ಮಂಗಳೂರು: ನಗರದ ಲೇಡಿ ಗೋಶ್ಚೆನ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಮಹಿಳೆ ಬಂಟ್ವಾಳ ತಾಲೂಕಿನ ಬರಿಮಾರು ಗಾಣದಪಾಲು ಪದ್ಮನಾಭ ಅವರ ಪತ್ನಿ ದೀಕ್ಷಿತಾ ಎಂದು ಗುರುತಿಸಲಾಗಿದೆ.
ತ್ರಿವಳಿಗಳಲ್ಲಿ ಒಂದು ಗಂಡು ಮಗು ಮತ್ತು ಎರಡು ಹೆಣ್ಣು ಎಂದು ವೈದ್ಯರು ತಿಳಿಸಿದ್ದಾರೆ. ಅವರಿಗೆ ಹಾಲಿನ ಬ್ಯಾಂಕಿನಿಂದ ಹಾಲು ನೀಡಲಾಗುತ್ತಿದೆ ಎಂದು ಅವರು ಹೇಳಿದರು.