News Karnataka Kannada
Monday, April 29 2024
ಮಂಗಳೂರು

ಮೂಡುಬಿದಿರೆ: ಬಲಿಪ ಕುಟುಂಬಕ್ಕೆ ಪ್ರಧಾನಿ ಮೋದಿ ಸಂತಾಪ ಸಂದೇಶ

PM Modi sends condolences to balipa's family
Photo Credit : News Kannada

ಮೂಡುಬಿದಿರೆ: ಬಲಿಪ ನಾರಾಯಣ ಭಾಗವತರ ನಿಧನಕ್ಕೆ ಟ್ವೀಟ್ ಮೂಲಕ ಕೂಡಲೇ ಸಂತಾಪ ಸೂಚಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಇದೀಗ ಬಲಿಪ ಪರಿವಾರಕ್ಕೆ ಸಂತಾಪ ಸಂದೇಶ ರವಾನಿಸಿ ಗಮನ ಸೆಳೆದಿದ್ದಾರೆ.

ಮೋದಿಯವರ ಸಂತಾಪ ಸಂದೇಶ ಬುಧವಾರ ಬಲಿಪರ ಉತ್ತರ ಕ್ರಿಯೆ, ಸಮಾರಾಧನೆ, ಯಕ್ಷಗಾನ ನುಡಿ, ನಮನ ನಡೆಯುತ್ತಿದ್ದ ಸಂದರ್ಭದಲ್ಲೇ ತಲುಪಿರುವುದು ವಿಶೇಷತೆಯಾದರೆ ಯಕ್ಷರಂಗದ ಮಹಾನ್ ಭಾಗವತರೋರ್ವರಿಗೆ ಗೌರವ ಸಲ್ಲಿಸುವ ಮೂಲಕ ಪ್ರಧಾನಿ ಮೋದಿ ಗಮನ ಸೆಳೆದಿದ್ದಾರೆ.

ಕಳೆದ ಫೆ 21 ರಂದು ಬಲಿಪರ ಪುತ್ರ ಬಲಿಪ ಶಿವಶಂಕರ ಭಾಗವತರನ್ನು ಉದ್ದೇಶಿಸಿ ಬರೆದಿರುವ ಸಂತಾಪ ಸಂದೇಶದ ಪತ್ರದಲ್ಲಿ ಪ್ರಧಾನಿ ಮೋದಿಯವರು ಬಲಿಪ ನಾರಾಯಣ ಭಾಗವತ ಜೀ ಅವರ ನಿಧನದ ಬಗ್ಗೆ ತಿಳಿದು ನನಗೆ ತುಂಬಾ ನೋವಾಗಿದೆ. ತೀವ್ರ ದುಃಖದ ಈ ಘಳಿಗೆಯಲ್ಲಿ ಕುಟುಂಬದೊಂದಿಗೆ ನನ್ನ ಆಳವಾದ ಸಂತಾಪವಿದೆ. ಪ್ರಖ್ಯಾತ ಯಕ್ಷಗಾನ ಕಲಾವಿದ ಬಲಿಪ ನಾರಾಯಣ ಭಾಗವತ ಜೀ ಅವರು ತಮ್ಮ ಜೀವನದುದ್ದಕ್ಕೂ ಈ ವಿಶಿಷ್ಟ ಕಲಾ ಪ್ರಕಾರಕ್ಕೆ ಸಮರ್ಪಿತರಾಗಿದ್ದರು. ಅವರ ಸರಿಯಾದ ಶೈಲಿಯ ಗಾಯನವು ಎಲ್ಲೆಡೆಯಿಂದಲೂ ಮೆಚ್ಚುಗೆ ಪಡೆಯಿತು. ಯಕ್ಷಗಾನವನ್ನು ಜನಪ್ರಿಯಗೊಳಿಸುವಲ್ಲಿ ಮತ್ತು ಅದರ ನಿರೂಪಣೆಗೆ ತಮ್ಮ ಕೊಡುಗೆ ಸಲ್ಲಿಸುವಲ್ಲಿ ಅವರ ಕೊಡುಗೆ ಯುವ ಕಲಾವಿದರ ಪೀಳಿಗೆಗೆ ಸ್ಪೂರ್ತಿ ನೀಡುತ್ತದೆ.

ನಿಮ್ಮ ಆಳವಾದ ನಷ್ಟವನ್ನು ಪದಗಳಲ್ಲಿ ವ್ಯಕ್ತಪಡಿಸಲಾಗುವುದಿಲ್ಲ ಎಂದು ಮನೆ ಮಂದಿಗೆ ಸಾಂತ್ವನ ಹೇಳಿದರು ಪ್ರಧಾನಿಯವರು ಬಲಿಪ ನಾರಾಯಣ ಭಾಗವತರು ಭೌತಿಕವಾಗಿ ನಮ್ಮ ನಡುವೆ ಇಲ್ಲ, ಆದರೆ ಅವರು ತುಂಬಿದ ಮೌಲ್ಯಗಳು ಮತ್ತು ಆದರ್ಶಗಳು ನಿರಂತರವಾಗಿಮಾರ್ಗದರ್ಶನ ನೀಡುತ್ತಲೇ ಇರುತ್ತವೆ. ಈ ತುಂಬಲಾರದ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನೀಡಲಿ.ಓಂ ಶಾಂತಿ ಎಂದು ಉಲ್ಲೇಖಿಸಿದ್ದಾರೆ.

ಕಳೆದ ಫೆ 17ರಂದು ಬಲಿಪರ ನಿಧನದ ಹಿನ್ನೆಲೆಯಲ್ಲಿ ಬಲಿಪರು ವಿಶ್ವ ಸಂಸ್ಕೃತಿಯಲ್ಲಿ ಗುರುತು ದಾಖಲಿಸಿದವರು. ತನ್ನ ಬದುಕನ್ನೇ ಯಕ್ಷಗಾನ ಬಾಗವತಿಕೆಗಾಗಿ ಮುಡಿಪಾಗಿಟ್ಟವರು, ಅವರ ವಿಶಿಷ್ಠ ಶೈಲಿಗೆ ಹೆಸರಾದವರು ಅವರ ಕೊಡುಗೆಗಳು ಮುಂದಿನ ಜನಾಂಗಕ್ಕೆ ಅಭಿಮಾನ ಮೂಡಿಸುವಂತಹದ್ದು ಎಂದು ಟ್ವೀಟರ್ನಲ್ಲಿ ಬರೆದುಕೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು