News Karnataka Kannada
Thursday, May 02 2024
ಮಂಗಳೂರು

ಆಚರಣೆಗಳ ಹಿಂದೆ ವೈಜ್ಞಾನಿಕ ಐತಿಹ್ಯವಿದೆ: ಕೈಯೂರು ನಾರಾಯಣ ಭಟ್

There is a scientific legend behind the celebrations: Kaiyoor Narayana Bhat
Photo Credit : By Author

ಬಂಟ್ವಾಳ: ಆಚರಣೆಗಳ ಹಿಂದೆ ವೈಜ್ಞಾನಿಕ ಐತಿಹ್ಯವಿದೆ. ಹೊಸಪೀಳಿಗೆಗೆ ಹಳೆಯದನ್ನು ನೆನಪಿಸುವ ಕಾರ್ಯವನ್ನು ಆಟಿಡೊಂಜಿ ದಿನ ಕಾರ್ಯಕ್ರಮ ಮಾಡುತ್ತಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ನಿಕಟಪೂರ್ವ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಹೇಳಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ನ ಯೋಜನಾ ಕಚೇರಿಯಾದ ಉನ್ನತಿ ಸೌಧದಲ್ಲಿ ಜುಲೈ 30ರಂದು ಭಾನುವಾರ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮಂಡಾಡಿ, ಬಿ.ಸಿ.ರೋಡ್ ವಲಯ ಸಹಯೋಗದಲ್ಲಿ ಆಟಿಡೊಮಜಿ ದಿನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ಹಿಂದಿನ ಕಾಲದಲ್ಲಿ ಆಟಿ ತಿಂಗಳಲ್ಲಿ ಇದ್ದ ಬಡತನ ಈಗಿಲ್ಲ. ಆದರೆ ಇಂದು ನಾವು ಅಂದಿನ ಸ್ಥಿತಿ ಹೇಗಿತ್ತು ಎಂಬ ಕುರಿತು ಚಿಂತಿಸುವ ಹಾಗೂ ಅದರ ವೈಶಿಷ್ಟ್ಯ, ಮಹತ್ವವನ್ನು ಅರಿತುಕೊಳ್ಳುವುದು ಅಗತ್ಯವಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಮಹಾಬಲ ಕುಲಾಲ್, ಇಂದು ಆಟಿ ತಿಂಗಳ ಆಹಾರಪದ್ಧತಿಗೂ ಬೇಡಿಕೆ ಬಂದಿದೆ. ಆಟಿ ತಿಂಗಳ ಅಮಾವಾಸ್ಯೆಯ ಪಾಲೆದ ಕೆತ್ತೆ ಕಷಾಯ ಸೇವನೆ ಸಹಿತ ಹಲವು ಆಚರಣೆಗಳನ್ನು ಇಂದು ನಡೆಸಿಕೊಂಡು ಬರಲಾಗುತ್ತಿರುವುದಕ್ಕೆ ನಮ್ಮ ಪರಂಪರೆಯ ಮೇಲಿನ ಅಭಿಮಾನವೇ ಕಾರಣ ಎಂದರು.

ಮುಖ್ಯ ಅತಿಥಿಗಳಾಗಿ ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ರೊನಾಲ್ಡ್ ಡಿಸೋಜ ಸಂಘಟನೆಯ ಜವಾಬ್ದಾರಿ ಕುರಿತು ಮಾತನಾಡಿದರು. ಪತ್ರಕರ್ತ ಹರೀಶ ಮಾಂಬಾಡಿ, ಜನಜಾಗೃತಿ ವೇದಿಕೆ ವಲಯಾಧ್ಯಕ್ಷ ಚಂದಪ್ಪ ಮೂಲ್ಯ, ಬಂಟ್ವಾಳ ತಾಲೂಕು ಯೋಜನಾಧಿಕಾರಿ ಮಾಧವ ಗೌಡ ಉಪಸ್ಥಿತರಿದ್ದರು. ಮಂಡಾಡಿ ಒಕ್ಕೂಟ ಅಧ್ಯಕ್ಷೆ ಜಯಲಕ್ಷ್ಮೀ ಸ್ವಾಗತಿಸಿದರು.

ಒಕ್ಕೂಟದ ಕೋಶಾಧಿಕಾರಿ ದಯಾನಂದ ನೇರಂಬೊಳು ವಂದಿಸಿದರು. ಬಿ.ಸಿ.ರೋಡ್ ಮೇಲ್ವಿಚಾರಕಿ ವೇದಾವತಿ ಮತ್ತು ಮಂಡಾಡಿ ಸೇವಾ ಪ್ರತಿನಿಧಿ ನಿರೂಪಣಾ ಕಾರ್ಯ ನೆರವೇರಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಆಟಿ ತಿಂಗಳ ಆಹಾರ ಪದಾರ್ಥಗಳು ಮತ್ತು ಆಚರಣೆಗಳ ಪ್ರಾತ್ಯಕ್ಷತೆ ಏರ್ಪಡಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು