News Karnataka Kannada
Tuesday, April 30 2024
ಮಂಗಳೂರು

ಪೊಲೀಸ್‌ ಕಮಿಷನರ್‌ ದಿಢೀರ್‌ ವರ್ಗಾವಣೆಗೆ ವ್ಯಾಪಕ ವಿರೋಧ

Widespread opposition to police commissioner's sudden transfer
Photo Credit : News Kannada

ಮಂಗಳೂರು: ನಗರದಲ್ಲಿ ವ್ಯಾಪಕವಾಗಿ ಹರಡಿದ್ದ ಮಾದಕ ವಸ್ತುಗಳ ಮಾರಾಟ ಜಾಲ ಮತ್ತು ಡ್ರಗ್ಸ್ ಪೆಡ್ಡರ್ ಗಳ ಅಟ್ಟಹಾಸವನ್ನು ನಿಗ್ರಹಿಸಿ ಸ್ವಚ್ಛ ಮಾಡುತ್ತಿದ್ದ ಪೊಲೀಸ್‌ ಕಮೀಷನರ್‌ ಕುಲದೀಪ್ ಜೈನ್‌ ಅವರನ್ನು ದಿಢೀರ್ ಆಗಿ ವರ್ಗಾಯಿಸಿರುವುದು ಪೊಲೀಸ್ ಅಧಿಕಾರಿಗಳ ನೈತಿಕ ಸ್ಥೈರ್ಯಕ್ಕೆ ಹೊಡೆತ ನೀಡಿದಂತಾಗಿದೆ ಎಂದು ಶಾಸಕ ಡಾ.ಭರತ್‌ ಶೆಟ್ಟಿ ಕಿಡಿಕಾರಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಭರತ್ ಶೆಟ್ಟಿ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಬಾರದು ಎನ್ನುವ ದೃಢ ಸಂಕಲ್ಪದೊಂದಿಗೆ ಹೋರಾಡುತ್ತಿದ್ದ ಕಮಿಷನರ್ ಅವರನ್ನು ಕೇವಲ ಐದೇ ತಿಂಗಳಲ್ಲಿ ಕಾಂಗ್ರೆಸ್‌ ಸರ್ಕಾರ ವರ್ಗಾವಣೆ ಮಾಡಿದೆ. ಈಮೂಲಕ ಡ್ರಗ್ಸ್ ರೀತಿಯ ಅಕ್ರಮ ಚಟುವಟಿಕೆಗಳಿಗೆ ಪರೋಕ್ಷವಾಗಿ ರಾಜ್ಯ ಸರ್ಕಾರ ಕುಮ್ಮಕ್ಕು ನೀಡುವಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.

ಈ ರೀತಿಯ ನಿರ್ಧಾರದಿಂದ ಮುಂದಿನ ದಿನಗಳಲ್ಲಿ ಮತ್ತೆ ಮಾದಕ ವಸ್ತುಗಳ ಜಾಲ ತಲೆ ಎತ್ತಲಿದೆ, ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುವ ಸಾಧ್ಯತೆ ಇದ್ದು ಇದಕ್ಕೆಲ್ಲ ಕಾಂಗ್ರೆಸ್‌ ಸರ್ಕಾರವೇ ಹೊಣೆ ಹೊರಬೇಕು ಎಂದು ಶಾಸಕ ಭರತ್‌ ಶೆಟ್ಟಿ ಎಚ್ಚರಿಸಿದ್ದಾರೆ. ಡ್ರಗ್ಸ್ ಜಾಲ ಮತ್ತೆ ಜಾಲ ಬಿಚ್ಚಿ ಜನಸಾಮಾನ್ಯರಿಗೆ ಕಂಟಕವಾದಲ್ಲಿ ಬಿಜೆಪಿ ಪಕ್ಕದ ವತಿಯಿಂದಲೇ ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು