದೂರು ತಾಲೂಕಿನ ಬಿಜೂರಿನಲ್ಲಿ ನಡೆದಿದೆ.

ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದ ಸಣ್ಣ ಬೆಸ್ಕೂರು ಮನೆ ನಿವಾಸಿ 85ವರ್ಷ ಪ್ರಾಯದ ಮುಡೂರ ದೇವಾಡಿಗ ಹಾಗೂ ಅವರ ಪತ್ನಿ 77 ವರ್ಷ ಪ್ರಾಯದ ಕೃಷ್ಣಿ ದೇವಾಡಿಗ ಮೃತ ದಂಪತಿ. ಮುಡೂರ ದೇವಾಡಿಗ ಅವರು ವಯೋಸಹಜ ಅನಾರೋಗ್ಯದಿಂದ ಭಾನುವಾರ ರಾತ್ರಿ ಮೃತಪಟ್ಟಿದ್ದರು. ಕುಟುಂಬದವರು, ಊರಿನವರು ಮನೆಯ ಮುಂದೆ ಸೇರಿದ್ದರು.

ಮನೆಯೊಳಗೆ ಮುಡೂರ ದೇವಾಡಿಗರ ಮೃತದೇಹವನ್ನಿಡಲಾಗಿತ್ತು. ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆಗಳನ್ನು ಮಾಡಲಾಗುತ್ತಿತ್ತು. ಈ‌ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಅವರ ಪತ್ನಿ ಕೃಷ್ಣಿ ದೇವಾಡಿಗ‌ ಅವರು ಪತಿಯ ಪಾರ್ಥಿವ ಶರೀರದ ಎದುರೇ ಕುಸಿದು ಬಿದ್ದಿದ್ದರು. ನೆರೆದವರು ಏನಾಯ್ತು ಎಂಬದನ್ನು ನೋಡುವಷ್ಟರಲ್ಲಿ ಕೃಷ್ಣಿ ದೇವಾಡಿಗ ಕೂಡ ಇಹಲೋಕ ತ್ಯಜಿಸಿದ್ದರು. ಸಂಸಾರದ ನೊಗವನ್ನು ಜೊತೆಯಾಗಿಯೇ ಹೊತ್ತವರು ಸಾವಿನಲ್ಲಿಯೂ ಜೊತೆಯಾಗಿ ಪ್ರಯಾಣಿಸಿದ್ದರು.

ಮುಡೂರ ದೇವಾಡಿಗ ದಂಪತಿ 5 ಜನ ಗಂಡು ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು