News Karnataka Kannada
Sunday, April 28 2024
ಮಂಗಳೂರು

ಅಪ್ರಾಪ್ತೆಯನ್ನು ರಕ್ಷಿಸಿದ ಪುತ್ತೂರಿನ ಯುವಕರ ಗಡಿಪಾರಿಗೆ ಆದೇಶ: ವಿ.ಹಿಂ.ಪ ಬಜರಂಗದಳ ಆಕ್ರೋಶ

Dgg
Photo Credit : News Kannada

ಪುತ್ತೂರು: ಅಪ್ರಾಪ್ತ ಬಾಲಕಿಯನ್ನು ಅನ್ಯಮತೀಯನಿಂದ ರಕ್ಷಣೆ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಯುವಕರನ್ನು ಪೊಲೀಸ್ ಇಲಾಖೆ ಗಡಿಪಾರಿಗೆ ಶಿಪಾರಸ್ಸು ಆದೇಶಿಸಿರುವುದನ್ನು ವಿಶ್ವಹಿಂದು ಪರಿಷತ್ ಬಜರಂಗದಳ ಕಟುವಾಗಿ ಖಂಡಿಸುತ್ತಿದೆ. ಆ ನಾಲ್ವರ ವಿರುದ್ದ ನಗರ ಠಾಣೆಯಲ್ಲಿ ಯಾವುದೇ ಪ್ರಕರಣಗಳಿಲ್ಲ. ಬಾಲಕಿಯನ್ನು ರಕ್ಷಿಸಿ ಪೊಷಕರ ಗಮನಕ್ಕೆ ತಂದಿರುವ ಒಂದೇ ಕಾರಣಕ್ಕೆ ಗಡಿಪಾರಿಗೆ ನೋಟೀಸ್ ನೀಡಲಾಗಿದೆ. ಅವರು ರೌಡಿಸಂ, ಕೋಮುವಾದ ಹಾಗೂ ಅಶಾಂತಿ ಮಾಡಿರುವುದೇ ಆಗಿದ್ದಲ್ಲಿ ಅದನ್ನು ಸ್ಪಷ್ಟಪಡಿಸಲಿ. ಸುಳ್ಳು ಕೇಸು ಹಾಕಿ ಸರಕಾರವೇ ಅಶಾಂತಿ ಸೃಷ್ಠಿಸುತ್ತಿದ್ದು ಇದಕ್ಕೆ ಸರಕಾರವೇ ಹೊಣೆ ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ ಆರೋಪಿಸಿದರು.

ನ.16ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಐದು ತಿಂಗಳ ಹಿಂದೆ ಚುನಾವಣಾ ಸಮಯದಲ್ಲಿ ಅಪ್ರಾಪ್ತ ಯುವತಿಯನ್ನು ಯುವಕನೋರ್ವ ಪುಸಲಾಯಿಸಿ ಸಿನೇಮಾ ಕರೆದುಕೊಂಡು ನಂತರ ಹೊಟೇಲ್‌ನಲ್ಲಿ ಜ್ಯೂಸ್ ಕುಡಿಸುವ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರು ಗಮನಿಸಿ ಅವರನ್ನು ಠಾಣೆಗೆ ಕರೆದುಕೊಂಡು ಹೋಗುವ ಕೆಲಸ ಮಾಡಿದ್ದಾರೆ. ಆ ಘಟನೆ ಸಂಬಂಧಿಸಿದಂತೆ ಕಬಕದ ಮುಸ್ಲಿಂ ಯುವಕನ ಮೇಲೆ ಪೋಕ್ಸೋ ಕೇಸು ದಾಖಲಾಗಿದೆ. ಇದೇ ಘಟನೆಗೆ ಸಂಬಂಧಿಸಿ ಆತನ್ನು ಅಕ್ರಮವಾಗಿ ಕಿಡ್ನಾಪ್ ಮಾಡಲಾಗಿದೆ ಎಂದು ನಾಲ್ವರ ಮೇಲೆ ಕೇಸು ದಾಖಲಾಗಿದೆ. ಈ ಪ್ರಕರಣದಲ್ಲಿದ್ದ ರಿಕ್ಷಾ ಚಾಲಕ ದಿನೇಶ್ ತಿಂಗಳಾಡಿ, ಎಲೆಕ್ಟ್ರಿಷಿಯನ್ ಪ್ರಜ್ವಲ್ ಸಂಪ್ಯ, ಕೂಲಿ ಕಾರ್ಮಿಕರಾದ ನಿಶಾಂತ್ ತಿಂಗಳಾಡಿ ಹಾಗೂ ಪ್ರದೀಪ್ ಅಜಲಡ್ಕರವರನ್ನು ಪೊಲೀಸ್ ಇಲಾಖೆ ಬಾಗಲಕೋಟೆಗೆ ಗಡಿಪಾರಿಗೆ ಶಿಪಾರಸ್ಸು ಮಾಡಿರುವುದನ್ನು ಉಗ್ರವಾಗಿ ಖಂಡಿಸುತ್ತೇವೆ.

ಆ ನಾಲ್ವರು ರೌಡಿಸಂ, ಕೋಮುವಾದ ಹಾಗೂ ಅಶಾಂತಿ ಸೃಷ್ಠಿಸುವಲ್ಲಿ ಭಾಗಿಗಳಾಗಿಲ್ಲ. ಆದರೂ ಪೊಲೀಸ್ ಇಲಾಖೆ ನೀಡಿರುವ ನೊಟೀಸ್‌ನಲ್ಲಿ ನಾಲ್ವರು ಕೋಮುವಾದಿ, ರೌಡಿಸಂ, ಅಶಾಂತಿ ಸೃಷ್ಟಿಸುವಲ್ಲಿ ಭಾಗಿಗಳಾಗಿದ್ದಾರೆ ಎಂದು ಉಲ್ಲೇಖಿಸಿ ಸಹಾಯಕ ಆಯುಕ್ತರ ಮೂಲಕ ಗಡಿಪಾರಿಗೆ ನೊಟೀಸ್ ನೀಡಲಾಗಿದ್ದು ಪೊಲೀಸ್ ಇಲಾಖೆಯ ಈ ನಡೆ ಹಲವು ಪ್ರಶ್ನೆಗಳು ಹುಟ್ಟು ಹಾಕುತ್ತದೆ. ಅಲ್ಲದೆ ಗ್ರಾಮಾಂತರ ಪ್ರದೇಶದಲ್ಲಿರುವ ನಾಲ್ವರು ಯುವಕರನ್ನು ನಗರ ಠಾಣೆಯವರು ಗಡಿಪಾರಿಗೆ ಶಿಪಾರಸ್ಸು ಮಾಡಿರುವುದರಿಂದ ಪೊಲೀಸ್ ಇಲಾಖೆಯ ಮೇಲೆ ಸಂಶಯದಿಂದ ನೋಡುವಂತೆ ಮಾಡಿದೆ.

ಸರಕಾರ, ಜನಪ್ರತಿನಿಧಿಗಳ ಒತ್ತಡಕ್ಕೋಸ್ಕರ ಯಾರನ್ನೋ ರೌಡಿಸಂ, ಕೋಮುವಾದಿ ಮಾಡುವಲ್ಲಿ ಪೊಲೀಸ್ ಇಲಾಖೆ ನೇರ ಕಾರಣ. ಇದಕ್ಕೆ ಪ್ರೇರಣೆ ನೀಡಲು ಪ್ರಾರಂಭ ಮಾಡಿದ್ದು ತಕ್ಷಣ ನಿಲ್ಲಸಬೇಕು. ಅಂತಹ ಕೃತ್ಯಗಳಲ್ಲಿ ಭಾಗಗಳಾದವರನ್ನು ಗಡಿಪಾರು ಮಾಡುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಈ ರೀತಿ ಕೃತ್ಯಗಳನ್ನು ಕೆಟ್ಟ ಶಬ್ದಗಳನ್ನು ಖಂಡಿಸಿತ್ತೇವೆ. ಸುಳ್ಯದಲ್ಲಿ ಎರಡು ಕೇಸು ದಾಖಲಾಗಿರುವ ಲತೇಶ್ ಗುಂಡ್ಯರವರನ್ನು ಗಡಿಪಾಡು ಆದೇಶಸಲಾಗಿದೆ. ಸರಕಾರ ಹಿಂದು ವಿರೋಧಿಯಾಗಿ ಯೋಚನೆ ಮಾಡಿದರೆ ಅದಕ್ಕೆ ಖಂಡಿತವಾಗಿ ಇಡೀ ಸಮಾಜ, ಜನತೆ ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಸಿದರು.

ಇದಕ್ಕೆ ಹೋರಾಟಗಳು ಅನಿವಾರ್ಯ. ನಮ್ಮದು ಸುಮ್ಮನೆ ಕುಲಿತು ಕೊಳ್ಳುವ ಸಂಘಟನೆಯಲ್ಲ. ನಾವು ನ್ಯಾಯ ಕೇಳಲು ಬಂದಿದ್ದೇವೆ. ಇಲಾಖೆ ಸಾಮಾನ್ಯ ವ್ಯಕ್ತಿಗಳ ಮೇಲೆ ಕೇಸು ಹಾಕಿ ಗಡಿಪಾರು ಮಾಡುವ ಕೆಲಸ ಮಾಡಿದರೆ ನಾವು ಹೋರಾಟ ಮಾಡಲು ಸಿದ್ದ. ಇದರ ಕುರಿತು ಇಲಾಖೆಯ ಮೇಲಾಧಿಕಾರಿಗಳು, ಗೃಹ ಸಚಿವರು ಪರಮೇಶ್ವರ್‌ರವರು ಯೋಚಿಸಿ ಸ್ಪಷ್ಟ ಸೂಚನೆ ನೀಡಬೇಕು. ಸಂಘಟನೆ ಹಾಗೂ ಸಂಘಟನೆಯ ಕಾರ್ಯಕರ್ತರನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದರೆ ಅದನ್ನು ಸ್ಪಷ್ಟಪಡಿಸಿ. ಅದನ್ನೂ ಎದುರಿಸಲು ನಾವು ಸಿದ್ದ. ಅಶಾಂತಿ, ರೌಡಿಸಂ ನಿಲ್ಲಿಸುವುದಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ. ಆದರೆ ಸಂಘಟನೆಗೆ ಉತ್ತಮ ಕೆಲಸ ಮಾಡುವವರನ್ನು ಈ ರೀತಿಯಾಗಿ ಮಾಡಬಾರದು. ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆಯ ಮೇಲಾಧಿಕಾರಿ ಇದರ ಬಗ್ಗೆ ಗಮನಿಸಿ ಮುಂದೆ ಇಂತಹ ತಪ್ಪ ಕೆಲಸ ಮಾಡಬಾರದು ಎಂದು ಆಗ್ರಹಿಸಿದರು.

ಸಮಾಜದಲ್ಲಿ ಅಶಾಂತಿ ನಿಲ್ಲಿಸುವಲ್ಲಿ ಪೊಲೀಸ್ ಇಲಾಖೆ ಮಾಡುವ ಕೆಲಸಗಳಿಗೆ ನಮ್ಮ ಬೆಂಬಲವಿದೆ. ನಮ್ಮ ಸಂಘಟನೆ, ಸಮಾಜದ ರಾಷ್ಟ್ರಕ್ಕೆ ಪೂರಕವಾದ ಸಂಘಟನೆ, ಅದನ್ನು ಬಿಟ್ಟು ನಮ್ಮ ಸಂಘಟನೆ ಕಾರ್ಯಕರ್ತರು ಬೇರೆ ಕೆಲಸ ಮಾಡಲು ಸಾಧ್ಯವಿಲ್ಲ. ಪೊಲೀಸ್ ಇಲಾಖೆ ಕಾನೂನು ಪಾಲನೆಗಾಗಿರುವುದು. ನಡೆದ ಘಟನೆಗಳಿಗೆ ಸಂಬಂಧಿಸಿ ಕೇಸು ದಾಖಲಿಸಲಿ. ಇದರ ಹೊರತಾಗಿ ಯಾವುದೇ ಘಟನೆಗಳು ನಡೆಯದೇ ಇದ್ದರೂ ಕೇಸು ದಾಖಲಿಸುವುದನ್ನು ನಾವು ಸಹಿಸುವುದಿಲ್ಲ ಎಂದು ಡಿವೈಎಸ್‌ಪಿಯವರ ವಿರುದ್ದ ಮುರಳಿಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.

ಗಡಿಪಾರು ಮಾಡಿರುವ ವಿಚಾರ್‍ಕಕೆ ಸಂಬಂಧಿಸಿ ನ.22ಕ್ಕೆ ವಿಚಾರಣೆ ಹಾಜರಾಗುವಂತೆ ಸಹಾಯಕ ಆಯುಕ್ತರಿಂದ ನೋಟೀಸ್ ಬಂದಿದೆ. ಈ ಘಟನೆಯ ಮೇಲೆ ವಕೀಲರ ಮೂಲಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗುವುದು. ಗಡಿಪಾರು ಮಾಡಲು ಆಯಾ ಠಾಣಾ ವ್ಯಾಪ್ತಿಯವರು ಮಾಡಬೇಕು. ಆದರೆ ಈಗಾಗಲೇ ಗಡಿಪಾರಿಗೆ ಶಿಪಾರಸ್ಸು ಮಾಡಲಾದ ನಾಲ್ವರು ನಗರ ಠಾಣಾ ವ್ಯಾಪ್ತಿಯವರಲ್ಲ. ಅವರ ಮೇಲೆ ಯಾವುದೇ ಕೇಸುಗಳಿಲ್ಲ. ಅಪ್ರಾಪ್ತ ಬಾಲಕಿಗೆ ರಕ್ಷಣೆ ನೀಡಿದ ಮಾತ್ರ ಕಾರಣಕ್ಕೆ ಗಡಿಪಾರಿಗೆ ನೊಟೀಸ್ ನೀಡಲಾಗಿದೆ ಎಂದು ಮುರಳಿಕೃಷ್ಣ ಹಸಂತಡ್ಕ ಆರೋಪಿಸಿದರು.

ಜಿಲ್ಲಾ ಸಹಕಾರ್ಯದರ್ಶಿ ಶ್ರೀಧರ ತೆಂಕಿಲ, ಗ್ರಾಮಾಂತರ ಪ್ರಖಂಡ ಸಂಚಾಲಕ ವಿಶಾಖ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು