News Karnataka Kannada
Thursday, May 02 2024
ಮಂಗಳೂರು

ಮಂಗಳೂರು: ಸುರತ್ಕಲ್‌ ಟೋಲ್‌ಗೇಟ್‌ ಹೆಜಮಾಡಿ ಜತೆ ವಿಲೀನ, ಟೋಲ್‌ ದರ ಇನ್ನೂ ದುಬಾರಿ

Mangaluru: Surathkal toll gate to be merged with Hejamady, toll rates even higher
Photo Credit : News Kannada

ಮಂಗಳೂರು: ಕೊನೆಗೂ ಸುರತ್ಕಲ್‌ ಟೋಲ್‌ಗೇಟ್‌ ಅನ್ನು ಹೆಜಮಾಡಿ ಟೋಲ್‌ ಪ್ಲಾಝಾ ಜೊತೆ ವಿಲೀನಗೊಳಿಸಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶಿಸಿದೆ. ಡಿಸೆಂಬರ್‌ 1ರಿಂದ ಈ ಆದೇಶ ಕಾರ್ಯರೂಪಕ್ಕೆ ಬರಲಿದ್ದು, ಟೋಲ್‌ ದರ ಹೆಚ್ಚಾಗಿದೆ. ಟೋಲ್‌ ಸಂಗ್ರಹ ಸಂದರ್ಭ ಕಾನೂನು ಸುವ್ಯವಸ್ಥೆಗೆ ತೊಡಕಾಗದಂತೆ ನೋಡಿಕೊಳ್ಳಬೇಕು ಎಂದು ಉಡುಪಿ ಡಿಸಿಗೆ ಪ್ರಾಧಿಕಾರ ಸೂಚನೆ ನೀಡಿದೆ.

ಭಾರಿ ಹೋರಾಟ, ನಿರಂತರ ಪ್ರತಿಭಟನೆಗೆ ಕಾರಣವಾಗಿರುವ ಸುರತ್ಕಲ್‌ ಎನ್‌ಐಟಿಕೆ ಸಮೀಪದ ಟೋಲ್‌ಗೇಟ್‌ ಅನ್ನು ಕೊನೆಗೂ ಹೆಜಮಾಡಿ ಟೋಲ್‌ ಪ್ಲಾಝಾ ಜತೆ ವಿಲೀನಗೊಳಿಸಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶಿಸಿದೆ.

ಟೋಲ್‌ ವಿಲೀನ ಕುರಿತು ಹೆದ್ದಾರಿ ಪ್ರಾಧಿಕಾರ ಗುರುವಾರ ಉಡುಪಿ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದು, ಡಿಸೆಂಬರ್‌ 1ರಿಂದ ಅನ್ವಯವಾಗುವಂತೆ ಮುಕ್ಕ(ಸುರತ್ಕಲ್‌) ಟೋಲ್‌ ವಿಲೀನಗೊಂಡಿದ್ದು, ಇದರಿಂದ ನಿರೀಕ್ಷೆಯಂತೆ ಹೆಜಮಾಡಿಯಲ್ಲಿ ಟೋಲ್‌ ಮೊತ್ತ ದುಬಾರಿಯಾಗಲಿದೆ.

ಸುರತ್ಕಲ್‌-ಬಿಸಿ ರೋಡ್‌ ನಡುವಿನ ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಸಿದ್ದ ಇರ್ಕಾನ್‌ ಪರವಾಗಿ ಹೆದ್ದಾರಿ ಪ್ರಾಧಿಕಾರ ಸುರತ್ಕಲ್‌ನಲ್ಲಿಅಳವಡಿಸಿದ್ದ ಎನ್‌ಎಂಪಿ ರೋಡ್‌ ಕನೆಕ್ಟಿವಿಟಿ ರಸ್ತೆಯ ಟೋಲ್‌ ಸಂಗ್ರಹವನ್ನು ಹೆಜಮಾಡಿ ನವಯುಗದ ಕಂಪನಿಯ ಟೋಲ್‌ಗೇಟ್‌ ಜತೆ ವಿಲೀನಗೊಳಿಸಲಾಗಿದೆ. ಸುರತ್ಕಲ್‌ನ ಸುಂಕ ದರವನ್ನೂ ಹೆಜಮಾಡಿ ಜತೆ ಸೇರ್ಪಡೆ ಮಾಡಲಾಗಿದೆ ಎಂದು ಪತ್ರದಲ್ಲಿ ತಿಳಿಸಿದೆ.

ಟೋಲ್‌ ಸಂಗ್ರಹ ಸಂದರ್ಭ ಕಾನೂನು ಸುವ್ಯವಸ್ಥೆಗೆ ತೊಡಕಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಹೆಜಮಾಡಿಯಲ್ಲಿ ವಿಲೀನದ ಬಳಿಕ ಏರಿಕೆಯಾದ ಸುಂಕ ದರಗಳ ಬಳಿಕ ಟೋಲ್‌ ಸಂಗ್ರಹದಲ್ಲಿ ವ್ಯತ್ಯಯ ಉಂಟಾದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜತೆಗಿನ ರಾಜ್ಯ ಸರಕಾರದ ಒಪ್ಪಂದದಂತೆ ನಷ್ಟವನ್ನು ರಾಜ್ಯ ಸರಕಾರ ಭರಿಸಬೇಕಾಗುತ್ತದೆ. ಉಡುಪಿ ಜಿಲ್ಲಾಡಳಿತದಿಂದ ಎಲ್ಲ ರೀತಿಯ ಸಹಾಯ, ನೆರವು, ಪೊಲೀಸ್‌ ಭದ್ರತೆ ಒದಗಿಸಬೇಕು. ಇದು ಡಿಸೆಂಬರ್‌ 1ರ ಮಧ್ಯರಾತ್ರಿಯಿಂದಲೇ ಚಾಲ್ತಿಗೆ ಬರಲಿದೆ ಎಂದು ಉಡುಪಿ ಜಿಲ್ಲಾಡಳಿತಕ್ಕೆ ಬರೆದ ಪತ್ರದಲ್ಲಿ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಎಚ್‌ಎಸ್‌ ಲಿಂಗೇಗೌಡ ತಿಳಿಸಿದ್ದ

ಹೆಜಮಾಡಿ ಜತೆ ವಿಲೀನ ಬಳಿಕ ಪರಿಷ್ಕೃತ ದರ
* ಕಾರು, ಜೀಪು, ವ್ಯಾನ್‌ ಸಹಿತ ಲಘು ವಾಹನ: ಸುರತ್ಕಲ್‌ನಲ್ಲಿ ಸಿಂಗಲ್‌ಗೆ ಟ್ರಿಪ್‌ಗೆ ಇದ್ದ ದರ 60, ಹೆಜಮಾಡಿ ದರ 40, ಇನ್ನು ಮುಂದೆ ಪಾವತಿ 100 ರೂ.
* ರಿಟರ್ನ್‌ ಟ್ರಿಪ್‌ ದರ- 90 ಮತ್ತು 65 ಸೇರಿ 155 ರೂ.
* 50 ಸಿಂಗಲ್‌ ಟ್ರಿಪ್‌ನ ಮಾಸಿಕ ಪಾಸ್‌ ದರ 2,050 ಮತ್ತು 1,410 ಸೇರಿ 3,460 ರೂ.

* ಲೈಟ್‌ ಕಮರ್ಷಿಯಲ್‌ ವಾಹನ, ಲೈಟ್‌ ಗೂಡ್ಸ್‌ ವಾಹನ/ ಮಿನಿ ಬಸ್‌: ಸುರತ್ಕಲ್‌ನಲ್ಲಿಸಿಂಗಲ್‌ಗೆ ಟ್ರಿಪ್‌ಗೆ ಇದ್ದ ದರ 100, ಹೆಜಮಾಡಿ ದರ 70, ಇನ್ನು ಮುಂದೆ ಪಾವತಿ 170 ರೂ.
* ರಿಟರ್ನ್‌ ಟ್ರಿಪ್‌ ದರ-150 ಮತ್ತು 100 ಸೇರಿ 250 ರೂ.
* 50 ಸಿಂಗಲ್‌ ಟ್ರಿಪ್‌ನ ಮಾಸಿಕ ಪಾಸ್‌ ದರ 3315 ಮತ್ತು 2275 ಸೇರಿ 5590 ರೂ.

* ಬಸ್‌ ಅಥವಾ ಟ್ರಕ್‌(ಎರಡು ಆ್ಯಕ್ಸಿಲ್‌):ಸುರತ್ಕಲ್‌ನಲ್ಲಿಸಿಂಗಲ್‌ಗೆ ಟ್ರಿಪ್‌ಗೆ ಇದ್ದ ದರ 210, ಹೆಜಮಾಡಿ ದರ 145, ಇನ್ನು ಮುಂದೆ ಪಾವತಿ 355 ರೂ.
* ರಿಟರ್ನ್‌ ಟ್ರಿಪ್‌ ದರ- 310 ಮತ್ತು 215 ಸೇರಿ 525 ರೂ.
* 50 ಸಿಂಗಲ್‌ ಟ್ರಿಪ್‌ನ ಮಾಸಿಕ ಪಾಸ್‌ ದರ 6,940 ಮತ್ತು 4,765 ಸೇರಿ 11,705 ರೂ.

* ಹೆವಿ ಕನ್‌ಸ್ಟ್ರನ್‌ ಮೆಷಿನರಿ/ ಅತ್‌ರ್‍ ಮೂವಿಂಗ್‌ ಉಪಕರಣ/ ಮಲ್ಟಿ ಆ್ಯಕ್ಸಿಲ್‌ ವಾಹನಗಳು: ಸುರತ್ಕಲ್‌ನಲ್ಲಿಸಿಂಗಲ್‌ಗೆ ಟ್ರಿಪ್‌ಗೆ ಇದ್ದ ದರ 325, ಹೆಜಮಾಡಿ ದರ 225, ಇನ್ನು ಮುಂದೆ ಪಾವತಿ 550 ರೂ.

* ರಿಟರ್ನ್‌ ಟ್ರಿಪ್‌ ದರ- 490 ಮತ್ತು 335 ಸೇರಿ 825 ರೂ.
* 50 ಸಿಂಗಲ್‌ ಟ್ರಿಪ್‌ನ ಮಾಸಿಕ ಪಾಸ್‌ ದರ 10,885 ಮತ್ತು 7,475 ಸೇರಿ 18,360 ರೂ.

* ಓವರ್‌ಸೈಝ್ಡ್‌ ವಾಹನಗಳು(7 ಅಥವಾ ಹೆಚ್ಚಿನ ಆ್ಯಕ್ಸಿಲ್‌): ಸುರತ್ಕಲ್‌ನಲ್ಲಿಸಿಂಗಲ್‌ಗೆ ಟ್ರಿಪ್‌ಗೆ ಇದ್ದ ದರ 400, ಹೆಜಮಾಡಿ ದರ 275, ಇನ್ನು ಮುಂದೆ ಪಾವತಿ 675 ರೂ.(ಮಾಸಿಕ ಪಾಸ್‌ 315 ರೂ.)
* ರಿಟರ್ನ್‌ ಟ್ರಿಪ್‌ ದರ- 595 ಮತ್ತು 410 ಸೇರಿ 1,005 ರೂ.
* 50 ಸಿಂಗಲ್‌ ಟ್ರಿಪ್‌ನ ಮಾಸಿಕ ಪಾಸ್‌ ದರ 13,250 ಮತ್ತು 9,100 ಸೇರಿ 22,350 ರೂ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು