News Karnataka Kannada
Wednesday, May 01 2024
ಮಂಗಳೂರು

ಮೂಡುಬಿದಿರೆ: ಕೇಂದ್ರ ಸರ್ಕಾರದಿಂದ ನಿರಾಶಾದಾಯಕ ಬಜೆಟ್- ಪದ್ಮಪ್ರಸಾದ್ ಜೈನ್

Moodbidri: Poor budget from central government: Padmaprasad Jain
Photo Credit : News Kannada

ಮೂಡುಬಿದಿರೆ: ಕೇಂದ್ರ ಸರ್ಕಾರದ 2023-24ರ ಬಜೆಟ್ ಅತ್ಯಂತ ನಿರಾಶದಾಯಕ ಬಜೆಟ್ ಆಗಿದೆ. ಈ ಬಜೆಟ್‌ನಿಂದ ಮಧ್ಯಮ ವರ್ಗಕ್ಕೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಬಜೆಟ್ ಮಧ್ಯಮ ವರ್ಗದ ನಿರೀಕ್ಷೆಗಳನ್ನು ಹುಸಿ ಮಾಡಿದೆ. ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ಗೃಹಿಣಿಯಾಗಿದ್ದಾರೆ.ಅವರ ಅಗತ್ಯತೆಗಳ ಬಗ್ಗೆ ಕಷ್ಟಗಳ ಬಗ್ಗೆ ತಿಳಿದವರಾಗಿದ್ದಾರೆ. ಆದರೆ ಈ ಸಲದ ಬಜೆಟ್ ಮಹಿಳಾ ವಿರೋಧಿ ಬಜೆಟ್ ಆಗಿದೆ ಎಂದು ಕೆಪಿಸಿಸಿ ಮಾಧ್ಯ,ಮ ಮತ್ತು ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಪದ್ಮಪ್ರಸಾದ್ ಜೈನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉಜ್ವಲ ಯೋಜನೆ ಸಬ್ಸಿಡಿಯಲ್ಲಿ 37,000 ಕೋಟಿ ಈಗ 2,200 ಕೋಟಿ, ಆದರೆ ಇಂದು 34,800 ಕೋಟಿ ಕಡಿಮೆ) ಕಾರ್ಮಿಕ ವಿರೋಧಿ ಬಜೆಟ್ 0.01 % ಅನುದಾನ ಕಡಿಮೆ, ರೈತ ವಿರೋಧಿ ಬಜೆಟ್, ರಸ ಗೊಬ್ಬರ ಸಬ್ಸಿಡಿ-2.24 ಸಿ.ಆರ್ ರಿಂದ1.75 ಸಿ.ಆರ್ ಕಡಿಮೆ, ಅಹಿಂದ ವರ್ಗದ ವಿರೋದಿ ಬಜೆಟ್, ಒಟ್ಟಿನಲ್ಲಿ ಜನ ಸಾಮಾನ್ಯರುಗಳ ವಿರೋಧಿ ಬಜೆಟ್ ಇದಾಗಿದೆ ಎಂದ ಅವರು, ಉದ್ಯೋಗ ಖಾತ್ರಿಯಲ್ಲಿ-9.8 ಸಾವಿರ ಕೋಟಿ ಇದ್ದ ಬಜೆಟ್, ಈಗ 60 ಸಾವಿರ ಕೋಟಿ ಆಹಾರ ಸಬ್ಸಿಡಿ, ಪಿ.ಎಂ. ಆವಾಸ್ ಯೋಜನೆ 11% ಅನುದಾನ ಇಳಿಕೆಯಾಗಿದ್ದು, ಅದಲ್ಲದೇ ಪಿ.ಎಂ, ಕಿಸಾನ್ ಯೋಜನೆ- 8 ಸಾವಿರ ಕೋಟಿ ಅನುದಾನ ಕಡಿಮೆ ಆಗಿದೆ. ಮಧ್ಯಮ ವರ್ಗದ, ರೈತರ, ಕಾರ್ಮಿಕರ ಆಶಯಗಳನ್ನು ಕಳೆದ 3 ವರ್ಷಗಳಲ್ಲಿ ಈ ಸರ್ಕಾರವು ನಾಶ ಮಾಡಿದೆ ಎಂದು ಆಪಾದಿಸಿದರು.

ಬಜೆಟ್ ಬಗ್ಗೆ ಬಿ.ಜೆ.ಪಿ.ಸಂಸದರು, ಮುಖಂಡರು ಹೊಗಳುತ್ತಿದ್ದಾರೆ. ಆದರೆ ಬಜೆಟ್ ಬಗ್ಗೆ ಅವರಿಗೆ ತಿಳುವಳಿಕೆ ಇಲ್ಲ. ಅವರದೇ ಪಕ್ಷದ ಆರ್ಥಿಕ ತಜ್ಞ ಎಂ.ಪಿ. ಸುಬ್ರಮಣ್ಯ ಸ್ವಾಮಿ ಈ ಬಜೆಟ್ ಬಗ್ಗೆ ದಿನಸಿ ಅಂಗಡಿಯ ಲೆಕ್ಕಪತ್ರದ ಬಜೆಟ್ ಎಂದು ಟೀಕಿಸಿದ್ದಾರೆ.

ಬಜೆಟ್‌ನ ಲಾಭ ನಷ್ಟಗಳ ಬಗ್ಗೆ ಹೇಳುವುದರ ಬದಲಾಗಿ ನಿರ್ಮಲಾ ಸೀತಾರಾಮನ್ ಯಾವ ರಾಜ್ಯದ ಸೀರೆ ಉಟ್ಟಿದ್ದಾರೆ ಅದರ ಬಣ್ಣ ಏನು ಎಂಬುದರ ಬಗ್ಗೆ ಪ್ರಚಾರ ನೀಡುತ್ತಿದ್ದಾರೆಂದ ಅವರು ಕೇಂದ್ರ ಸರ್ಕಾರದ ಬಜೆಟ್ ಕಳೆದ 8 ವರ್ಷಗಳಿಂದ ಹೇಳಿದ್ದನ್ನೇ ಹೇಳುತ್ತಾ ಅದನ್ನೇ ಮುಂದುವರೆಸಿಕೊAಡು ಬಂದಿದೆ ಎಂದು ಬಜೆಟ್ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.

ಕರ್ನಾಟಕದಿಂದ 25 ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದೇವೆ, ಎರಡು ಬಾರಿ ಸಂಸದರಾಗಿ ಹಣಕಾಸಿನ ಸಚಿವೆ ನಿರ್ಮಲ ಸೀತಾರಾಮನ್ ಅವರನ್ನು ಆಯ್ಕೆ ಮಾಡಿ ಕಳುಹಿಸಿದ್ದೇವೆ ಆದರೆ ಒಟ್ಟು ಬಜೆಟ್ ನಿಂದ ಕರ್ನಾಟಕಕ್ಕೆ ಬಿಜೆಪಿ ಸರ್ಕಾರದ ಕೊಡುಗೆ ‘ಶೂನ್ಯ’. ಕರ್ನಾಟಕದಿಂದ ಆಯ್ಕೆಯಾದ ಬಿಜೆಪಿ ಸಂಸದರಿಗೆ ಧೈರ್ಯವಾಗಿ ರಾಜ್ಯದ ಪರವಾಗಿ, ರಾಜ್ಯದ ಮತದಾರರ ಪರವಾಗಿ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡದಷ್ಟು ಅಸಮರ್ಥರೇ? ಎಂದು ಪ್ರಶ್ನಿಸಿದರು.

7 ಲಕ್ಷದವರೆಗೆ ಆದಾಯ ಇರುವವರಿಗೆ ತೆರಿಗೆ ನೀಡುವಂತಿಲ್ಲ ಎಂದು ಹೇಳುತ್ತಿದ್ದಾರೆ, ಆದರೆ ಸರ್ಕಾರದ ಮಾಹಿತಿಯ ಪ್ರಕಾರ ಆದಾಯ ಕುಕ್ಕಿದೆ, ಆರ್ಥಿಕ ಅಸಮಾನತೆ ಕುಗ್ಗಿದೆ, ದೇಶದಲ್ಲಿ ಸುಮಾರು 25 ಕೋಟಿ ಜನತೆ ಬಡತನ ರೇಖೆಗಿಂತಲೂ ಕೆಳಗಿದ್ದಾರೆ. ಇವರನ್ನು ಬಡತನದಿಂದ ಹೊರಗೆ ತರುವ ಯಾವ ಯೋಜನೆಯನ್ನು ತರಲಿಲ್ಲ, ಕೋವಿಡ್’ನಿಂದ ಕಂಪನಿಗಳು ಮುಚ್ಚಿ ಹೋಗಿವೆ ಎಂದು ಆದೆ ಬಿಜೆಪಿ ಸರ್ಕಾರವೇ ಒಪ್ಪಿಕೊಂಡಿದೆ. ಇದಕ್ಕೆ ಯಾವುದೇ ಪರಿಹಾರವನ್ನು ನೀಡಿಲ್ಲ ಕೇವಲ ತೆರಿಗೆಯನ್ನು ಕಡಿಮೆ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ ಆದಾಯವೇ ಇಲ್ಲದಾದಗ ತೆರಿಗೆ ಕಟ್ಟುವುದಾದರೂ ಹೇಗೆ? ಬಿಜೆಪಿ ಸರ್ಕಾರ ವರ್ಷಕ್ಕೆ 2ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿದ್ದರು, ಹಾಗಾದರೆ ಕಳೆದ 9 ವರ್ಷದಲ್ಲಿ ಸುಮಾರು 18 ಕೋಟಿ ಉದ್ಯೋಗ ಸೃಷ್ಟಿಸಬೇಕಾಗಿತ್ತು ಆದರೆ ಈ ಸರ್ಕಾರ ಸಂಪೂಣವಾಗಿ ವಿಫಲಗೊಂಡಿದೆ ಎಂದು ಹೇಳಿದರು.

ಬಿಜೆಪಿ ಸಂಸದರೇ ನೀವು ಕೊಟ್ಟ ಮಾತಿನಂತೆ, ಕನ್ನಡಿಗರ ಪರವಾಗಿ ಸಂಸತ್ ನಲ್ಲಿ ಧ್ವನಿ ಎತ್ತಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿದೂಗಿಸಿ, ಕನಿಷ್ಠ ಪಕ್ಷ ರಾಜ್ಯಕ್ಕೆ ನ್ಯಾಯ ಒದಗಿಸುವ ಕರ್ತವ್ಯ ನಿರ್ವಹಿಸಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು