News Karnataka Kannada
Monday, April 29 2024
ಮಂಗಳೂರು

ಉಜಿರೆ: ಭಕ್ತರ ಸಾಮೂಹಿಕ ಪ್ರಾರ್ಥನೆಗೆ ವಿಶೇಷ ಶಕ್ತಿಯಿದೆ- ಪ್ರತಾಪಸಿಂಹ ನಾಯಕ್

Ujire: Mass prayers of devotees have special power: Pratapsimha Naik
Photo Credit : By Author

ಬೆಳ್ತಂಗಡಿ: ಶಾರದೆ ವಿದ್ಯೆ ,ಸಿದ್ಧಿ, ಬುದ್ಧಿ ಪ್ರೇರಣೆ ನೀಡುವ ಅಧಿದೇವತೆ, ಶಾರದೆಯ ಸಾಮೂಹಿಕ ಆರಾಧನೆಯಿಂದ ಸಮಾಜದಲ್ಲಿ ಸುಖ ,ಶಾಂತಿ ,ನೆಮ್ಮದಿ ನೆಲೆಸುವುದು. ಭಕ್ತರ ಸಾಮೂಹಿಕ ಪ್ರಾರ್ಥನೆಗೆ ವಿಶೇಷ ಶಕ್ತಿಯಿದೆ. ಎಲ್ಲರೂ ಒಗ್ಗಟ್ಟಿನಿಂದ ಭಕ್ತಿ , ಶ್ರದ್ಧೆಯಿಂದ ಆರಾಧಿಸಿದರೆ ನಾಡು ಸಮೃದ್ಧಿಯಾಗುವುದೆಂಬ ನಂಬಿಕೆಯಿದೆ. ಸುದೀರ್ಘ 42 ವರ್ಷದಿಂದ ನಡೆದುಕೊಂಡು ಬರುತ್ತಿರುವ ಉಜಿರೆಯ ಸಾರ್ವಜನಿಕ ಶ್ರೀ ಶಾರದಾ ಪೂಜೆಗೆ ವಿಶೇಷ ಶಕ್ತಿ ಹಾಗೂ ಸಾನ್ನಿಧ್ಯವಿದೆ. ಎಲ್ಲರೂ ಸೇರಿ ಉತ್ಸವವನ್ನು ನಿರಂತರವಾಗಿ ನಡೆಸಿಕೊಂಡು ಬನ್ನಿ ಎಂದು ವಿ. ಪ.ಸದಸ್ಯ ಪ್ರತಾಪಸಿಂಹ ನಾಯಕ್ ನುಡಿದರು.

ಅವರು ಅ.5ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಉಜಿರೆ ಶ್ರೀ ಶಾರದಾ ಪೂಜಾ ಸಮಿತಿ ವತಿಯಿಂದ 4 ದಿನಗಳ ಕಾಲ ನಡೆದ 42 ನೇ ವರ್ಷದ ಶ್ರೀ ಶಾರದಾ ಪೂಜೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗ ವಹಿಸಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡುತ್ತಿದ್ದರು. ಸಮಿತಿ ಗೌರವಾಧ್ಯಕ್ಷ ,ಶ್ರೀ ಜನಾರ್ದನ ದೇವಸ್ಥಾನದ ಶರತ್ಕೃಷ್ಣ ಪಡುವೆ ಟ್ನಾಯ ಎರಡು ವರ್ಷದ ನಂತರ ಎಲ್ಲರ ಸಹಕಾರದಿಂದ ಶ್ರೀ ಶಾರದೋತ್ಸವ ಹಿಂದಿನ ಸಂಭ್ರಮದಿಂದ ನಡೆಯುತ್ತಿದೆ. ಭಾಗವ ಹಿಸಿದ ಎಲ್ಲರಿಗೂ ಶಾರದಾ ಮಾತೆ ವಿಧ್ಯೆ ,ಸದ್ಬುದ್ಧಿ ನೀಡಿ ನಾಡಿನಲ್ಲಿ ಸುಖ ಶಾಂತಿ ನೆಲೆಸುವಂತಾಗಲಿ ಎಂದು ಶುಭ ಹಾರೈಸಿದರು.

ಶಾರದೋತ್ಸವ ಪ್ರಯುಕ್ತ ಪುರುಷರು,ಮಹಿಳೆಯರು ಹಾಗು ಮಕ್ಕಳಿಗೆ ಏರ್ಪಡಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಶಾರದೋತ್ಸವ ಸಮಿತಿ ಅಧ್ಯಕ್ಷ ಮಾಧವ ಹೊಳ್ಳ, ಕಾರ್ಯದರ್ಶಿ ಅಜೇಯ ಶೆಟ್ಟಿ, ಉಪಾಧ್ಯಕ್ಷ ಹುಕುಂ ರಾಮ್ ಪಟೇಲ್ ,ಕೋಶಾಧಿಕಾರಿ ಶಿವಪ್ರಸಾದ್ ಸುರ್ಯ ಉಪಸ್ಥಿತರಿದ್ದರು. ವನಿತಾ ವಿ.ಶೆಟ್ಟಿ ಸ್ಪರ್ಧಾ ವಿಜೇತರ ವಿವರ ನೀಡಿದರು. ಸಾಂಸ್ಕೃತಿಕ ಕಾರ್ಯದರ್ಶಿ ಗೋಪಾಲಕೃಷ್ಣ ಜಿ.ಕೆ ಸ್ವಾಗತಿಸಿ,ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂಜೀವ ಶೆಟ್ಟಿ ಕುಂಟಿನಿ ವಂ ದಿಸಿದರು. ಅರ್ಚಕ ವೇದಮೂರ್ತಿ ಶ್ರೀನಿವಾಸ ಹೊಳ್ಳ ಮತ್ತು ರಾಮಚಂದ್ರ ಹೊಳ್ಳರಿಂದ ಶ್ರೀ ಶಾರದಾ ದೇವಿಗೆ ಮಹಾಮಂಗಳಾರತಿ ನಡೆದು ವಿಗ್ರಹವನ್ನು ಶೋಭಾಯಾತ್ರೆಗೆ ಅಣಿಗೊಳಿಸಲಾಯಿತು.

ಮಹಾಪೂಜೆ ವೇಳೆ ಅರುಣಕುಮಾರ್ ,ಜಯಂತ ಶೆಟ್ಟಿ ಕುಂಟಿನಿ,ರಾಧಾಕೃಷ್ಣ ಶೆಟ್ಟಿ,ಭರತ್ ಕುಮಾರ್,ಕಿರಣ್ ರಾಜ್ ಅತ್ತಾಜೆ,,ಪ್ರಕಾಶ್ ಗೌಡ ,ಮೋಹನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಭವ್ಯ ಶೋಭಾಯಾತ್ರೆ: ಶ್ರೀ ಶಾರದಾ ಮಂಟಪದಿಂದ ಹೊ ರಟ ಶ್ರೀ ಶಾರದಾ ವಿಗ್ರಹದ ವೈಭವ ಪೂರ್ಣ ಮೆರವಣಿಗೆ ಮುಖ್ಯ ರಸ್ತೆಯಲ್ಲಿ ಸಾಗಿ ಬೆಳಾಲು ಕ್ರಾಸ್,ಜನಾರ್ದನ ಶಾಲೆ ವರೆಗೆ ಸಾಗಿ ಮರಳಿ ಬಂದು ದೇವಸ್ಥಾನದ ಕೆರೆಯಲ್ಲಿ ವಿಸರ್ಜಿಸಲಾಯಿತು.

ಮೆರವಣಿಗೆಯಲ್ಲಿ ಚೆಂಡೆ ಮೇಳ, ಸ್ಯಾ ಕ್ಸೋ ಫೋನ್ ವಾದನ ,ನಾಲ್ಕು ತಂಡಗಳ ವೈಭವಪೂರ್ಣ ಕುಣಿತ ಭಜನೆ, ಹುಲಿ ವೇಷ ಕುಣಿತ ಹಾಗೂ ಭ ಕ್ತಿ ಸಂಗೀತ ಆರ್ಕೆಸ್ಟ್ರಾ ಮೊದಲಾದ ಆಕರ್ಷಕ ವೈವಿಧ್ಯಗಳಿದ್ದವು. ಉಜಿರೆ ಪರಿಸರದ ಸಹಸ್ರಾರು ಭಕ್ತಾದಿಗಳು ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡರು . ಶಾರದಾ ವಿಸರ್ಜನೆಯೊಂದಿಗೆ ಶ್ರೀ ಶಾರದಾ ಪೂಜೋತ್ಸವ ಸಂಭ್ರಮದಿಂದ ಸಂಪನ್ನಗೊಂಡಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು