News Karnataka Kannada
Saturday, April 27 2024
ಮಂಗಳೂರು

ಅ. 10ರಂದು ಮಣಿಪಾಲ ಮಾಹೆಯಲ್ಲಿ “ರಾಷ್ಟ್ರೀಯ cGMP ದಿನ 

October 10 is "National CGMP Day" at Manipal Mahe 
Photo Credit : News Kannada
ಮಣಿಪಾಲ: ಮಾಹೆ ಯಾ ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ (MCOPS) ನಲ್ಲಿರುವ cGMP ಕೇಂದ್ರವು ಮೊಟ್ಟಮೊದಲ ಬಾರಿಗೆ  “ರಾಷ್ಟ್ರೀಯ cGMP ದಿನವನ್ನು ಘೋಷಿಸಲು ಉತ್ಸುಕವಾಗಿದೆ”. ಇದು ಅಕ್ಟೋಬರ್ 10, 2023 ರಂದು ನಡೆಯಲಿದೆ. ಈ ಮಹತ್ವದ ಸಂದರ್ಭವು MCOPS ನ ವಜ್ರ ಮಹೋತ್ಸವ ಮತ್ತು ಅದರ ದಾರ್ಶನಿಕ ಸಂಸ್ಥಾಪಕ ಡಾ. ಟಿಎಮ್ಎ ಪೈ,   125 ನೇ ಜನ್ಮ ವಾರ್ಷಿಕೋತ್ಸವದ ಭಾಗವಾಗಿದೆ.
ರಾಷ್ಟ್ರೀಯ ಸಿಜಿಎಂಪಿ ದಿನ’ ಆಚರಣೆಯು ಔಷಧೀಯ ಉದ್ಯಮದಲ್ಲಿ ಉತ್ಪನ್ನಗಳ ಗುಣಮಟ್ಟ ಮತ್ತು ಸುರಕ್ಷೆಯನ್ನು ಕಾಯ್ದುಕೊಳ್ಳುವಲ್ಲಿ ‘ಕರೆಂಟ್‌ ಗುಡ್‌ ಮಾನ್ಯಫ್ಯಾಕ್ಚರಿಂಗ್‌ ಪ್ರಾಕ್ಟೀಸಸ್‌-ಸಿಜಿಎಂಪಿ’ಯ ಪಾತ್ರದ ಕುರಿತು ಜಾಗೃತಿಯನ್ನು ಮೂಡಿಸುವ ಆಶಯವನ್ನು ಹೊಂದಿದೆ. ಸಿಜಿಎಂಪಿ ಕೇಂದ್ರದ ಸಂಯೋಜಕರಾದ ಡಾ. ಗಿರೀಶ್‌ ಪೈ ಕೆ. ಕಾರ್ಯಕ್ರಮದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತ, ‘ಔಷಧ ವಿಜ್ಞಾನಕ್ಕೆ ಸಂಬಂಧಿಸಿದ ಶೈಕ್ಷಣಿಕ ಮತ್ತು ಉದ್ಯಮ- ಎರಡೂ ಕ್ಷೇತ್ರಗಳಲ್ಲಿ ಗುಣಮಟ್ಟದ ಕಾಯ್ದುಕೊಳ್ಳುವಿಕೆಗೆ ಈ ದಿನಾಚರಣೆಯು ಒತ್ತು ನೀಡುತ್ತದೆ’ ಎಂದರು.
ಅಕ್ಟೋಬರ್‌ 10 ನ್ನು ರಾಷ್ಟ್ರೀಯ ಸಿಜಿಎಂಪಿ ದಿನವನ್ನಾಗಿ ಆಯ್ದುಕೊಳ್ಳುವುದಕ್ಕೆ ಮಹತ್ತ್ವದ ಕಾರಣವಿದೆ. ಐತಿಹಾಸಿಕ ಥಾಲಿಡೊಮೈಡ್‌ ದುರಂತದ ಬಳಿಕ 1962 ಅಕ್ಟೋಬರ್‌ 2 ರಂದು ಅಂತಾರಾಷ್ಟ್ರೀಯ ನಿಯಂತ್ರಕ ಸಂಸ್ಥೆ [ಇಂಟರ್‌ನ್ಯಾಶನಲ್‌ ರೆಗ್ಯುಲೇಟರಿ ಏಜೆನ್ಸೀಸ್‌]ಗಳು ಪ್ರಮುಖವಾದ ತಿದ್ದುಪಡಿಗಳನ್ನು ತಂದವು.  ಈ ತಿದ್ದುಪಡಿಯು ಉತ್ಪಾದಕರು ಔಷಧ ಬಳಕೆಯ ಸುರಕ್ಷೆ ಮತ್ತು ಪರಿಣಾಮಕಾರಿತ್ವಗಳನ್ನು ವೈಜ್ಞಾನಿಕವಾಗಿ ಪ್ರಮಾಣೀಕರಿಸಬೇಕಾದ ಅಗತ್ಯವಿರುವ ಕ್ರಾಂತಿಕಾರಕ ಬೆಳವಣಿಗೆಗೆ ಕಾರಣವಾಯಿತು.
ಪ್ರತಿವರ್ಷ ‘ರಾಷ್ಟ್ರೀಯ ಸಿಜಿಎಂಪಿ ದಿನ ’ ದ ಆಚರಣೆಯು ಗುಣಮಟ್ಟದಲ್ಲಿಲ್ಲದಿರುವ [ನಾಟ್‌ ಆಫ್‌ ಸ್ಟ್ಯಾಂಡರ್ಡ್‌ ಕ್ವಾಲಿಟಿ – ಎನ್‌ಎಸ್‌ಕ್ಯೂ] ಉತ್ಪನ್ನಗಳು, ದತ್ತಾಂಶ ಸಮಗ್ರತೆಯ ಸಮಸ್ಯೆಗಳು, ಅಂಗೀಕಾರ, ಸ್ಥಿರತೆ, ಗುರುತುಪಟ್ಟಿಯ ದೋಷಗಳು,    ಹಿಂತೆಗೆದುಕೊಳ್ಳುವಿಕೆ, ನಿರ್ವಹಣೆಯ ಕುರಿತ ದೂರುಗಳು, ಚಾಲ್ತಿಯಲ್ಲಿಲ್ಲದಿರುವುದು ಮೊದಲಾದವುಗಳನ್ನು ಒಳಗೊಂಡಂತೆ ಪ್ರಮುಖ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದೆ.
  ಮಾಹೆಯ ಉಪಕುಲಪತಿಗಳಾದ ಲೆ. ಜ. [ಡಾ.] ಎಂ. ಡಿ. ವೆಂಕಟೇಶ್‌ ಮತ್ತು ಕುಲಸಚಿವರಾದ ಡಾ. ಪಿ. ಗಿರಿಧರ ಕಿಣಿ ಅವರು  ಅಧಿಕೃತ ವಿಷಯವಾದ ‘ ಸಿಜಿಎಂಪಿ : ಆರೋಗ್ಯ ರಕ್ಷಕ ಕ್ಷೇತ್ರದಲ್ಲಿ ಪರಿವರ್ತನೆ’ [ಸಿಜಿಎಂಪಿ: ಟ್ರಾನ್ಸ್‌ಫಾರ್ಮಿಂಗ್‌ ಹೆಲ್ತ್‌ಕೇರ್‌] ಯನ್ನು ಜುಲೈ 7, 2023 ರಂದು ಅನಾವರಣಗೊಳಿಸಿದ್ದಾರೆ, ಉತ್ತಮ ಆರಂಭ ಮತ್ತು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ವಿವಿಧ ಉದ್ಯಮ ಘಟಕಗಳೊಂದಿಗೆ ಸಹಯೋಗವನ್ನು ಸಾಧ್ಯವಾಗಿಸಿರುವುದಕ್ಕಾಗಿ ಸಿಜಿಎಂಪಿ ಕೇಂದ್ರವನ್ನು ಉಪಕುಲಪತಿಗಳು ಶ್ಲಾಘಿಸಿದ್ದಾರೆ.
ಐಡಿಎಂಎ ಯ ರಾಷ್ಟ್ರೀಯ ಅಧ್ಯಕ್ಷ ಗುಜರಾತ್‌ನ ಡಾ. ವಿರಾಂಚಿ ಸಾಹ್‌, ಭಾರತದ ಔಷಧ ನಿಯಂತ್ರಕದ ಪ್ರಧಾನರಾದ ದೆಹಲಿಯ ಡಾ. ರಾಜೀವ್‌ ಸಿಂಗ್‌ ರಘುವಂಶಿ, ಔಷಧ ರಫ್ತು ಉತ್ತೇಜಕ ಮಂಡಳಿಯ ಅಧ್ಯಕ್ಷ ಹೈದ್ರಾಬಾದ್‌ನ ಡಾ. ಎಸ್‌. ವಿ. ವೀರಮಣಿ, ಕೆಡಿಪಿಎಂಎ ಯ ಅಧ್ಯಕ್ಷ ಹರೀಶ್‌ ಕೆ. ಜೈನ್‌, ಐಡಿಎಂಎ ಯ ಎಲ್ಲ ರಾಜ್ಯ ಮಂಡಳಿಗಳ ಮುಖ್ಯಸ್ಥರು ಮಣಿಪಾಲದಲ್ಲಿ ಜರಗಲಿರುವ ಪ್ರಥಮ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಉಡುಪಿಯ ಎಡಿಸಿ ಡಾ. ಎಸ್‌. ವಿದ್ಯಾ ಮತ್ತು ಮಂಗಳೂರು- ಉಡುಪಿ ಜಿಲ್ಲೆಗಳ ನಿಯಂತ್ರಕ ಮಂಡಳಿಯ ಅಧಿಕಾರಿಗಳು ಕೂಡ ಪಾಲ್ಗೊಳ್ಳಲಿದ್ದಾರೆ. ಉದ್ಘಾಟನೆಯ ದಿನ ಮೂರು ವಿಚಾರಣಸಂಕಿರಣಗಳು, ಕಿರುಪ್ರಾತ್ಯಕ್ಷಿಕೆ, ಒಂಬತ್ತು ಮಂದಿ ಉದ್ಯಮ ತಜ್ಞರೊಂದಿಗೆ ಸಂವಾದ ಕಾರ್ಯಕ್ರಮಗಳು ಜರಗಲಿವೆ. ಕಾರ್ಯಕ್ರಮವು ಅಂತಾರಾಷ್ಟ್ರೀಯ ನಿಯಂತ್ರಕ ಪರಿಷ್ಕಾರಗಳು, ಜಿಎಂಪಿ ಅಂಗೀಕಾರ, ಜಾಗತಿಕ ಮಾರುಕಟ್ಟೆಯ ಉತ್ಪನ್ನಗಳು, ಗುಣಮಟ್ಟ ಮತ್ತು ನಿಯಂತ್ರಕ ಸವಾಲುಗಳು, ಉತ್ಪಾದನೆ ಮತ್ತು ವಿತರಣೆಯಲ್ಲಿ ಸಿಜಿಎಂಪಿಗಳು ಮತ್ತು ಸಿಜಿಎಂಪಿ ಅನುಸರಣೆಯ ಭವಿಷ್ಯ- ಮುಂತಾದ ವಿಷಯಗಳನ್ನು ಒಳಗೊಳ್ಳಲಿದೆ.
ನಿಯಂತ್ರಕ ಅಧಿಕಾರಿಗಳನ್ನು ಮತ್ತು ಸಾರ್ವಜನಿಕರನ್ನು ಆಹ್ವಾನಿಸಿ ವಿಚಾರಸಂಕಿರಣ ಮತ್ತು ಸಂವಾದಗಳನ್ನು ಸಂಯೋಜಿಸುವ ಮೂಲಕ ಐಡಿಎಂಎ ಯ ರಾಜ್ಯ ಮಂಡಳಿಗಳು ರಾಷ್ಟ್ರಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಗಳನ್ನು ಹಮ್ಮಿಕೊಂಡಿವೆ. ರಾಷ್ಟ್ರಾದ್ಯಂತ 22 ವಿಚಾರಸಂಕಿರಣಗಳು ಜರಗಲಿವೆ.
ಸಿಜಿಎಂಪಿ ಕೇಂದ್ರ [ ಸೆಂಟರ್‌ ಫಾರ್‌ ಸಿಜಿಎಂಪಿ]ಯ ಕುರಿತು : ಸಿಜಿಎಂಪಿ ಕೇಂದ್ರ [ ಸೆಂಟರ್‌ ಫಾರ್‌ ಸಿಜಿಎಂಪಿ] ವು ಮಣಿಪಾಲ್‌ ಕಾಲೇಜ್‌ ಆಫ್‌ ಫಾರ್ಮಾಸ್ಯುಟಿಕಲ್‌ ಸಾಯನ್ಸಸ್‌ನಲ್ಲಿ ಡಾ. ಪಿ. ಗಿರೀಶ್‌ ಕಿಣಿಯವರ ನೇತೃತ್ವದಲ್ಲಿ ಸಹಸಂಯೋಜಕರಾದ ಡಾ. ಮುದ್ದುಕೃಷ್ಣ ಬಿ. ಎಸ್‌., ಡಾ. ಗಿರೀಶ್‌ ತುಂಗ, ಡಾ. ಅರವಿಂದ ಪೈ, ಡಾ. ವಾಸುದೇವ ಪೈ ಮತ್ತು ಪ್ರೊ ರವೀಂದ್ರ ಶೆಣೈ ಯು. ಅವರ ಸಹಕಾರದೊಂದಿಗೆ ಫೆಬ್ರವರಿ 11, 2021 ರಂದು ಸ್ಥಾಪನೆಗೊಂಡಿತು. ಈ ಕೇಂದ್ರಕ್ಕೆ ಉದ್ಯಮ ತಜ್ಞರಾದ ಹರೀಶ್‌ ಜೈನ್‌, ಜಿ. ಸುಂದರ್‌, ಡಾ. ರವೀಂದ್ರ ಪೈ ಮತ್ತು ಮಹೇಶ ಜೋಶಿಯವರ ಮಾರ್ಗದರ್ಶನವೂ ದೊರೆತಿದೆ.
ಸಿಜಿಎಂಪಿ ಕೇಂದ್ರವು ಔಷಧ ತಯಾರಿಕೆಯ ಉದ್ಯಮದಲ್ಲಿ ಅತ್ಯುತ್ತಮ ಗುಣಮಟ್ಟವನ್ನು ಎತ್ತಿಹಿಡಿಯುವ ಮತ್ತು ಉತ್ತೇಜಿಸುವ ಈ ಮಹತ್ತ್ವದ ಆರಂಭಿಕ ಕಾರ್ಯಕ್ರಮದಲ್ಲಿ ಉದ್ಯಮ ಮತ್ತು ಶೈಕ್ಷಣಿಕ ಕ್ಷೇತ್ರಗಳ ಔಷಧೋದ್ಯಮದ ವೃತ್ತಿಪರರನ್ನು ಪಾಲ್ಗೊಳ್ಳುವಂತೆ ಆಹ್ವಾನಿಸುತ್ತಿದೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು