News Karnataka Kannada
Sunday, April 28 2024
ಮಂಗಳೂರು

ಮಂಗಳೂರು: ಕುವೈತ್ ನೇರ ವಿಮಾನಗಳ ಸಂಖ್ಯೆ ಇಳಿಕೆ, ಸಾವಿರಾರು ಪ್ರಯಾಣಿಕರಿಗೆ ಫಜೀತಿ

The number of direct flights to Kuwait has come down, thousands of passengers have been inconvenienced.
Photo Credit : News Kannada

ಮಂಗಳೂರು: ಮಂಗಳೂರು ಹಾಗೂ ಕುವೈತ್ ನಡುವೆ ಇದ್ದ ನೇರ ಪ್ರಯಾಣದ ವಿಮಾನಗಳ ಸಂಖ್ಯೆಯನ್ನು ಇಳಿಸಲಾಗಿದೆ. ವಾರದಲ್ಲಿ ಸಂಚರಿಸುತ್ತಿದ್ದ ಮೂರು ವಿಮಾನಗಳನ್ನು ಈಗ ಒಂದಕ್ಕೆ ಇಳಿಸಲಾಗಿದೆ. ಇದರಿಂದಾಗಿ, ಅನೇಕ ಪ್ರಯಾಣಿಕರಿಗೆ ತೊಂದರೆಯಾಗಿದೆ.

ವಾರಕ್ಕೆ ಸುಮಾರು 30 ಸಾವಿರ ಜನರು ಈ ಎರಡೂ ನಗರಗಳ ನಡುವೆ ಸಂಚರಿಸುತ್ತಿದ್ದರು. ಈಗ, ಅನೇಕರು ಮಂಗಳೂರಿನಿಂದ ಕೇರಳದ ಕಣ್ಣೂರು, ಗೋವಾದ ಪಣಜಿ ಅಥವಾ ಬೆಂಗಳೂರಿಗೆ ಆಗಮಿಸಿ ಅಲ್ಲಿಂದ ಕುವೈತ್ ವಿಮಾನಗಳನ್ನು ಏರಿ ಪ್ರಯಾಣಿಸಬೇಕಿದೆ. ಅಲ್ಲಿಂದ ಬರುವವರಿಗೂ ಅದೇ ಸಮಸ್ಯೆ ಎದುರಾಗಿದೆ.

ವಿಮಾನಗಳ ಸಂಖ್ಯೆಯನ್ನು ಇಳಿಸಿರುವ ಬಗ್ಗೆ ಯಾವುದೇ ಕಾರಣಗಳನ್ನು ಕೇಂದ್ರ ವಿಮಾನಯಾನ ಸಚಿವಾಲಯವಾಗಲೀ, ನಾಗರಿಕ ವಿಮಾನ ಸೇವೆಗಳ ಮಹಾ ನಿರ್ದೇಶಕರ ಕಚೇರಿಯಾಗಲೀ (ಡಿಜಿಸಿಎ) ಯಾವುದೇ ಕಾರಣವನ್ನು ಕೊಟ್ಟಿಲ್ಲ. ಆದರೆ, ಈ ಕ್ರಮದಿಂದಾಗಿ ಹಲವಾರು ಪ್ರಯಾಣಿಕರಿಗೆ ಅಧರಲ್ಲೂ ವಿಶೇಷವಾಗಿ ಮಹಿಳಾ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ.

ಕುವೈತ್ ನಲ್ಲಿ ಮಂಗಳೂರಿನವರು ಹಾಗೂ ದಕ್ಷಿಣ ಕನ್ನಡದ ಇತರ ಭಾಗದವರು ಸಾವಿರಾರು ಮಂದಿ ಇದ್ದಾರೆ. ಅಲ್ಲದೆ, ಮಂಗಳೂರು, ಉಡುಪಿ ಜಿಲ್ಲೆಗಳ ಹಾಗೂ ಸುತ್ತಮುತ್ತಲಿನ ಪ್ರಾಂತ್ಯಗಳ ಮೂಲವುಳ್ಳ ಅನೇಕ ಅನಿವಾಸಿ ಭಾರತೀಯರೂ ಕುವೈತ್ ನಲ್ಲಿ ತುಂಬಾ ಮಂದಿಯಿದ್ದಾರೆ.

ಇವರು ಹಾಗೂ ಇವರ ಕುಟುಂಬದ ಕುಟುಂಬದ ಸದಸ್ಯರು ಮಂಗಳೂರಿನಿಂದ ಕುವೈತ್ ಗೆ ನೇರವಾಗಿ ಸಂಚಾರ ಮಾಡುತ್ತಿದ್ದರು. ಇದಲ್ಲದೆ, ಕೇರಳದ ಕಾಸರಗೋಡು, ಕರ್ನಾಟಕದ ಕೊಡಗು, ಹಾಸನ ಹಾಗೂ ಇನ್ನೂ ಆಸುಪಾಸು ಜಿಲ್ಲೆಗಳ ಜನರು ಕುವೈತ್ ಗೆ ಹೋಗಬೇಕೆಂದರೆ ಮಂಗಳೂರಿನ ಮೂಲಕವೇ ಹೋಗಿ ತಲುಪುವುದು ಸುಲಭವಾಗಿದೆ.

ಡಿಜಿಸಿಎ ಲೆಕ್ಕಾಚಾರದ ಪ್ರಕಾರ, ವರ್ಷಕ್ಕೆ ಏನಿಲ್ಲವೆಂದರೂ ಸುಮಾರು 30 ಸಾವಿರ ಜನರು ಮಂಗಳೂರು- ಕುವೈತ್ ನಡುವೆ ನೇರ ಪ್ರಯಾಣ ಮಾಡುತ್ತಾರೆ. ಒಂದು ಲೆಕ್ಕಾಚಾರದ ಪ್ರಕಾರ, ಕುವೈತ್ ನಲ್ಲಿ ಕಾರ್ಮಿಕರ ಮಟ್ಟದಿಂದ ಹಿಡಿದು ದೊಡ್ಡ ಕಚೇರಿಗಳಲ್ಲಿ ಉನ್ನತ ಹುದ್ದೆಗಳಲ್ಲಿಯೂ ಅವರು ಕೆಲಸ ಮಾಡುತ್ತಿದ್ದಾರೆ. ಒಂದು ಲೆಕ್ಕಾಚಾರದ ಪ್ರಕಾರ, ಇವರ ಸಂಖ್ಯೆ 50 ಸಾವಿರದಷ್ಟಿದೆ ಎಂದು ಹೇಳಲಾಗಿದೆ.

ಈಗ ಮಂಗಳೂರು – ಕುವೈತ್ ನಡುವಿನ ನೇರ ವಿಮಾನ ಸೌಕರ್ಯದಲ್ಲಿ ಇಳಿಕೆಯಾಗಿರುವುದರಿಂದ ಮಂಗಳೂರಿನಿಂದ ಕುವೈತ್ ಗೆ ಹೋಗುವ ಬಹುತೇಕ ಪ್ರಯಾಣಿಕರು ಕೇರಳದ ಕಣ್ಣೂರು, ಪಣಜಿ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಆಗಮಿಸಿ ಅಲ್ಲಿಂದ ಕುವೈತ್ ಗೆ ಹೋಗುವ ವಿಮಾನಗಳಲ್ಲಿ ಪ್ರಯಾಣಿಸಬೇಕಿದೆ. ಕುವೈತ್ ನಿಂದ ಮಂಗಳೂರಿಗೆ ಬರುವವರಿಗೂ ಇದೇ ಫಜೀತಿಯಾಗಿದೆ.

ಇದು ಹೇಳಿದಷ್ಟು ಸುಲಭವಾದದ್ದಲ್ಲ. ಒಂದು ವಿಮಾನ ನಿಲ್ದಾಣಕ್ಕೆ ಹೋಗಿ ವಿಮಾನದಲ್ಲಿ ಹೋಗಿ ಕೂರುವುದೇ ದೊಡ್ಡ ತ್ರಾಸದಾಯಕ ಕೆಲಸ. ಇನ್ನು, ಮಂಗಳೂರಿನಿಂದ ಕಣ್ಣೂರಿಗೋ, ಪಣಜಿಗೋ ಅಥವಾ ಬೆಂಗಳೂರಿಗೋ ಹೋಗಿ ಅಲ್ಲಿ, ಒಂದು ವಿಮಾನವನ್ನಿಳಿದು ಲಗೇಜ್ ಮತ್ತಿತರ ತಮ್ಮ ಸಾಮಗ್ರಿಗಳನ್ನು ಎಳೆದಾಡಿಕೊಂಡು ಕುವೈತ್ ಕಡೆಗೆ ಹೋಗುವ ಬೇರೊಂದು ವಿಮಾನವಿರುವ ಟರ್ಮಿನಲ್ ಗೆ ಹೋಗಿ ಅಲ್ಲಿನ ಎಲ್ಲಾ ರೀತಿಯ ಔಪಚಾರಿಕ ಕ್ರಮಗಳನ್ನು ಮುಗಿಸಿಕೊಂಡು ಕುವೈತ್ ವಿಮಾನವನ್ನು ಏರಬೇಕಿರುತ್ತೆ.

ಇನ್ನು ಏಕಾಂಗಿಯಾಗಿ ಪ್ರಯಾಣಿಸುವವರಿಗೆ ಅಥವಾ ಮಕ್ಕಳನ್ನು- ಲಗೇಜ್ ಗಳನ್ನು ಹಿಡಿದುಕೊಂಡು ಹೋಗುವ ಮಹಿಳಾ ಪ್ರಯಾಣಿಕರಿಗೆ ಇದು ತುಂಬಾನೇ ಕಷ್ಟಕರವಾದ ಪ್ರಯಾಣ ಎನಿಸುತ್ತದೆ. ಇದನ್ನು ಮನಗಂಡು, ಕೇಂದ್ರ ಸರ್ಕಾರ ಮಂಗಳೂರು- ಕುವೈತ್ ನಡುವಿನ ನೇರ ವಿಮಾನಗಳನ್ನು ಮೊದಲಿನಿಂದ ಮೂರಕ್ಕೆ ಹೆಚ್ಚಿಸಬೇಕು ಎಂಬುದು ಅನೇಕ ಪ್ರಯಾಣಿಕರ ಆಗ್ರಹವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು