News Karnataka Kannada
Saturday, April 13 2024
Cricket
ಮಂಗಳೂರು

ಸುಳ್ಯ: ಕೇರಳ ಮೂಲದ ಕಾರ್ಮಿಕನ ಪತ್ತೆಗಾಗಿ ಮುಂದುವರಿದ ಶೋಧ ಕಾರ್ಯ

Sullia: Search operation underway to trace Kerala-based labourer
Photo Credit : News Kannada

ಸುಳ್ಯ: ಆಲೆಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ಹೊಳೆ ದಾಟುತ್ತಿರುವ ವೇಳೆಯಲ್ಲಿ ಜು.6 ರ ಸಂಜೆ ಹೊಳೆಗೆ ಬಿದ್ದು ಕೊಚ್ಚಿಕೊಂಡು ಹೋಗಿರುವ ಕಾರ್ಮಿಕ‌ ನಾಪತ್ತೆಯಾಗಿದ್ದು ಶೋಧ ಕಾರ್ಯಾಚರಣೆ ಶುಕ್ರವಾರ ಬೆಳಗ್ಗಿನಿಂದ ಆರಂಭಗೊಂಡರರೂ ಕಾರ್ಮಿಕನ‌ ಸುಳಿವು ಲಭ್ಯವಾಗಿಲ್ಲ.

ಎಸ್.ಡಿ.ಆರ್.ಎಫ್ ಹಾಗೂ ಅಗ್ನಿಶಾಮಕ ದಳ ತಂಡದ ಸುಮಾರು 15-20 ಮಂದಿ ಆಗಮಿಸಿ ಮೆಷಿನ್ ಬೋಟ್ ಬಳಸಿ‌ ಹುಡುಕಾಟ ನಡೆಸಿದರು. ಸ್ಥಳೀಯ ಮುಳುಗು ತಜ್ಞರು ಆಗಮಿಸಿ ನೀರಿನಲ್ಲಿ ಮುಳುಗಿ ಹುಡುಕಾಟ ನಡೆಸಿದರು. ಸ್ಥಳಕ್ಕೆ ಸಹಾಯಕ ಕಮಿಷನರ್ ಗಿರೀಶ್ ನಂದನ್ ಕುಮಾರ್ ಭೇಟಿ ನೀಡಿದ್ದಾರೆ.

ಸುಳ್ಯತಹಶಿಲ್ದಾರ್ ಮಂಜುನಾಥ್, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಸಬ್ ಇನ್ಸ್ ಪೆಕ್ಟರ್ ಈರಯ್ಯ ದೂಂತೂರು‌,ಕಂದಾಯ ಇಲಾಖೆಯ ನಾರಾಯಣ ಸ್ಥಳೀಯ ಅಧಿಕಾರಿಗಳು ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಬೆಳಗ್ಗಿನಿಂದ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸತೊಡಗಿದ್ದರು.

ಶುಕ್ರವಾರದ ಶೋಧ ಕಾರ್ಯವನ್ನು ಸಂಜೆ ತನಕ ಮುಂದುವರಿಸಿ ಇಂದು ಕೂಡ ಶೋಧ ಕಾರ್ಯ ನಡೆಸಿದರೂ ಪ್ರಯೋಜನವಾಗಲಿಲ್ಲ ಎಂದು ತಿಳಿದು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು