ಮಂಗಳೂರು: ನವ ಚೈತನ್ಯ ಕೆಎಂಸಿ ಬಿಜೈ ವತಿಯಿಂದ ಕೆಎಂಸಿ 1ನೇ ಮಹಡಿಯಲ್ಲಿ 2024ರ ಹೊಸ ವರ್ಷ ಆಚರಣೆ ಪ್ರಯುಕ್ತ ಯೋಗ ತರಗತಿಯನ್ನು ಇಂದು (ಜ. 13) ಬೆಳಗ್ಗೆ 10 ಗಂಟೆಗೆ ಆಚರಿಸಲಾಗುತ್ತಿದೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಂಗಳೂರು ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕರಾಗಿರುವ ಡಾ. ಮೀನಾಕ್ಷಿ ಶೆಟ್ಟಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಿ ಪ್ರಸಾದ್ ಆರ್ ಹೆಗ್ಡೆ ವಹಿಸಿಕೊಳ್ಳಲಿದ್ದಾರೆ.
ಕಾರ್ಯಕ್ರಮದ ಗೌರವ ಅತಿಥಿಯಾಗಿ ಮಂಗಳೂರಿನ ಬಿಜೈ ಕೆಎಂಸಿ ಫಿಸಿಯೋಲಜಿ ವಿಭಾಗದ ಪ್ರೊಫೆಸರ್ ಮತ್ತು ಎಚ್ಓಡಿ ಅನುಪಮಾ ಎನ್ ಹಾಗೂ ಬಯೋಕೆಮಿಸ್ಟ್ರಿ ಸೆಂಟರ್ ಫಾರ್ ಬೇಸಿಕ್ ಸೈನ್ಸ್ ವಿಭಾಗದ ಪ್ರೊಫೆಸರ್ ಮತ್ತು ಹೆಚ್ ಓ ಡಿ ಡಾ. ರುಕ್ಮಿಣಿ ಎಂ ಎಸ್ ಭಾಗಿಯಾಗಲಿದ್ದಾರೆ.
ಈ ಸಮಾರಂಭದ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಎರಡನೇ ಮಹಡಿಯಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.