News Karnataka Kannada
Tuesday, April 30 2024
ಉಡುಪಿ

ಪಿತ್ರೋಡಿಯಲ್ಲಿ ಕಾರ್ಮಿಕನ ಮೇಲೆ ಪ್ರೇತಾತ್ಮದ ಆವೇಶ

A ghostly rage on a worker in Pitrodi
Photo Credit : News Kannada

ಉಡುಪಿ: ಭೂತ ಪ್ರೇತಗಳು ಈ ಭೂಮಿ ಮೇಲೆ ಇದ್ದಾವೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅಂತಹ ಅಗೋಚರ ಪ್ರೇತಾತ್ಮಗಳ ಭಯಾನಕ ಅನುಭವ ಪಡೆದವರು ಹಲವರಿದ್ದಾರೆ. ಅದೇ ರೀತಿಯ ಘಟನೆ ಉದ್ಯಾವರದಲ್ಲಿ ನಡೆದಿದೆ.

ಕಾರ್ಮಿಕನ ಮೈಮೇಲೆ ಪ್ರೇತಾತ್ಮದ ಆವೇಶ ಬಂದು ದಾಳಿ ನಡೆಸಿದಾಗ ಸಹೋದ್ಯೋಗಿಗಳು ಎದ್ನೋ ಬಿದ್ನೋ ಎಂದು ಓಡಿದ ಘಟನೆ ಜಿಲ್ಲೆಯ ಕಾಪು ತಾಲೂಕಿನ ಉದ್ಯಾವರದ ಪಿತ್ರೋಡಿಯಲ್ಲಿ ನಡೆದಿದೆ. ಕಾರ್ಮಿಕರು ದಿಕ್ಕಾಪಾಲಾಗಿ ಓಡಿದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.

ಮೀನು ಕಟ್ಟಿಂಗ್ ಶೆಡ್​ನಲ್ಲಿ ಉತ್ತರ ಭಾರತದ 10 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಎಲ್ಲರೂ ಒಂದೇ ರೂಮಿನಲ್ಲಿ ನೆಲೆಸಿದ್ದರು. ಆದರೆ, ತಡರಾತ್ರಿ 11 ರ ವೇಳೆಗೆ ಬಿಹಾರ ಮೂಲದ ಕಾರ್ಮಿಕನ ಮೈಮೇಲೆ ಪ್ರೇತಾತ್ಮದ ಆವೇಶವಾಗಿದೆ. ಪ್ರೇತಾತ್ಮ ಆಹ್ವಾನೆ ಆಗುತ್ತಲೇ ಸಹೋದ್ಯೋಗಿಗಳ ಮೇಲೆ ದಾಳಿ ನಡೆಸಿದ್ದಾನೆ. ಹಲ್ಲೆಯಿಂದ ತಪ್ಪಿಸಿಕೊಳ್ಳಲು ರೂಮ್​ನಿಂದ ಒಬ್ಬರ ಮೇಲೆ ಒಬ್ಬರು ಬಿದ್ದು ಎದ್ದು ಓಡಿ ಹೋಗಿದ್ದಾರೆ. ಈ ವೇಳೆ ಕೆಲವರಿಗೆ ಗಾಯಗಳಾಗಿವೆ.

ಈ ಬಗ್ಗೆ ದೆವ್ವ ಆಹ್ವಾನೆಗೆ ಒಳಗಾದ ಕಾರ್ಮಿಕನೇ ಹೇಳಿಕೆ ನೀಡಿದ್ದಾರೆ. ನಾವು ಮಾರಿ ಕಟ್ಟೆಯ ಬಳಿ ಬಾಯಲ್ಲಿ ವಿಮಲ್ ಹಾಕಿಕೊಂಡು ಅಲ್ಲಿದ್ದ ಕುರ್ಚಿಯಲ್ಲಿ ಕುಳಿತು ಮೊಬೈಲ್ ನೋಡುತ್ತಿದ್ದೆವು.

ಏಕಾಏಕಿ ನನ್ನ ಸುತ್ತ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿತು. ನಾನು ಭಯದಿಂದ ಕೂಗಿ ಕೊಳ್ಳುತ್ತಾ ಓಡಿದೆ ಮುಂದೇನಾಯ್ತು ಎಂಬ ಪರಿವೆ ನನಗೆ ಆ ಸಮಯದಲ್ಲಿ ಇಲ್ಲದೆ ಹೋಯಿತು ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು