News Karnataka Kannada
Saturday, May 04 2024
ಮಂಗಳೂರು

ಮಂಗಳೂರು: ಸಮಸ್ಯೆಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಸ್ಪರ್ಧೆಯ ಬಹುಮಾನ ವಿತರಣೆ

Prize distribution of competition to film issues and put up on social media
Photo Credit : R Bhat
ಮಂಗಳೂರು:  ನಗರದಲ್ಲಿನ ವಿವಿಧ ಸಮಸ್ಯೆಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕುವವರಿಗೆ ನಡೆದ ಸ್ಪರ್ಧೆಯಲ್ಲಿ ಜಿ ಕೆ ಭಟ್ಟ ಮೊದಲ ಬಹುಮಾನ ರೂ 5000/-  ದಿಕ್ಷೀತ್ ಅತ್ತಾವರ. ಎರಡನೇ ಬಹುಮಾನ ರೂ 2500/- ಪ್ರೋತ್ಸಾಹಕರ ಬಹುಮಾನ ಅನ್ಸರುದ್ದೀನ್ ಸಲ್ಮಾರ್  ಮತ್ತು ಯೋಗೀಶ್ ನಾಯಕ್   ಸಂಜನಾ ಭಟ್ಟ್ ಅವರುಗಳಿಗೆ ತಲಾ ರೂ 1000/-  ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಎಂ ಜಿ ಹೆಗಡೆ ರಸ್ತೆಯಲ್ಲಿ ಚಿಕ್ಕ ಹೊಂಡವಾದ ತಕ್ಷಣ ರಿಪೇರಿಯಾಗಬೇಕು ಮಹಾನಗರಪಾಲಿಕೆಯಲ್ಲಿ ತಂಡವೊಂದನ್ನು ರಚಿಸಬೇಕು. ಅವರುಗಳು ಸತತವಾಗಿ ಇಂತಹ ಸಮಸ್ಯೆಯತ್ತ ಗಮನಕೊಡಬೇಕು. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡ ಬಿದ್ದಾಗ ಸರಿ ಮಾಡಲು ತಂಡವಿದೆ. ಆದರೆ ಅಧಿಕಾರಿಗಳ ಬೇಜವಾಬ್ಧಾರಿಯಿಂದಾಗಿ ಕೆಲಸವಾಗುತ್ತಿಲ್ಲ. ಇವರಿಗೆ ಸ್ಥಳೀಯ ಶಾಸಕರು ಜನಪ್ರತಿನಿಧಿಗಳು ಚುರುಕು ಮುಟ್ಟಿಸಬೇಕು. ಇದೇ ರೀತಿ ಸಮಸ್ಯೆ ಮುಂದುವರಿದರೆ ಜನರ ವಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುನಿಲ್ ಬಜಿಲಕೇರಿ ಮಾತನಾಡಿ ಈ ಸ್ಪರ್ಧೆ ಮತ್ತು ಬಹುಮಾನ ನೀಡಿದ್ದು ಖುಷಿಯ ಕಾರ್ಯಕ್ರಮ ಅಲ್ಲ. ಆಮಾಯಕ ಯುವಕನ ಸಾವಿಗೆ ಪ್ರತಿಭಟನೆಯ ರೂಪವಾಗಿ ಎಂದರು. ಗೆದ್ದವರಿಗೆ ಅಗಸ್ಟ್ 15 ರಂದು ಸಂಜೆ 4 ಗಂಟೆಗೆ , ಇತ್ತೀಚೆಗೆ  ರಸ್ತೆ ಗುಂಡಿಯಿಂದಾಗಿ ಆಶಿತ್ ಎಂಬ ತರುಣ  ನಿಧನರಾದ ಸ್ಥಳದಲ್ಲಿ   ಬಹುಮಾನದ ಹಣ ನೀಡಲಾಯಿತು.
ಬಹುಮಾನ ಹಣ ಪಡೆದವರು ಇದನ್ನು ಬೇಸರದಿಂದ ಸ್ವೀಕರಿಸುತ್ತಿದ್ದು ಸಮಾಜ ಸೇವೆಗೆ ಬಳಸುವುದಾಗಿ ತಿಳಿಸಿ, ಸಾರ್ವಜನಿಕರು ಸಾಮಾಜಿಕ ಜಾಲತಾಣದ ಮೂಲಕ ಹೋರಾಟಮಾಡಬೇಕು ಎಂದು ತಿಳಿಸಿದರು.
ಹೋರಾಟಗಾರ ಶ್ರೀ ಜರಾಲ್ಡ್ ಟವರ್  ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಪ್ರಸನ್ನ ರವಿ ಹಾಜರಿದ್ದು ಬಹುಮಾನ ವಿತರಿಸಿ ಮಾತನಾಡಿದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
186

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು