News Karnataka Kannada
Saturday, April 20 2024
Cricket
ಮಂಗಳೂರು

ಉಜಿರೆ: ಸೆ.30ರಂದು ಓಶಿಯನ್ ಪರ್ಲ್ ಹೋಟೆಲ್ ಉದ್ಘಾಟನೆ

ujire-ocean-pearl-hotel-to-be-inaugurated-on-september-30
Photo Credit : By Author

ಉಜಿರೆ: ಅಥಿತಿ ಸೇವೆಗೆ ಮತ್ತು ಉತ್ತಮ ಗುಣ ಮಟ್ಟದ ಆಹಾರ ಕ್ರಮಕ್ಕೆ ಹೆಸರು ವಾಸಿಯಾದ ಹೋಟೆಲ್ ಓಶಿಯನ್ ಪರ್ಲ್, ಉಜಿರೆಯಲ್ಲಿ ಸೆ.30 ರಂದು ತನ್ನ 4ನೇ ಶಾಖೆಯನ್ನು ತೆರೆಯಲಿದೆ.

ಓಶಿಯನ್ ಪರ್ಲ್ ಹೋಟೆಲ್ಸ್ ಪ್ರೈ. ಲಿಮಿಟೆಡ್ ಸಂಸ್ಥೆ, ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಮೂರು ಶಾಖೆಗಳನ್ನು ಹೊಂದಿದ್ದು, ಅವುಗಳೆಂದರೆ ದಿ ಓಶಿಯನ್ ಪರ್ಲ್, ಮಂಗಳೂರು, ದಿ ಓಶಿಯನ್ ಪರ್ಲ್, ಉಡುಪಿ ಮತ್ತು ದಿ ಓಷಿಯನ್ ಪರ್ಲ್ ಇನ್, ಮಂಗಳೂರು ತಮ್ಮ 4 ನೇ ಶಾಖೆಯನ್ನು ಆರಂಭಿಸಲು ಹೆಮ್ಮೆಪಡುತ್ತಿದೆ. ಸೆ.30 ರಂದು ಉಜಿರೆಯಲ್ಲಿ ತಮ್ಮ ಹೊಸ ಹೋಟೆಲ್ ಉದ್ಘಾಟನೆಯೊಂದಿಗೆ ತನ್ನ ಐಷಾರಾಮಿ ಹೋಟೆಲ್‌ಗಳ ನಿರ್ವಹಣೆಗೆ ಹೊಸ ಮುಕುಟವನ್ನು ಸೇರ್ಪಡೆ ಗೊಳಿಸಿದಂತ್ತಾಗುತ್ತದೆ.

ಓಶಿಯನ್ ಪರ್ಲ್ ವ್ಯವಹಾರ ಸಂಸ್ಥೆ, ಹೊಟೇಲ್‌ಗಳ ರೆಸ್ಟೊರೆಂಟ್ ವ್ಯವಹಾರಕ್ಕೆ ಮುನ್ನುಗ್ಗುವ ಮೂಲಕ ಔಟ್ ಡೋರ್ ಕ್ಯಾಟರಿಂಗ್ ಸೇವೆಗಳು,  ಔತಣಕೂಟ, ಕ್ಯಾಂಟೀನ್ ಗಳ ನಿರ್ವಹಣೆ ನಡೆಸುತ್ತಿದ್ದು, ಈ ಸಂಸ್ಥೆ ಹಾಸ್ಪಿಟಾಲಿಟಿ ಉದ್ಯಮದ ದಿಗ್ಗಜ ಜಯರಾಮ್ ಬನಾನ್ ಅವರಿಗೆ ಸೇರಿರುವ ಪ್ರತಿಷ್ಠಿತ ಜೆಆರ್ ಬಿ ಗ್ರೂಪ್‌ಗೆ ಸೇರಿದೆ.

ಗ್ರೂಪ್‌ ಸಾಗರ್ ರತ್ನ ಬ್ರಾಂಡ್‌, ಸಸ್ಯಾಹಾರಿ ರೆಸ್ಟೋರೆಂಟ್‌ಗಳ ಸರಪಳಿಯ ಮೂಲಕ 150 ಕ್ಕೂ ಹೆಚ್ಚು ಶಾಖೆಗಳನ್ನು ಹೆಚ್ಚಾಗಿ ದೇಶದ ಉತ್ತರ ರಾಜ್ಯಗಳಾದ್ಯಂತ ಹೊಂದಿದ್ದು, ದೆಹಲಿಯ ಎನ್ ಸಿಟಿ ಪ್ರದೇಶ ಸಹಿತ ಕರ್ನಾಟಕ ರಾಜ್ಯದಲ್ಲಿ ಅಸ್ತಿತ್ವವನ್ನು ಹೊಂದಿರುವುದರ ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ ಮತ್ತು ಅತಿದೊಡ್ಡ ಸರಪಳಿ ಎಂದು ಪರಿಗಣಿಸಲ್ಪಟ್ಟಿದೆ.

ಓಶಿಯನ್ ಪರ್ಲ್ ಹುಬ್ಬಳ್ಳಿಯಲ್ಲಿ ದಿ ಓಶಿಯನ್ ರೆಸಾರ್ಟ್ ಮತ್ತು ಸ್ಪಾ ಜೊತೆಗೆ, ಮಂಗಳೂರು ನಗರದ ಪ್ರತಿಷ್ಠಿತ ಟಿಎಂಎ ಪೈ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ ಅನ್ನು ಕೂಡ ನಿರ್ವಹಣೆ ಮಾಡುತ್ತಿದೆ.

ರಾಷ್ಟ್ರ ರಾಜಧಾನಿಯ ದೆಹಲಿಯಲ್ಲಿ ಚತ್ತರ್‌ಪುರ ಮಂದಿರ ರಸ್ತೆಯಲ್ಲಿರುವ ದಿ ಓಷನ್ ರಿಟ್ರೀಟ್ ಮತ್ತು ಓಶಿಯನ್ ಪರ್ಲ್ ಗಾರ್ಡೆನಿಯಾ ಎಂಬ ಬ್ರಾಂಡ್ ಹೆಸರಿನಡಿಯಲ್ಲಿ ಅತ್ಯುತ್ತಮ ಗುಣಮಟ್ಟದ ಔತಣ ಕೂಟದ ಸೇವೆಗೆ ಹೆಸರುವಾಸಿಯಾಗಿದೆ.

ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ಧರ್ಮಸ್ಥಳದ ಬಳಿ ಇರುವ. ಉಜಿರೆಯ ಪಟ್ಟಣದ ಲಲಿತಾ ನಗರದ ಬಳಿ ಇದೀಗ ಓಶಿಯನ್ ಪರ್ಲ್, ಸಂಸ್ಥೆ ತನ್ನ ಮುಕುಟಕ್ಕೆ ಇನ್ನೊಂದು ವಜ್ರ ಎಂಬಂತೆ ತನ್ನ ನೂತನ ಹೋಟೆಲನ್ನು ತೆರೆಯಲಿದೆ. (ಎಸ್‌ಡಿಎಂ ಕಾಲೇಜ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್ ಬಳಿ) ಇದು 3 ಮಹಡಿಗಳ ಐಷಾರಾಮಿ ಹೋಟೆಲ್ ಆಗಿದ್ದು 34 ಕೊಠಡಿಗಳನ್ನು ಹೊಂದಿದೆ.ಇಲ್ಲಿ 34 ರೂಮ್ಗಳಿದ್ದು 31ಸೂಟು ರೂಮ್ ಗಳು, 2 ಸೂಟ್ ರೂಮ್ ಗಳು ಮತ್ತು 1ಪ್ರೆಸಿಡೆಂಟ್ ಸೂಟ್ ರೂಮ್ ಅನ್ನು ಹೊಂದಿದೆ.

ಇಲ್ಲಿ ದೊರೆಯುವ ಸೇವೆಗಳು.

ಪೆಸಿಫಿಕ್- ಸುಮಾರು 200 ಜನರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವಿರುವ ಅತ್ಯಾಧುನಿಕ ಕಾನ್ಫರೆನ್ಸ್ ಹಾಲ್. ‘ಸಾಗರ ರತ್ನ’ ಬ್ರಾಂಡ್ ಸಸ್ಯಾಹಾರಿ ರೆಸ್ಟೋರೆಂಟ್, 140 ಮಂದಿಯ ಆಸನ ವ್ಯವಸ್ತೆಯ ಸಾಮರ್ಥ್ಯ ಹೊಂದಿದ್ದು, 50 ಮಂದಿ ಕುಳಿತುಕೊಂಡು ತಿನ್ನುವ ಮಾಂಸಾಹಾರಿ ರೆಸ್ಟೋರೆಂಟ್ ಅನ್ನು ಹೊಂದಿದೆ.

ಜಿಮ್
ಓಶಿಯನ್ ಪರ್ಲ್ ಜಿಮ್, ದೇಹ ದಾರ್ಡ್ಯತೆಯ ಉತ್ಸಾಹಿ ಜನರ ಗುಣಮಟ್ಟದ ಜೀವನಕ್ಕೆ, ತಮ್ಮ ಅಗತ್ಯಗಳನ್ನು ಪೂರೈಸಲೂ ಇಲ್ಲಿ ಅವಕಾಶವಿದೆ.

ಓಶಿಯನ್ ಪರ್ಲ್  ಹೋಟೆಲ್
ಬೆಳ್ತಂಗಡಿ ಮೂಲದ  ಶಶಿಧರ್ ಶೆಟ್ಟಿಯವರ ಒಡೆತನದಲ್ಲಿದೆ. ಮೂರು ದಶಕಗಳಿಗೂ ಮೀರಿದ ಅನುಭವ ಮತ್ತು ಪರಿಣತಿಯೊಂದಿಗೆ ಆಹಾರ ಸೇವೆಯ (ಕ್ಯಾಟರಿಂಗ್) ಉದ್ಯಮದಲ್ಲಿ ಮಾನ್ಯತೆ ಪಡೆದ ಪ್ರಭಾವಿ ಉದ್ಯಮಿಯಾಗಿದ್ದಾರೆ. ಅವರು ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ ಎಂಡಿ ಮತ್ತು ಅಧ್ಯಕ್ಷರಾಗಿದ್ದಾರೆ. ಜೊತೆಗೆ ದೇಶದ ಸುಮಾರು 12 ರಾಜ್ಯಗಳಲ್ಲಿ ಹರಡಿರುವ ಪ್ರಸಿದ್ಧ ಕೈಗಾರಿಕಾ ಸಮೂಹ ಸಂಸ್ಥೆಗಳ ಕ್ಯಾಂಟೀನ್‌ಗಳನ್ನು ನಡೆಸುತ್ತಿದ್ದಾರೆ. ಓಶಿಯನ್ ಪರ್ಲ್ ಹೋಟೆಲ್ ಉಜಿರೆಯ ಹಾಸ್ಪಿಟಾಲಿಟಿ ಸಂಸ್ಥೆಯು ಹೋಟೆಲ್ ಇಂಡಸ್ಟ್ರಿಯಲ್ಲಿ ಇರುವ ಎರಡು ಜಂಟಿ ದಿಗ್ಗಜರ ಉದ್ಯಮವಾಗಿದೆ. ಅಂದರೆ ಜಯರಾಮ್ ಬನಾನ್ ಮತ್ತು ಶಶಿಧರ್ ಶೆಟ್ಟಿ 75 ವರ್ಷಗಳ ಸಂಯೋಜಿತ ಅನುಭವದ ಫಲ ದೊಂದಿಗೆ ಓಶಿಯನ್ ಪರ್ಲ್, ಉಜಿರೆಯಲ್ಲಿ ಶುಭಾರಂಭ ಗೊಳ್ಳಲಿದೆ.

ಶಶಿಧರ ಶೆಟ್ಟಿಯವರ ಮಾತೃಶ್ರಿ ಯಾವರಾದ ಶ್ರೀಮತಿ ಕಾಶಿ ಶೆಟ್ಟಿಯವರು, ಸೆ.30ರ ಶುಕ್ರವಾರದಂದು ಉದ್ಘಾಟಿಸಲಿದ್ದಾರೆ.

ಪ್ರಸಿದ್ಧ ಧರ್ಮಸ್ಥಳ ಮಂಜುನಾಥನ ದೇವಸ್ಥಾನಕ್ಕೆ ಭೇಟಿ ನೀಡುವವರಿಗೆ, ಉಜಿರೆಯಲ್ಲಿರುವ ಸಾಗರದ ಮುತ್ತು ಓಶಿಯನ್ ಪರ್ಲ್ ಹೊಸ ಭಾಷ್ಯವಾಗುವ ನಿರೀಕ್ಷೆಯಿದೆ. ಅಲ್ಲದೆ ಇದು ಜೆಆರ್ ಬಿ ಗ್ರೂಪ್‌ನ ನಿಷ್ಠಾವಂತ ಗ್ರಾಹಕರಿಗೆ ಮತ್ತು ತಮ್ಮ ಉತ್ತಮ ನಿರ್ವಹಣೆಯ ಆಶಯಗಳಿಗೆ ಇದು ನಮ್ಮ ವಿನಮ್ರ ಕೊಡುಗೆಯಾಗಿದೆ. ಜೊತೆಗೆ ಸದಾ ರಾಜ್ಯದ ಪ್ರಜ್ಞಾವಂತ ಜನರ ನಿರಂತರ ಪ್ರೀತಿ ಮತ್ತು ವಾತ್ಸಲ್ಯವನ್ನು ನಿರೀಕ್ಷಿಸುತ್ತಿದೆ ಎಂದರು. ಗ್ರೂಪ್‌ನ ಪ್ರಾಜೆಕ್ಟ್ ಮುಖ್ಯ ಪ್ರಬಂಧಕ ಶಿವಕುಮಾರ್, ಉಜಿರೆ ಹೋಟೆಲ್‌ನ ಮುಖ್ಯ ಪ್ರಬಂಧಕ ನಿತ್ಯಾನಂದ ಮೊಂಡೆಲ್ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು