ಉಡುಪಿ: ಶ್ರೀಕೃಷ್ಣಮಠಕ್ಕೆ ಶನಿವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರು ಭೇಟಿ ನೀಡಿ, ದೇವರ ದರುಶನ ಪಡೆದರು.
ಈ ಸಂದರ್ಭ ಪರ್ಯಾಯ ಪೀಠಾಧಿಪತಿ ಶ್ರೀವಿದ್ಯಾಸಾಗರತೀರ್ಥರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು.
ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್, ಉಡುಪಿ ತಹಶೀಲ್ಧಾರ್ ಅರ್ಚನಾ ಭಟ್, ಪರ್ಯಾಯ ಮಠದ ದಿವಾನ ವರದರಾಜ ಭಟ್, ಪೇಜಾವರ ಮಠದ ದಿವಾನ ರಘುರಾಮ ಆಚಾರ್, ವಾಸುದೇವ ಪೆರಂಪಳ್ಳಿ ಉಪಸ್ಥಿತರಿದ್ದರು.