News Karnataka Kannada
Wednesday, May 01 2024
ಮಂಗಳೂರು

ಇಂದು ಮಂಗಳೂರು-ಮಡಂಗಾವ್‌ ವಂದೇ ಭಾರತ್‌ ಗೆ ಪ್ರಧಾನಿ ಚಾಲನೆ

PM to launch Mangaluru-Madgaon Vande Bharat today
Photo Credit : News Kannada

ಮಂಗಳೂರು: ಮಂಗಳೂರು-ಮಡಂಗಾವ್ ವಂದೇ ಭಾರತ್ ರೈಲಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮಂಗಳೂರು ಸೆಂಟ್ರಲ್‌ನಿಂದ ಮಂಗಳೂರು-ಮಡಗಾಂವ್ ಮೊದಲ ರೈಲು ಸೇವೆ ಆರಂಭಿಸಲಿದೆ.

ವಾರದ ಆರು ದಿನ ಮಂಗಳೂರಿನಿಂದ ಮಡಂಗಾವ್‌ಗೆ ಈ ವಂದೇ ಭಾರತ್ ರೈಲು ಓಡಾಟ ನಡೆಸಲಿದೆ. ಬೆಳಗ್ಗೆ 8.30 ಕ್ಕೆ ಮಂಗಳೂರಿನಿಂದ ಹೊರಟು ಮಧ್ಯಾಹ್ನ 1.15ಕ್ಕೆ ಮಡಗಾಂವ್ ತಲುಪಲಿದೆ. ಸಂಜೆ 6.10 ಕ್ಕೆ ಮಡಂಗಾವ್‌ನಿಂದ ಹೊರಟರೆ ರಾತ್ರಿ 10.45 ರ ವೇಳೆಗೆ ಮಂಗಳೂರು ಸೆಂಟ್ರಲ್ ತಲುಪಲಿದೆ.

ಮಂಗಳೂರು ಸೆಂಟ್ರಲ್-ಮಡಂಗಾವ್ ನಡುವಿನ ರೈಲು ತನ್ನ ಪ್ರಾಯೋಗಿಕ ಓಡಾಟವನ್ನು ಯಶಸ್ವಿಯಾಗಿ ಮುಗಿಸಿರುವುದು ಈ ಭಾಗದ ಪ್ರಯಾಣಿಕರಿಗೆ ಸಂತಸ ಮೂಡಿಸಿದೆ. ಕಡಲ ನಗರಿಗೂ ವಂದೇ ಭಾರತ್‌ ಸೇವೆ ಸಿಗಬೇಕೆಂದು ಬಯಸುತ್ತಿದ್ದ ಕರಾವಳಿಯ ಮಂದಿ ಈ ರೈಲಿನ ಆಗಮನದಿಂದ ನಿಜಕ್ಕೂ ಖುಷಿಯಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು