News Karnataka Kannada
Sunday, April 28 2024
ಮಂಗಳೂರು

ಬೆಳ್ತಂಗಡಿ: ಭಕ್ತರಿಗೆ ತೃಪ್ತಿ ಆದರೆ ಭಗವಂತನಿಗೂ ತೃಪ್ತಿಯಾಗುತ್ತದೆ- ಡಿ. ವೀರೇಂದ್ರ ಹೆಗ್ಗಡೆ

The devotees are satisfied but the Lord is also satisfied- D. Veerendra Heggade
Photo Credit : By Author

ಬೆಳ್ತಂಗಡಿ: ಸಂಗೀತ ಮತ್ತು ಸ್ತುತಿ ಸೇವೆ ದೇವರಿಗೆ ಅತ್ಯಂತ ಪ್ರಿಯವಾಗಿದ್ದು ಸುಶ್ರಾವ್ಯವಾಗಿ ಇವುಗಳನ್ನು ಹಾಡಿ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು. ಭಕ್ತರಿಗೆ ತೃಪ್ತಿ ಆದರೆ ಭಗವಂತನಿಗೂ ತೃಪ್ತಿಯಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಸುರತ್ಕಲ್‍ನ ಮಣಿಕೃಷ್ಣ ಅಕಾಡೆಮಿ ಆಶ್ರಯದಲ್ಲಿ ಧರ್ಮಸ್ಥಳ ಕ್ಷೇತ್ರದ ಬಗ್ಯೆ ರಚಿಸಿ ಪ್ರಕಟಿಸಿದ “ಮಂಜುನಾದ” ಕೃತಿಗಳನ್ನು ಭಾನುವಾರ ಧರ್ಮಸ್ಥಳದಲ್ಲಿ ವಸಂತ ಮಹಲ್‍ನಲ್ಲಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಪುರಾಣವಾಚನ, ವೇದಘೋಷ, ಸಂಗೀತ ನೃತ್ಯ, ಸ್ತುತಿ ಮೊದಲಾದ ಸೇವೆಗಳಿಂದ ನಾವು ದೇವರನ್ನು ಸಾಕ್ಷಾತ್ಕರಿಸಿ ಆರಾಧನೆ ಮಾಡಬಹುದು ಖ್ಯಾತ ಸಂಗೀತ ಕಲಾವಿದರಾದ ಡಾ. ರಾಜ್‍ಕುಮಾರ್ ಭಾರತಿ ಅವರು ಗೌರವಯುತ ಸಾಹಿತ್ಯದ ಮೂಲಕ ಸುಶ್ರಾವ್ಯವಾದ ರಾಗ ಸಂಯೋಜನೆಯೊಂದಿಗೆ ಶ್ರೀ ಮಂಜುನಾಥ ಸ್ವಾಮಿ ಬಗ್ಯೆ ರಚಿಸಿದ ಶಾಸ್ತ್ರೀಯ ಗೀತೆಗಳು ಉತ್ತಮವಾಗಿ ಮೂಡಿ ಬಂದಿವೆ ಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿ ಅಕಾಡೆಮಿಯ ಮುಂದಿನ ಕೃತಿಗಳ ಪ್ರಕಾಶನಕ್ಕೂ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಕನ್ನಡದಲ್ಲೇ ರಚಿಸಿದ ಶಾಸ್ತ್ರೀಯ ಸಂಗೀತ ಕೃತಿಗಳು ಶ್ರೀ ಸ್ವಾಮಿಗೆ ಸಂದ ಅಪೂರ್ವ ಸೇವೆಯಾಗಿದೆ ಎಂದು ಹೇಳಿ ಸುಶ್ರಾವ್ಯವಾಗಿ ಶಾಸ್ತ್ರೀಯ ಸಂಗೀತ ಹಾಡಿದ ಎಲ್ಲಾ ಕಲಾವಿದರನ್ನು ಹೆಗ್ಗಡೆಯವರು ಅಭಿನಂದಿಸಿ ಗೌರವಿಸಿದರು.

ಈ ಬಗ್ಯೆ ವಿಶೇಷ ಶ್ರಮ ವಹಿಸಿದ ಅಕಾಡೆಮಿಯ ಕಾರ್ಯದರ್ಶಿ ನಿತ್ಯಾನಂದ ರಾವ್ ಅವರ ಸೇವೆ ಸ್ತುತ್ಯಾರ್ಹವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಉಡುಪಿಯ ಪ್ರೊ. ಅರವಿಂದ ಹೆಬ್ಬಾರ್ ಮತ್ತು ಡಾ. ರಾಜಕುಮಾರ್ ಭಾರತಿ ಶುಭಾಶಂಸನೆ ಮಾಡಿದರು.

ಅಧ್ಯಕ್ಷತೆ ವಹಿಸಿದ ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಮಾತನಾಡಿ, ಪುಣ್ಯಕ್ಷೇತ್ರಗಳ ಬಗ್ಯೆ ಶಾಸ್ತ್ರೀಯ ಸಂಗೀತದ ಕೃತಿಗಳನ್ನು ಪ್ರಕಟಿಸುವುದು ಸ್ತುತ್ಯಾರ್ಹವಾಗಿದೆ. ಧರ್ಮಸ್ಥಳ ಕ್ಷೇತ್ರದಿಂದ ಶುಭಾರಂಭಗೊಂಡ ಈ ಕಾರ್ಯ ಯಶಸ್ವಿಯಾಗಲೆಂದು ಹಾರೈಸಿದರು. ಪ್ರೀತಿ-ವಿಶ್ವಾಸ ಹಾಗೂ ದೃಢ ಭಕ್ತಿಯಿಂದ ಶಾಸ್ತ್ರೀಯ ಸಂಗೀತ ಹಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವರ್ಧನೆಯೊಂದಿಗೆ ಶಾಂತಿ, ನೆಮ್ಮದಿ ಸಿಗುತ್ತದೆ.

ಸುಶ್ರಾವ್ಯ ಸಂಗೀತವನ್ನು ಎಲ್ಲರೂ ಇಲ್ಲಿ ಕೇಳಿ, ಆನಂದಿಸಿ ಅನುಭವಿಸಿದ್ದೇವೆ ಎಂದು ಅವರು ಸಂಗೀತ ಕಲಾವಿದರನ್ನು ಶ್ಲಾಘಿಸಿ ಅಭಿನಂದಿಸಿದರು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಂಗೀತ ಅಭ್ಯಾಸಕ್ಕೆ ಅವಕಾಶ ನೀಡಲಾಗಿದ್ದು. ಯುವ ಜನತೆ ಕೇವಲ ವಿದ್ಯಾವಂತರಾದರೆ ಸಾಲದು.ಪ್ರಜ್ಞಾವಂತರೂ ಆಗಬೇಕು ಎಂದು ಅವರು ಸಲಹೆ ನೀಡಿದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಮತ್ತು ಹರಿಕೃಷ್ಣ ಪುನರೂರು ಉಪಸ್ಥಿತರಿದ್ದರು.
ಮಣಿಕೃಷ್ಣ ಅಕಾಡೆಮಿ ಅಧ್ಯಕ್ಷ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ಕಾರ್ಕಳದ ಡಾ. ಎಸ್.ಆರ್. ಅರುಣಕುಮಾರ್ ಧನ್ಯವಾದವಿತ್ತರು. ಉಡುಪಿಯ ರಾಮಾಂಜನೇಯ ಮತ್ತು ಶ್ರೀನಿವಾಸರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು