News Karnataka Kannada
Sunday, April 28 2024
ಮಂಗಳೂರು

ಬೆಳ್ತಂಗಡಿ: ನೆರಿಯ ಅಪ್ಪೆಲ ದೇವಸ್ಥಾನದಲ್ಲಿ ಕಳವು ಪ್ರಕರಣ ವಿಚಾರ- ಭಕ್ತಾಭಿಮಾನಿಗಳ ಸಭೆ

Appela
Photo Credit : By Author

ಬೆಳ್ತಂಗಡಿ : ಇಲ್ಲಿನ ನೆರಿಯ ಅಪ್ಪೆಲ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಕಳವು ಪ್ರಕರಣ ನಡೆದು ಏಳು ದಿನ ಕಳೆದರೂ ಇನ್ನೂ ಆರೋಪಿಗಳನ್ನು ಪತ್ತೆಯಾಗದ ವಿಚಾರದಲ್ಲಿ ದೇವಸ್ಥಾನ ವಠಾರದಲ್ಲಿ ಭಕ್ತಾಭಿಮಾನಿಗಳ ಸಭೆ ನಡೆಸಲಾಯಿತು.

ದೇವಸ್ಥಾನದಲ್ಲಿ ಆದ ಕಳ್ಳತನವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಪೊಲೀಸ್ ಇಲಾಖೆ ಮೇಲೆ ಒತ್ತಡ ಹಾಕಬೇಕು. ಅದು ಸಾಧ್ಯವಾಗದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಮಾಡಬೇಕಾದ ಹೋರಾಟದ ಬಗ್ಗೆ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ರಾಜಗೋಪಾಲ್ ಹೆಬ್ಬಾರ್, ಸೂರಜ್ ಹೆಬ್ಬಾರ್, ಆಡಳಿತ ಸಿಬ್ಬಂದಿಗಳು, ಬಜರಂಗದಳ ಮತ್ತು ಹಿಂದೂ ಪರಿಷತ್ತಿನ ಸದಸ್ಯರು ಮತ್ತು ಊರಿನ ನೂರಾರು ಭಕ್ತಾಭಿಮಾನಿಗಳು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು