ಮಂಗಳೂರು: ಬಹು ನಿರೀಕ್ಷಿತ ಇಲ್ಲ್ ಒಕ್ಕೆಲ್ ಸಿನಿಮಾದ ಟ್ರೈಲರ್ ಮಂಗಳೂರು ಪಿಲಿನಲಿಕೆ ಪ್ರತಿಷ್ಠಾನದ ವತಿಯಿಂದ ಮಂಗಳಾ ಕ್ರೀಡಾಂಗಣದ ಬಳಿಯ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ ಪಿಲಿನಲಿಕೆ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತು.
ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಹರೀಶ್ ಕುಮಾರ್, ಪಿಲಿನಲಿಕೆ ಪ್ರತಿಷ್ಢಾನದ ಅಧ್ಯಕ್ಷ ಮಿಥುನ್ ರೈ ಚಿತ್ರದ ನಿರ್ದೇಶಕ ಸಹ ನಿರ್ಮಾಪಕ ಡಾ ಸುರೇಶ ಚಿತ್ರಾಪು, ನಿರ್ಮಾಪಕ ವಾಸುದೇವ್ ಎಸ್ ಚಿತ್ರಾಪು, ಮುಲ್ಕಿ ನಗರ ಪಂಚಾಯತ್ ಸದಸ್ಯ ಯೋಗೀಶ್ ಕೋಟ್ಯಾನ್, ಡಾ.ಪ್ರಿಯಾ ಹರೀಶ್ ಮತ್ತು ಸಿನಿಮಾದಲ್ಲಿ ಅಭಿನಯಿಸಿದ ಕಲಾವಿದರು ಉಪಸ್ಥಿತರಿದ್ದರು.
ಇಲ್ಲ್ ಒಕ್ಕೆಲ್ ಸಿನಿಮಾ ಅಕ್ಟೊಬರ್ ೨೧ ರಂದು ತುಳುನಾಡಿನಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಡಾ ಸುರೇಶ್ ಚಿತ್ರಾಪು ತಿಳಿಸಿದ್ದಾರೆ.
ಇದೊಂದು ಸಂಪೂರ್ಣ ಹಾಸ್ಯಮಯ ಹಾರರ್ ಚಿತ್ರವಾಗಿದ್ದು ರಾಜ ಷ ಇದಕ್ಕೆ ಸಂಗೀತವನ್ನು ನೀಡಿ ಟಿಪ್ಪು, ರಘು ದೀಕ್ಷಿತ್, ಮೈಂ ರಾಮ್ ದಾಸ್ ಅವರು ಹಾಡಿದ ಹಾಡುಗಳು ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ಮೋಡಿ ಮಾಡುತ್ತಿದೆ. ಅದ್ವಿತಿ ಶೆಟ್ಟಿ ಈ ಚಿತ್ರದ ನಾಯಕಿ.
ಚಿತ್ರದಲ್ಲಿ ಹಾಸ್ಯ ದಿಗ್ಗಜರಾದ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರ್, ವಿ. ಜೆ. ವಿನೀತ್ ಕುಮಾರ್, ವಿಸ್ಮಯ ವಿನಾಯಕ್ ಉಮೇಶ್ ಮಿಜಾರು, ಸುನಿಲ್ ನೆಲ್ಲಿಗುಡ್ಡೆ, ಮೈಮ್ ರಾಮದಾಸ್, ರಾಜೇಶ್ ಪೂಜಾರಿ, ರಾದೇಶ್ ಶೆಣೈ, ಚಂದ್ರಕಲಾ ಮೋಹನ್, ರೂಪ ವರ್ಕಾಡಿ, ಯಕ್ಷಗಾನದ ಚಾರ್ಲಿ ಚಾಪ್ಲಿನ್ ಸೀತಾರಾಮ್ ಕಟೀಲ್ ಹಾಗೂ ನಿರೀಕ್ಷ ಶೆಟ್ಟಿ ಅಭಿನಯಿಸಿದ್ದಾರೆ.