News Karnataka Kannada
Friday, May 17 2024
ಮಂಗಳೂರು

ಅಪಾರ್ಟ್‌ಮೆಂಟ್ ಖರೀದಿ ಮೇಲೆ 10% ಹಬ್ಬದ ರಿಯಾಯತಿ ಘೋಷಿಸಿದ ʼಸನ್‌ಶೈನ್ ಸ್ಯಾಪ್ಲಿಂಗ್‌ʼ

Photo Credit : News Kannada

ಮಂಗಳೂರು: ಉತ್ಕೃಷ್ಟ ಗುಣಮಟ್ಟದ ಕಾಮಗಾರಿ, ವಿಶಾಲ ಹಸಿರು ವಲಯ, ಸಮರ್ಪಕ ವಾಹನ ನಿಲುಗಡೆ ವ್ಯವಸ್ಥೆಯ ಜೊತೆಗೆ ಸುಸಜ್ಜಿತ ಸೌಕರ್ಯಗಳ ಸನ್‌ಶೈನ್ ಸ್ಯಾಪ್ಲಿಂಗ್ ವಸತಿ ಮತ್ತು ವಾಣಿಜ್ಯ ಸಂಕೀರ್ಣದ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದು, ಅಕ್ಟೋಬರ್ 15 ರಿಂದ 24 ರ ಸೀಮಿತ ಅವಧಿಗೆ ಆದ್ಯತೆಯ ಮೇರೆಗೆ ಅಪಾರ್ಟ್‌ಮೆಂಟ್ ಖರೀದಿಯ ಮೇಲೆ 10% ವಿಶೇಷ ಹಬ್ಬದ ರಿಯಾಯತಿಯನ್ನು ಘೋಷಿಸಲಾಗಿದೆ ಎಂದು ಸನ್‌ಶೈನ್ ಮಲ್ಟಿವೆಂಚರ್ಸ್ ಪ್ರೈವೆಟ್ ಲಿಮಿಟೆಡ್ ಮಾಹಿತಿ ನೀಡಿದೆ.

ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆರು ಕಿಮೀ ಅಂತರದಲ್ಲಿ, ಬಜ್ಪೆ – ಕೈಕಂಬ ದಾರಿಯಲ್ಲಿ ನಿರ್ಮಾಣ ಹಂತದಲ್ಲಿರುವ ನೆಲ, ತಳ ಮತ್ತು ನಾಲ್ಕು ಮಜಲುಗಳ ಸನ್‌ಶೈನ್ ಸ್ಯಾಪ್ಲಿಂಗ್ ಸಂಕೀರ್ಣದಲ್ಲಿ 770 ಚದರ ಅಡಿ ವಿಸ್ತಾರದ ಒಂದು ಬೆಡ್‌ರೂಮ್‌ನ ನಾಲ್ಕು , 1350 ಹಾಗೂ 1450 ಚದರ ಅಡಿ ವಿಸ್ತಾರದ ಎರಡು ಬೆಡ್‌ರೂಮ್‌ನ ಹನ್ನೆರಡು ಮತ್ತು 1970 ಚದರ ಅಡಿ ವಿಸ್ತಾರದ ಮೂರು ಬೆಡ್‌ರೂಮ್‌ನ ನಾಲ್ಕು ಅಪಾರ್ಟ್‌ಮೆಂಟ್‌ಗಳು ಲಭ್ಯವಿದ್ದು, ಬೆಲೆ ಚದರ ಅಡಿಗೆ ರೂ. 4,100/- ರಿಂದ ಆರಂಭವಾಗುತ್ತದೆ. ಕಾವೂರು – ಕಿನ್ನಿಗೋಳಿ ಮತ್ತು ವಾಮಂಜೂರು – ಮೂಡಬಿದ್ರೆ ಹೆದ್ದಾರಿಗಳು ಚತುಷ್ಪಥ ರಸ್ತೆಗಳಾಗಿ ಅಭಿವೃದ್ದಿಗೊಳ್ಳುತ್ತಿದ್ದು, ಶೈಕ್ಷಣಿಕ, ಧಾರ್ಮಿಕ, ಆರೋಗ್ಯ ಕೇಂದ್ರ ಮತ್ತು ದಿನಸಿ ಮತ್ತು ವ್ಯಾಪಾರಿ ಮಳಿಗೆಗಳು ಸಂಕೀರ್ಣದಿಂದ ಕೂಗಳತೆಯ ದೂರದಲ್ಲಿವೆ. ಹೂಡಿಕೆಯ ದೃಷ್ಟಿಯಿಂದ ಖರೀದಿ ಮಾಡುವವರಿಗೂ ಅತ್ಯಲ್ಪ ಅವಧಿಯಲ್ಲಿ ದ್ವಿಗುಣ ಪ್ರತಿಫಲ ಸಿಗುವ ನಿರೀಕ್ಷೆಯಿದೆ ಎಂದು ಪ್ರವರ್ತಕರು ತಿಳಿಸಿದ್ದಾರೆ.

ನವೆಂಬರ್ 2024 ಕ್ಕೆ ಅಪಾರ್ಟ್‌ಮೆಂಟ್‌ಗಳು ವಾಸಕ್ಕೆ ಲಭ್ಯವಿದ್ದು, ಎಲ್ಲಾ ಬ್ಯಾಂಕ್ ಆನಿ ಗೃಹ ಸಾಲ ಸಂಸ್ಥೆಗಳಿಂದ ಸಾಲ ಸೌಲಭ್ಯ ದೊರೆಯಲಿದೆ.

ಹೆಚ್ಚಿನ ಮಾಹಿತಿಗಾಗಿ +91 7483037734 ದೂರವಾಣಿ ಅಥವಾ ಜಾಲತಾಣ www.saplingmvpl.com ಕ್ಕೆ ಭೇಟಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು