News Karnataka Kannada
Thursday, May 02 2024
ಮಂಗಳೂರು

ಮಂಗಳೂರು: ಸ್ಫೋಟಕ್ಕೂ ಮುನ್ನ ಸಕ್ರಿಯವಾಗಿತ್ತು ಸ್ಯಾಟಲೈಟ್ ಫೋನ್‌

Satellite phone was active before the blast
Photo Credit : By Author

ಮಂಗಳೂರು: ದಿನ ಕಳೆದಂತೆ ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ರೋಚಕ ಅಂಶಗಳು ಬಯಲಾಗುತ್ತಿದ್ದು, ಮಂಗಳೂರು ಸ್ಫೋಟಕ್ಕೂ ಮುನ್ನ ದಿನ ಸ್ಯಾಟಲೈಟ್ ಫೋನ್‌ ಸಕ್ರಿಯವಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಅರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್‌ ಫೋನ್‌ ರಿಂಗಣಿಸಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿ ಶಾರೀಕ್‌ ಸ್ಯಾಟಲೈಟ್‌ ಫೋನ್‌ ಮೂಲಕ ಹ್ಯಾಂಡ್ಲರ್‌ಗಳನ್ನು ಸಂಪರ್ಕಿಸಿರುವ ಸಾಧ್ಯತೆ ಇದೆ.

ನಿಷೇಧಿತ ತುರಾಯ ಸ್ಯಾಟಲೈಟ್ ಫೋನ್ ಬಳಸಲಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಸ್ಫೋಟಕ್ಕೂ ಮುನ್ನಾ ದಿನ ಅಂದರೆ ನವೆಂಬರ್‌ 18ರಂದು ಬಂಟ್ವಾಳದ ಕಕ್ಕಿಂಜೆಯಲ್ಲಿ ಸ್ಯಾಟಲೈಟ್ ಫೋನ್ ರಿಂಗಣಿಸಿದ್ದು, ನವೆಂಬರ್‌ 19ರ ಸಂಜೆ 4:29ರ ಹೊತ್ತಿಗೆ ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟವಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಶಾರೀಕ್, ಸ್ಲೀಪರ್‌ ಸೆಲ್‌ಗಳ ಜತೆ ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸಿರುವ ಸಾಧ್ಯತೆಯಿದೆ.

ದಕ್ಷಿಣ ಕನ್ನಡ ಜಿಲ್ಲೆಯ 2, ಉಡುಪಿ ಜಿಲ್ಲೆಯ ಒಂದು ಕಡೆ ಹಾಗು ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶದಿಂದ ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸಲಾಗಿದೆ ಎಂದು ಮೂಲಗಳಯ ತಿಳಿಸಿವೆ. ಸ್ಯಾಟಲೈಟ್ ಫೋನ್ ಲೊಕೇಷನ್ ಅನ್ನು ಬೇಹುಗಾರಿಕಾ ಏಜೆನ್ಸಿಗಳು ಟ್ರೇಸ್ ಮಾಡಿವೆ. ಸುಮಾರು 5 ವರ್ಷಗಳಿಂದ ಕರಾವಳಿ ಮತ್ತು ಮಲೆನಾಡಿನಲ್ಲಿ ಪದೇ ಪದೇ ನಿಷೇಧಿತ ತುರಾಯ ಸ್ಯಾಟಲೈಟ್ ಫೋನ್‌ಗಳು ಬಳಕೆಯಾಗುತ್ತಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡುತ್ತಿದ್ದವು

ಕುಕ್ಕರ್‌ ಬಾಂಬ್‌ ಸ್ಫೋಟಕ್ಕೆ ದುಬೈನಲ್ಲಿ ಸ್ಕೆಚ್‌ ಹಾಕಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಪೊಲೀಸರ ತನಿಖೆ ವೇಳೆ ಬಹಿರಂಗಗೊಂಡಿತ್ತು. ಈ ನಿಟ್ಟಿನಲ್ಲೂ ತನಿಖೆ ತೀವ್ರಗೊಳಿಸಲಾಗಿದೆ. ಗೋಡೆ ಬರಹದ ಪ್ರಕರಣದ ಆರೋಪಿ, ತೀರ್ಥಹಳ್ಳಿ ನಿವಾಸಿ ಅರಾಫತ್‌ ಆಲಿ ಮತ್ತು ಅಬ್ದುಲ್‌ ಮತೀನ್‌ ಈ ಸ್ಫೋಟದ ಮಾಸ್ಟರ್‌ ಮೈಂಡ್‌ ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ. ಮಂಗಳೂರಿನ ಗೋಡೆ ಬರಹ, ಶಿವಮೊಗ್ಗ ತುಂಗಾ ತೀರದ ಸ್ಫೋಟ ಮತ್ತು ಗಲಭೆ, ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ಮಾಸ್ಟರ್‌ ಮೈಂಡ್‌ ಅರಾಫತ್‌ ಆಲಿಯಾಗಿದ್ದು, ಈತ ಅಮಾಯಕ ಯುವಕರನ್ನು ಟಾರ್ಗೆಟ್‌ ಮಾಡಿ ಬ್ರೈನ್‌ ವಾಶ್‌ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಮಂಗಳೂರು ಸ್ಫೋಟದಲ್ಲೂ ಕೂಡ ಈತನೇ ಶಾರೀಕ್‌ಗೆ ನಿರ್ದೇಶನ ನೀಡಿರುವ ಅಂಶ ಪೊಲೀಸರಿಗೆ ಸಿಕ್ಕಿದೆ.

ಡಾರ್ಕ್‌ ವೆಬ್‌, ಸಿಗ್ನಲ್‌ ಆಪ್‌ ಬಳಕೆ!

ಅರಾಫತ್‌ ಆಲಿ, ಮತೀನ್‌, ಶಾರೀಕ್‌, ನ್ಯಾಯಾಂಗ ಬಂಧನದಲ್ಲಿರುವ ಶಂಕಿತ ಮಾಝ್‌ ಡಾರ್ಕ್‌ ವೆಬ್‌ ಮೂಲಕ ದುಷ್ಕೃತ್ಯಕ್ಕೆ ಪೂಕವಾದ ಹಾಗೂ ಐಸಿಸ್‌ ಪೂರಕವಾದ ವಿಡಿಯೋ ಕಳಿಸಿದ್ದರು. ಇದು ಮಾತ್ರವಲ್ಲದೇ ಒಬ್ಬರಿಗೊಬ್ಬರು ಸಂಪರ್ಕಕ್ಕೆ ಸಿಗ್ನಲ್‌ ಆಪ್‌ ಬಳಸುತ್ತಿದ್ದರು ಎಂಬು ತನಿಖೆಯಿಂದ ತಿಳಿದುಬಂದಿದೆ. ಉಗ್ರವಾದಕ್ಕೆ ಸದಾ ಪ್ರೇರೆಪಣೆ ನೀಡುತ್ತಿರುವ ಅರಾಫತ್‌ ಆಲಿ ಹಾಗೂ ಅಬ್ದುಲ್‌ ಮತೀನ್‌ಗಾಗಿ ಪೊಲೀಸರು ಹುಡುಕುತ್ತಿದ್ದಾರೆ. ಇನ್ನು, ಮಾಝ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಯಾಗಿದ್ದು, ಯೂಟ್ಯೂಬ್‌ ಮೂಲಕ ಶಾರೀಕ್‌ಗೆ ಬಾಂಬ್‌ ತಯಾರಿಗೆ ಈತನೇ ಮಾರ್ಗದರ್ಶನ ನೀಡಿರುವ ಅನುಮಾನ ಪೊಲೀಸರಿಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30359
ಶರಣ್‌ ರಾಜ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು