Categories: ಮಂಗಳೂರು

ಮಂಗಳೂರು: ಕ್ರಿಮಿನಲ್‌ಗಳ ಅವತಾರ ಕಂಡು ಯದ್ವಾತದ್ವಾ ಕ್ಲಾಸ್ ತೆಗೆದುಕೊಂಡ ಪೊಲೀಸ್ ಕಮಿಷನರ್

ಮಂಗಳೂರು: ನೀವೇ ಕ್ರಿಮಿನಲ್‌ಗಳು ನಿಮ್ಮ ಕೈಯ್ಯಲ್ಲಿ ಶಿವಾಜಿನಾ..?’ ಶಿವಾಜಿಗೆ ಅವಮಾನ ನಿನ್ನ ಕೈ ಮೇಲೆ ಇರೋದು. ಮೊದಲು ಅಳಿಸು ಅದನ್ನು. ‘ಕ್ರಿಮಿನಲ್ಸ್ ಗಳಿಗೆಲ್ಲಾ ಯಾವ ದೇವರು ಕಾಯ್ತಾನೆ’ ಮೊದಲು ಮನುಷ್ಯರಾಗೋದನ್ನು ಕಲಿಯಿರಿ. ‘ನೀನೇ ಕ್ರಿಮಿನಲ್, ಡಾಕ್ಟರ್ ಆಗಿ ಏನ್ ಮಾಡ್ತೀಯಾ’. ‘ನಾಯಿಯೇನೋ ನೀನು. ಮನುಷ್ಯನಲ್ವಾ?’ ಮೊದಲು ಸರಿಯಾಗಿ ಮನುಷ್ಯನ ರೀತಿ ಇರೋಕೆ ಕಲಿ. ‘ನಗ್ಬೇಡಾ ನಮ್ಮ ನೆಂಟರ ಹುಡುಗ ಅಲ್ಲ ನೀನು’ ಹೀಗೆ ಒಬ್ಬೊಬ್ಬ ಕ್ರಿಮಿನಲ್‌ಗಳ ಅವತಾರ ಕಂಡು ಮಂಗಳೂರು ಪೊಲೀಸ್ ಕಮಿಷನರ್ ಯದ್ವಾತದ್ವಾ ಕ್ಲಾಸ್ ತೆಗೆದುಕೊಂಡಿದ್ದಾರೆ.

ಮಂಗಳೂರು ಪೊಲೀಸ್ ಪರೇಡ್ ಮೈದಾನದಲ್ಲಿ ಇಂದು ಕ್ರಿಮಿನಲ್‌ಗಳ ಪರೇಡ್ ನಡೆಯಿತು. ಈ ಪರೇಡ್ ಗೆ ಬಂದಿದ್ದ ಒಬ್ಬೊಬ್ಬ ಕ್ರಿಮಿನಲ್ ಗಳ ಅವತಾರ ಕಂಡು ಪೊಲೀಸ್ ಕಮಿಷನರ್ ಯದ್ವಾತದ್ವಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೆ ಕೆಲ ಕ್ರಿಮಿನಲ್‌ಗಳ ಕೈಯ್ಯಲ್ಲಿದ್ದ ಐಫೋನ್‌, ಕ್ರೆಡಿಟ್, ಡೆಬಿಟ್ ಕಾರ್ಟ್ ಗಳು, ಪರ್ಸ್ ತುಂಬಾ ಹಣವನ್ನು ಕಂಡು ದಂಗಾದ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವುಗಳನ್ನು ಮುಟ್ಟುಗೋಲು ಹಾಕಿ ಪರಿಶೀಲನೆ ನಡೆಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಳವು, ಡಕಾಯಿತಿ, ಜಾನುವಾರು ಕಳವು ಸೇರಿದಂತೆ ಮಾದಕವ್ಯಸನಿಗಳ ಮೇಲೆ ಎಂಒಬಿ ಕಾರ್ಡ್ ತೆರೆಯಲಾಗುತ್ತದೆ. ಇಂದು ಇಂತಹ ಎಂಒಬಿ ಕಾರ್ಡ್ ತೆರೆಯಲಾಗಿರುವವರ ಪರೇಡ್ ನಡೆಯಿತು.‌ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ 17 ಪೊಲೀಸ್ ಠಾಣೆಗಳ 275 ಕ್ಕೂ ಅಧಿಕ ಕ್ರಿಮಿನಲ್‌ಗಳ ಪರೇಡ್ ನಡೆಯಿತು.‌ ಈ ವೇಳೆ ಪೊಲೀಸ್ ಕಮಿಷನರ್ ಕ್ರಿಮಿನಲ್ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಎಲ್ಲಾ ಕ್ರಿಮಿನಲ್ ಗಳ ಮೊಬೈಲ್ ಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ಪೊಲೀಸರು, ಅವರ ಚಲನವಲನಗಳ ಮೇಲೆ ನಿಗಾ ಇರಿಸಿದ್ದಾರೆ. ವಿಚಾರಣೆ ಬಳಿಕ ಪೊಲೀಸರು ಎಲ್ಲಾ ಕ್ರಿಮಿನಲ್ ಗಳನ್ನೂ ಮೈದಾನದಲ್ಲಿ ಮೂರು ಸುತ್ತು ಪರೇಡ್ ಮಾಡಿಸಿದರು.

Sneha Gowda

Recent Posts

ಅಶ್ಲೀಲ‌ ವಿಡಿಯೋ ಕೇಸ್: ಮೂಡಿಗೆರೆಯಲ್ಲಿ ಪ್ರಜ್ವಲ್ ಬಂಧನ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಗರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಪೊಲೀಸರು ಪ್ರಜ್ವಲ್ ನನ್ನು ಬಂಧಿಸಿದ್ದಾರೆ.

22 mins ago

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿಯ ಶವ ಪತ್ತೆ

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿ ಪ್ರಕಾಶ್‌ ಶವವಾಗಿ ಪತ್ತೆಯಾಗಿದ್ದಾನೆ.

30 mins ago

ದಾಭೋಲ್ಕರ ಹತ್ಯೆ ಕೇಸ್ ನಲ್ಲಿ ಸನಾತನ ಸಂಸ್ಥೆಯ ನಿರಪರಾಧಿತನ ಸಾಬೀತು; ಸನಾತನ ಸಂಸ್ಥೆ ಸಂತಸ

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ವಿಶೇಷ ನ್ಯಾಯಾಲಯ ಇಂದು ಇಬ್ಬರು ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿ…

31 mins ago

ಕೊಲ್ಲೂರು ಪುಣ್ಯ ನದಿಗಳ ಮಾಲಿನ್ಯ: ಅರ್ಜಿ ವಿಚಾರಣೆಗೆ ಹಸಿರು ಪೀಠ ಅಂಗೀಕಾರ

ದಕ್ಷಿಣ ಭಾರತದ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೊಲ್ಲೂರಿನ ಪುಣ್ಯ ನದಿಗಳನ್ನು ಮಾಲಿನ್ಯಗೊಳಿಸುತ್ತಿರುವ, ಪರಿಸರ ನಾಶಗೊಳಿಸುತ್ತಿರುವ ಹಾಗೂ ಸರ್ಕಾರಿ ಭೂಮಿಗಳ ಅತಿಕ್ರಮಣದ…

46 mins ago

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್; ಪ್ರಮುಖ ಆರೋಪಿ ಬಂಧನಕ್ಕೆ ಪತ್ನಿ ನೂತನ ಸಂತಸ

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮುಸ್ತಫಾ ಪೈಚಾರನ್ನ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದು, ಮುಸ್ತಫಾ…

51 mins ago

ಮೊದಲ ಬಾರಿಗೆ ಮರಾಠಿ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನ

ಕನ್ನಡದ ಹೆಮ್ಮೆಯ ಕಲೆ ಯಕ್ಷಗಾನ ಇದೀಗ ಗಡಿಗಳನ್ನು ದಾಟಿ ಮಹಾರಾಷ್ಟ್ರದ ಕಡೆಗೆ ಪಯಣ ಬೆಳೆಸಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ…

1 hour ago