News Karnataka Kannada
Friday, May 10 2024
ಮಂಗಳೂರು

ಉಳ್ಳಾಲ: ಸಾಮೂಹಿಕ ಸೀಮಂತದಲ್ಲಿ ಶಾಸಕ ಖಾದರ್ ಜೊತೆ ಹಿಂದೂ ಗರ್ಭಿಣಿಯ ಚಿತ್ರ, ಬಜರಂಗದಳದಿಂದ ಆಕ್ರೋಶ

Hindu pregnant woman's flex with MLA Khader at mass seemanta
Photo Credit : News Kannada

ಉಳ್ಳಾಲ: ಸರಕಾರದ ಪ್ರಾಯೋಜಕತ್ವದಲ್ಲಿ ನಡೆದ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಶಾಸಕ ಖಾದರ್ ಪಕ್ಕದಲ್ಲಿ ಅನುಮತಿ‌ ಇಲ್ಲದೆ ಸ್ಥಳೀಯ ಹಿಂದೂ ಗರ್ಭಿಣಿ ಮಹಿಳೆಯ ಭಾವಚಿತ್ರ ಇರುವ ಫ್ಲೆಕ್ಸ್ ಅಳವಡಿಸಿದರ ವಿರುದ್ಧ ಕೆರಳಿದ ಬಜರಂಗದಳದ ಕಾರ್ಯಕರ್ತರು ಪ್ರತಿಭಟಿಸಿದ್ದು ಆಯೋಜಕರು ತಕ್ಷಣ ವಿವಾದಿತ ಫ್ಲೆಕ್ಸನ್ನ ತೆರವುಗೊಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ,ಗ್ರಾಮಾಂತರ ತಾಲೂಕು ಮಟ್ಟದ ಪೋಷಣ್ ಮಾಸಾಚರಣೆ ಕಾರ್ಯಕ್ರಮದ ಅಂಗವಾಗಿ ಕೊಲ್ಯದ ನಾರಾಯಣ ಗುರು ಸಭಾಂಗಣದಲ್ಲಿ ಬುಧವಾರ ಸಾಮೂಹಿಕ ಸೀಮಂತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸಭಾಂಗಣದ ಹೊರಗಡೆ ಹಾಕಿರುವ ಫ್ಲೆಕ್ಸಲ್ಲಿ ಉಳ್ಳಾಲ ಶಾಸಕ ಯು.ಟಿ ಖಾದರ್ ಮತ್ತು ಅವರ ಪಕ್ಕದಲ್ಲಿ ಸ್ಥಳೀಯ ಹಿಂದೂ ಗರ್ಭಿಣಿ ಮಹಿಳೆಯೋರ್ವರ ಭಾವಚಿತ್ರಗಳನ್ನ ಹಾಕಲಾಗಿತ್ತು.ಕಾರ್ಯಕ್ರಮದ ಆಯೋಜಕರು ಈ ಫ್ಲೆಕ್ಸಲ್ಲಿ ಸ್ಥಳೀಯ ಹಿಂದೂ ಕಾರ್ಯಕರ್ತನ ಸಹೋದರಿ ಗರ್ಭಿಣಿಯಾಗಿದ್ದ ಭಾವಚಿತ್ರವನ್ನ ಅನುಮತಿ ಇಲ್ಲದೆ ಜಾಲತಾಣದಿಂದ ನಕಲು ಮಾಡಿ ಮುದ್ರಿಸಿದ್ದರು.ಇದರ ವಿರುದ್ಧ ಬಜರಂಗದಳದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೀಮಂತ ಕಾರ್ಯಕ್ರಮದ ಸಭಾಂಗಣಕ್ಕೆ ನುಗ್ಗಿದ ಬಜರಂಗದಳ ಕಾರ್ಯಕರ್ತರು ಹಿಂದೂ ವಿರೋಧಿ ಖಾದರ್ ಎಂದು ಧಿಕ್ಕಾರ ಕೂಗಿದ್ದಾರೆ.ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಮಣಿದ ಕಾರ್ಯಕ್ರಮದ ಆಯೋಜಕರು ಕೂಡಲೇ ಫ್ಲೆಕ್ಸನ್ನ ತೆರವುಗೊಳಿಸಿದ್ದಾರೆ.

ಆಯೋಜಕರು ಮಾಡಿದ ಎಡವಟ್ಟಿಂದ ಸರಕಾರಿ ಪ್ರಾಯೋಜಕತ್ವದಲ್ಲಿ ನಡೆದ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಅನಾವಶ್ಯಕ ಗೊಂದಲ ನಡೆಯುವಂತಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು