ಮಂಗಳೂರು: ಸಂತ ವಿನ್ಸೆಂಟ್ ಪಾವ್ಲ್ ಸಭಾ ಆಂಜೆಲೋರ್ ಚರ್ಚ್ ಘಟಕದ ವಾರ್ಷಿಕ ಹಬ್ಬ ಇಂದು ನಡೆಯಿತು. ಬಲಿ ಪೂಜೆಯ ವೇಳೆ ಚರ್ಚ್ ಧರ್ಮಗುರು ಫಾ. ವಿಲಿಯಂ ಮಿನೇಜಸ್ ಉದ್ಘಾಟನೆ ನೆರವೇರಿಸಿದರು.
ಸಂತ ವಿನ್ಸೆಂಟ್ ಪಾವ್ಲ್ ಸಭಾ ಘಟಕವು ಈ ವರ್ಷ ಮೂರು ಬಡ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಡುವ ಯೋಜನೆ ಹಮ್ಮಿ ಕೊಂಡಿರುವುದು ಶ್ಲಾಘನೀಯ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯಿನಿ ಫಿಲೋಮಿನಾ ತಾವ್ರೊ, ಗಾಯಕ ಮೆಲ್ವಿನ್ ಪೆರಿಸ್ ಉಪಸ್ಥಿತರಿದ್ದರು. ಸಂತ ವಿನ್ಸೆಂಟ್ ಪಾವ್ಲ್ ಸಭಾದ ಪ್ರಾಂತೀಯ ಅಧ್ಯಕ್ಷ ಜಾರ್ಜ್ ಬೋರೋಮಿಯಾ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ನೋಯೆಲ್ ಪಿಂಟೋ, ಕಾರ್ಯದರ್ಶಿ ಲೋಲಿನಾ ಡಿ ಸೋಜಾ, ಸಭಾದ ಸ್ಥಳೀಯ ಅಧ್ಯಕ್ಷ ಐವನ್ ಡಿ ಸಿಲ್ವಾ ಮುಂತಾದವರು ವೇದಿಕೆಯಲ್ಲಿದ್ದರು. ಬರ್ನಾರ್ಡ್ ಡಿ ಸೋಜಾ ವಂದಿಸಿದರು. ಸಿಂತಿಯಾ ಡಿ ಸೋಜಾ ಕಾರ್ಯಕ್ರಮ ನಿರೂಪಿಸಿದರು.