News Karnataka Kannada
Monday, April 29 2024
ಮಂಗಳೂರು

ಪ್ರಕೃತಿ ಚಿಕಿತ್ಸೆ ದಿನದ ಅಂಗವಾಗಿ ಯೆನೆಪೋಯದಿಂದ ಬೀದಿನಾಟಕ

Street play by Yenepoya as part of Naturopathy Day
Photo Credit : News Kannada

ಮಂಗಳೂರು: ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳಿಂದ 6 ನೇ ರಾಷ್ಟೀಯ ಪ್ರಕೃತಿ ಚಿಕಿತ್ಸೆ ದಿನಾಚರಣೆ ಅಂಗವಾಗಿ ನಾಟೆಕಲ್ ಬಸ್ಟ್ಯಾಂಡ್ ಬಳಿ ನ.18ರಂದು ಬೀದಿನಾಟಕ ಆಯೋಜಿಸಲಾಯಿತು.

ಜನರಿಗೆ ಪ್ರಕೃತಿ ಚಿಕಿತ್ಸೆಯ ಮಹತ್ವವನ್ನು ನಾಟಕದ ಮೂಲಕ ಅರಿವು ಮೂಡಿಸಲಾಯಿತು. ಪ್ರಕೃತಿಯಲ್ಲಿ ಸಿಗುವಂತಹ ಆಹಾರದ ಪ್ರಾಮುಖ್ಯತೆ ತಿಳಿಸಲಾಯಿತು. ದಿನನಿತ್ಯ ಯೋಗಾಭ್ಯಾಸ ಮಾಡುವುದರ ಮೂಲಕ ಮಾನಸಿಕ ಅರೋಗ್ಯ ವೃದ್ಧಿಗೆ ಸಹಾಯಕವಾಗುತ್ತದೆ ಎಂಬ ಮಾಹಿತಿ ಹಂಚಿಕೊಳ್ಳಲಾಯಿತು.

“ಪ್ರಕೃತಿಯೇ ಚಿಕಿತ್ಸಕ” ಎಂಬ ಮಾತಿನ ಸಾರಾಂಶದ ಮೂಲಕ ಜನರಿಗೆ ಈ ಬೀದಿನಾಟಕ ಪ್ರದರ್ಶಿಸಲಾಯಿತು. ಯೆನೆಪೋಯದ ಶಿಬಿರಾಧಿಕಾರಿ ರಜಾಕ್‌, ಮಂಜನಾಡಿ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಹಾಗೂ ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ವ್ಯದ್ಯಾಧಿಕಾರಿಗಳಾದ ಡಾ. ಶಗುಪ್ತ, ಡಾ. ಅರ್ಪಿತ್ ಕುಮಾರ್ ಮತ್ತು ಅಜಿತ್ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು