News Karnataka Kannada
Saturday, April 27 2024
ಮಂಗಳೂರು

ಉಜಿರೆ: ಶಾಸ್ತ್ರೀಯ ಸಂಗೀತ, ಇಹಪರದ ದೈವಿಕ ಸಂಗೀತ ಸಮೀಕರಣ

classical music, the divine musical equation of ihapara
Photo Credit : By Author

ಉಜಿರೆ: ಸಾಮಾನ್ಯರ ತಿಳಿವಿಗೆಟುಕದ ಆಧ್ಯಾತ್ಮದ ತತ್ವಗಳು ಶಾಸ್ತ್ರೀಯ ರಾಗದ ಆಲಾಪದೊಂದಿಗೆ ಸಂಗೀತಸ್ವರಗಳ ಮೂಲಕ ಪ್ರಸ್ತುತಪಡಿಸಲ್ಪಟ್ಟರೆ ಹೇಗಿರುತ್ತದೆ? ಹಾಗಾದರೆ ಕಠಿಣ ಆಧ್ಯಾತ್ಮ ಸರಳವಾಗುತ್ತದೆ. ಕೇಳುವವರೊಳಗೆ ಆತ್ಮ-ಪರಮಾತ್ಮದ ಕುರಿತು ತಿಳಿದುಕೊಳ್ಳುವ ಕುತೂಹಲವನ್ನು ಹುಟ್ಟಿಸುತ್ತದೆ.

ಧರ್ಮಸ್ಥಳದ ವಸ್ತುಪ್ರದರ್ಶನ ಮಂಟಪದಲ್ಲಿ ಲಕ್ಷದೀಪೋತ್ಸವ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಇಂತಹದೊಂದು ಪ್ರಭಾವ ಹುಟ್ಟಿಸುವಲ್ಲಿ ಯಶಸ್ವಿಯಾಯಿತು. ಕನಕದಾಸ ವಿರಚಿತ ‘ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ’ ಎಂಬ ಪ್ರಶ್ನಾರ್ಥಕ ಸಾಲುಗಳೊಂದಿಗಿನ ಕಾವ್ಯದ ಮಾಧುರ್ಯಪೂರ್ಣ ಪ್ರಸ್ತುತಿಯ ಮೂಲಕ ವಿದುಷಿ ಅನುರಾಧ ಅಡ್ಕಸ್ಥಳ ಆಧ್ಯಾತ್ಮ ಚಿಂತನೆಯ ಸೊಗಡನ್ನು ಹರಡಿದರು.

ಇಹಪರದೊಂದಿಗಿನ ದೈವಿಕ ಸಂಯೋಗದ ಶ್ರೇಷ್ಠತೆಯನ್ನು ಸಾರುವ ಕನಕದಾಸರ ಈ ಪದವನ್ನು ತಮ್ಮ ಶಾಸ್ತ್ರೀಯ ಧ್ವನಿಮಾಧುರ್ಯದ ಮೂಲಕ ಹಾಡಿ ವಿದುಷಿ ಅನುರಾಧ ಅಲ್ಲಿದ್ದವರನ್ನು ಸೆಳೆದರು. ಇಹದ ಪ್ರತಿಯೊಂದು ಅಸ್ತಿತ್ವದೊಂದಿಗೆ ದೈವಿಕತೆಯು ಸಮೀಕರಣಗೊಂಡ ಸೌಂದರ್ಯವನ್ನು ತಮ್ಮ ಧ್ವನಿಯ ಮೂಲಕ ಅವರು ಅನಾವರಣಗೊಳಿಸಿದರು. ಸತತ ಒಂದು ಗಂಟೆಗಳ ಕಾಲ ಜರುಗಿದ ಸಂಗೀತ ರಸದೌತಣ ಕಲಾ ಆರಾಧಕರ ಗಮನ ಸೆಳೆಯಿತು.

ಈ ಸಂಗೀತ ಕಾರ್ಯಕ್ರಮದಲ್ಲಿ ಬಾಲಕೃಷ್ಣ ಪುತ್ತೂರು(ಮೃದಂಗ), ಬಾಲರಾಜ್ ಕಾಸರಗೋಡು (ವಯೋಲಿನ್) ಅಮೃತ ನಾರಾಯಣ ಹೊಸಮನೆ (ಮೋರ್ಸಿಂಗ್) ಹಾಗೂ ಶರಧಿ ಅಡ್ಕಸ್ಥಳ (ವೀಣೆ) ಸಾತ್ ನೀಡಿದರು. ಕರ್ನಾಟಕ ಶಾಸ್ತ್ರೀಯ ಸಂಗೀತದ ವಿವಿಧ ರಾಗ ತಾಳಗಳಾದ ಬಹುದಾರಿ ರಾಗ, ಆದಿತಾಳ ಶ್ರೀ ಗುರು ರಮಣ . ರಾಗ ದ್ವಿಜಾವಂತಿ, ಆದಿತಾಳ, ರಾಗ ಅಭೇರಿ, ಆದಿತಾಳ ಹೀಗೆ ವಿವಿಧ ರಾಗ ತಾಳಗಳಿಂದ ಕಲಾರಸಿಕರ ಮನಸೆಳೆಯಿತು.

ವರದಿ: ಐಶ್ವರ್ಯ ಕೋಣನ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ
ಉಜಿರೆ
ಚಿತ್ರಗಳು: ಶಶಿಧರ ನಾಯ್ಕ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು