News Karnataka Kannada
Sunday, April 28 2024
ಮಂಗಳೂರು

ಎಸ್.ಡಿ.ಎಂ ಕಾಲೇಜಿನಲ್ಲಿ ಸ್ಥಳೀಯ ಮಾಧ್ಯಮ ಕುರಿತು ಕಾರ್ಯಾಗಾರ

ಸ್ಥಳೀಯ ಮಟ್ಟದಿಂದ ಜಾಗತಿಕ ನೆಲೆಯಲ್ಲಿ ವಿಸ್ತಾರಗೊಳ್ಳುವ ಸಾಧ್ಯತೆಗಳೊಂದಿಗಿನ ಮಾದರಿಯ ಆಧಾರದಲ್ಲಿ ಸಮೂಹ ಮಾಧ್ಯಮಗಳ ಪ್ರಭಾವಕ್ಕೆ ಹೊಸ ಆಯಾಮಗಳನ್ನು ಸೇರ್ಪಡೆಗೊಳಿಸಬೇಕಿದೆ ಎಂದು ಸುದ್ದಿ ಸಮೂಹದ ಅಧ್ಯಕ್ಷ, 'ಸುದ್ದಿ ಬಿಡುಗಡೆ' ಪತ್ರಿಕೆಯ ಸಂಪಾದಕಡಾ.ಯು.ಪಿ.ಶಿವಾನಂದ ಅಭಿಪ್ರಾಯಪಟ್ಟರು.
Photo Credit : News Kannada

ಉಜಿರೆ: ಸ್ಥಳೀಯ ಮಟ್ಟದಿಂದ ಜಾಗತಿಕ ನೆಲೆಯಲ್ಲಿ ವಿಸ್ತಾರಗೊಳ್ಳುವ ಸಾಧ್ಯತೆಗಳೊಂದಿಗಿನ ಮಾದರಿಯ ಆಧಾರದಲ್ಲಿ ಸಮೂಹ ಮಾಧ್ಯಮಗಳ ಪ್ರಭಾವಕ್ಕೆ ಹೊಸ ಆಯಾಮಗಳನ್ನು ಸೇರ್ಪಡೆಗೊಳಿಸಬೇಕಿದೆ ಎಂದು ಸುದ್ದಿ ಸಮೂಹದ ಅಧ್ಯಕ್ಷ, ‘ಸುದ್ದಿ ಬಿಡುಗಡೆ’ ಪತ್ರಿಕೆಯ ಸಂಪಾದಕಡಾ.ಯು.ಪಿ.ಶಿವಾನಂದ ಅಭಿಪ್ರಾಯಪಟ್ಟರು.

ಉಜಿರೆಯ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಮತ್ತು ಪದವಿ ಅಧ್ಯಯನ ವಿಭಾಗಗಳು ಮೀಡಿಯಾ ಅಲ್ಯೂಮ್ಮಿ ಅಸೋಸಿಯೇಷನ್ ಆಫ್ ಮಂಗಳಗಂಗೋತ್ರಿ (ಮಾಮ್) ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ‘ಸ್ಥಳೀಯ ಮಾಧ್ಯಮ: ಕಾರ್ಯನಿರ್ವಹಣೆ ಮತ್ತು ಸುಸ್ಥಿರತೆ’ ಕುರಿತ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ಥಳೀಯ ಮಟ್ಟದಿಂದ ಜಾಗತಿಕ ಮಟ್ಟದಲ್ಲಿ ನೆಲೆನಿಲ್ಲುವ ಮಾಧ್ಯಮ ಪ್ರಯತ್ನಗಳು ವಿಶಿಷ್ಠ ಪ್ರಯೋಗಗಳಾಗಿ ಗಮನ ಸೆಳೆದಿವೆ. ಮಹಾತ್ಮಾ ಗಾಂಧಿ ಅವರ ಪತ್ರಿಕಾ ಪ್ರಯೋಗಗಳು ಇಂಥ ಸಾಧ್ಯತೆಗಳೊಂದಿಗೆ ಗುರುತಿಸಿಕೊಂಡಿವೆ. ಸ್ಥಳೀಯ ಅಗತ್ಯಗಳನ್ನು ದೃಷ್ಟಿಯಲ್ಲಿರಿಸಿಕೊಂಡು ರೂಪಿತವಾಗುವ ಮಾಧ್ಯಮಗಳ ಸ್ವರೂಪ ಕ್ರಮೇಣ ತನ್ನ ಪ್ರಭಾವ ವ್ಯಾಪ್ತಿಯನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಿಕೊಳ್ಳುವ ಅಗಾಧತೆಯನ್ನು ಹೊಂದಿರುತ್ತದೆ. ಈ ಮಾದರಿಯನ್ನು ಅನ್ವಯಿಸಿ ಕೊಂಡಾಗ ನಿರೀಕ್ಷಿತ ಯಶಸ್ಸು ದೊರೆಯುತ್ತದೆ. ಆದರೆ, ಈ ಯಶಸ್ಸು ವಿಶ್ವಾಸಾರ್ಹತೆ ಮತ್ತು ನಿಖರತೆಯ ಅಡಿಪಾಯದೊಂದಿಗೆ ನಂಟನ್ನು ಹೊಂದಿರಬೇಕು ಎಂದು ಹೇಳಿದರು.

ರಾಜ್ಯ, ರಾಷ್ಟ್ರಮಟ್ಟದ ಪತ್ರಿಕೆಗಳು ಸ್ಥಳೀಯ ಮಟ್ಟದ ವಿವರಗಳನ್ನು ಒಳಗೊಂಡಿರುತ್ತಿರಲಿಲ್ಲ. ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಸುದ್ದಿ ವಿವರಗಳು ಮಾತ್ರ ಕಾಣಿಸಿಕೊಳ್ಳುವ ಟ್ರೆಂಡ್‌ ಇತ್ತು. ಇಂಥ ಸಂದರ್ಭದಲ್ಲಿ ಜಿಲ್ಲೆ, ತಾಲೂಕು ಮಟ್ಟದ ಪತ್ರಿಕೆಗಳು ಹುಟ್ಟಿಕೊಂಡವು. ಸ್ಥಳೀಯ ವಿವರಗಳನ್ನು ದಾಖಲಿಸುತ್ತಾ ರಾಜ್ಯ, ರಾಷ್ಟ್ರ ಮಟ್ಟಕ್ಕೆ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಂಡವು. ಆಯಾಜಿಲ್ಲೆ, ತಾಲೂಕುಗಳವರು ರಾಜ್ಯ, ರಾಷ್ಟ್ರ ಜಗತ್ತಿನಯಾವುದೇ ಭಾಗದಲ್ಲಿದ್ದರೂ ತಮ್ಮೂರಿನ ಪತ್ರಿಕೆಗಳನ್ನು ಓದುವ ಕುತೂಹಲವಿರಿಸಿಕೊಂಡಿದ್ದರಿಂದ ಅವುಗಳ ಪ್ರಭಾವ ವಿಸ್ತಾರವಾಯಿತು ಎಂದು ತಿಳಿಸಿದರು.

ಮಾಧ್ಯಮಗಳ ವಿಶ್ವಾಸಾರ್ಹತೆಯು ನಿಖರತೆ ಮತ್ತು ಪಾರದರ್ಶಕತೆಯನ್ನೇ ಆಧರಿಸಿಕೊಂಡಿರುತ್ತದೆ. ವಿಶ್ವಾಸಾರ್ಹತೆ ಇಲ್ಲದೇ ಮಾಧ್ಯಮಗಳು ನಿರ್ವಹಿಸಲ್ಪಡಬಹುದು. ಆದರೆ ಅವುಗಳು ತಮ್ಮ ನಿರಂತರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದರು.

ಮುಖ್ಯಅತಿಥಿ, ಮೀಡಿಯಾ ಅಲ್ಯುಮ್ನಿ ಅಸೋಸಿಯೇಷನ್ ಆಫ್ ಮಂಗಳ ಗಂಗೋತ್ರಿ ಅಧ್ಯಕ್ಷರಾದ ನವೀನ್ ಅಮ್ಮೆಂಬಳ ಮಾತನಾಡಿದರು. ಬೆಳ್ತಂಗಡಿ ತಾಲೂಕಿನ ದಿಡುಪೆ ಗ್ರಾಮವು ಅಭ್ಯುದಯ ಪತ್ರಿಕೋದ್ಯಮದ ಇತಿಹಾಸದಲ್ಲಿ ವಿಶೇಷ ಆದ್ಯತೆ ಪಡೆದುಕೊಂಡಿದೆ. ಅಭ್ಯುದಯ ಪತ್ರಿಕೋದ್ಯಮದ ಆರಂಭ ಇಲ್ಲಿಂದಲೇ ಆರಂಭವಾಗಿದ್ದು. ಸ್ಥಳೀಯತೆಯ ಸುದ್ದಿ ಸಂಗತಿಗಳು ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಬಲ್ಲವು. ಅಭಿವೃದ್ಧಿಯ ವಿನೂತನ ಮಾದರಿಯನ್ನು ಕಾಣಿಸಬಲ್ಲವು ಎಂದು ಹೇಳಿದರು.

ಜಾಗತಿಕ ಮಟ್ಟದ ಪತ್ರಿಕೆಗಳಿಗಿಂತ ಸ್ಥಳೀಯ ಪತ್ರಿಕೆಗಳಿಗೆ ಪ್ರಾಮುಖ್ಯತೆ ಹೆಚ್ಚು. ಏಕೆಂದರೆ ಇವು ಸ್ಥಳೀಯ ಆಸಕ್ತಿಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳನ್ನು ಜಾಗತಿಕ ನೆಲೆಗಟ್ಟಿನಲ್ಲಿ ತಿಳಿಸುವ ಪ್ರಯತ್ನವನ್ನು ಮಾಡುತ್ತವೆ. ಪ್ರಸ್ತುತ ಕ್ರಿಯಾಶೀಲ ಸ್ಥಳೀಯ ಪತ್ರಿಕೆಗಳಿಗೆ ಹೊಸ ಮಾಧ್ಯಮ ಲೋಕದಲ್ಲಿ ವ್ಯಾಪಕ ಅವಕಾಶಗಳು ಲಭ್ಯವಾಗುತ್ತಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂಕಾಲೇಜಿನ ಪ್ರಾಂಶುಪಾಲ ಡಾ.ಕುಮಾರ ಹೆಗ್ಡೆ ಬಿ.ಎ ಅವರು ಮಾತನಾಡಿ ಸದ್ಯದ ಸಮೂಹ ಮಾಧ್ಯಮ ಟ್ರೆಂಡ್ ಮೌಲಿಕ ಭಾಷಿಕ ಮಾದರಿಗಳೊಂದಿಗಿನ ಭಾಷಿಕ ಪರಂಪರೆಯಿಂದ ವಿಮುಖಗೊಳ್ಳುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಹೊಸ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುವ ವೃತ್ತಿನಿರತ ಪತ್ರಕರ್ತರು ಕನ್ನಡದ್ದೇ ಆದ ಮೌಲಿಕ ಭಾಷಿಕ ಪರಂಪರೆಯ ಅಂತಃಸತ್ವವನ್ನುಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಗಮನಹರಿಸಬೇಕು. ವಿಸ್ತಾರವಾದ ಓದಿನ ನೆರವಿನೊಂದಿಗೆ ಭಿನ್ನವಾದ ಸೃಜನಶೀಲತೆಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮೀಡಿಯಾ ಅಲ್ಯುಮ್ನಿ ಅಸೋಸಿಯೇಷನ್ ಆಫ್ ಮಂಗಳ ಗಂಗೋತ್ರಿ ಗೌರವಾಧ್ಯಕ್ಷ ವೇಣು ಶರ್ಮ, ಸಹಾಯಕ ಪ್ರಾಧ್ಯಾಪಕಿ, ಕಾರ್ಯಾಗಾರದ ಸಂಚಾಲಕಿ ಡಾ.ಗೀತಾ ಎ.ಜೆ. ಉಪಸ್ಥಿತರಿದ್ದರು. ವಿಭಾಗದ ಮುಖ್ಯಸ್ಥ ಡಾ.ಭಾಸ್ಕರ್ ಹೆಗಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ವೇತಾ ಇನ್ಯೀಯೇಟಿವ್ ಮುಖ್ಯಸ್ಥ ಶರತ್ ಹೆಗ್ಡೆ ವಂದಿಸಿದರು. ಶಿವುಕುಮಾರ ನಿರೂಪಿಸಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು