Categories: ಕ್ರೀಡೆ

ಬ್ಯಾಡ್ಮಿಂಟನ್: ಪಿವಿ ಸಿಂಧು ಬಳಿ ಕ್ಷಮೆಯಾಚಿಸಿದ ಬ್ಯಾಡ್ಮಿಂಟನ್‌ ಸಂಸ್ಥೆ!

ಬ್ಯಾಡ್ಮಿಂಟನ್: ಏಪ್ರಿಲ್‌ನಲ್ಲಿ ನಡೆದಿದ್ದ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ರೆಫರಿ ಎಸಗಿದ್ದ ʼಗಂಭೀರ ಲೋಪʼಕ್ಕೆ  ಸಂಬಂಧಿಸಿದಂತೆ ಬ್ಯಾಡ್ಮಿಂಟನ್ ಏಷ್ಯಾ ತಾಂತ್ರಿಕ ಸಮಿತಿಯು ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಬಳಿ ಕ್ಷಮೆಯಾಚಿಸಿದೆ.

ಜಪಾನ್‌ನ ಅಕಾನೆ ಯಮಗುಚಿ ವಿರುದ್ಧದ ಸೆಮಿಫೈನಲ್ ಪಂದ್ಯದ ನಡುವಿನ ಅವಧಿಯಲ್ಲಿ ಪಿ.ವಿ.ಸಿಂಧು ವಿರುದ್ಧವಾಗಿ ಅಂಫೈರ್‌ ಶಾಂಕಿಂಗ್‌ ನಿರ್ಣಯ ನೀಡಿದ್ದರು. ಪಂದ್ಯದ ಮೊದಲ ಸೆಟ್ ನಿರಾಯಾಸವಾಗಿ ಗೆದ್ದ ಸಿಂಧು ಎರಡನೇ ಗೇಮ್‌ನಲ್ಲಿ 14-11 ರಿಂದ ಮುನ್ನಡೆ ಸಾಧಿಸಿದ್ದರು. ಈ ವೇಳೆ ಸಿಂಧು ಸರ್ವ್ ಮಾಡಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದ್ದ ಅಂಪೈರ್‌ ‌ಎದುರಾಳಿ ಯಮಗುಚಿಗೆ ಒಂದು ಪೆನಾಲ್ಟಿ ಪಾಯಿಂಟ್ ನೀಡಿದ್ದರು. ಇದು ಸಿಂಧುಗೆ ಆಘಾತ ತಂದಿತ್ತು. ಇದನ್ನು ʼಅನ್ಯಾಯʼ ಎಂದು ಕರೆದ ಸಿಂಧು ಪಂದ್ಯ ನಡೆಯುವಾಗಲೇ ಕಣ್ಣೀರಿಟ್ಟಿದ್ದರು. ಅಲ್ಲಿಂದ ಆ ಪಂದ್ಯದ ಗತಿಯೇ ಬದಲಾಗಿತ್ತು. ಏಕಾಗ್ರತೆ ಕಳೆದುಕೊಂಡ ಸಿಂಧು 21-13, 19-21, 16-21 ರಿಂದ ಪಂದ್ಯವನ್ನೇ ಸೋತು ಪ್ರತಿಷ್ಠಿತ ಟೂರ್ನಿಯಲ್ಲಿ ಕಂಚಿಗೆ ತೃಪ್ತಿಪಡಬೇಕಾಯಿತು.

ʼನಾನು ಸರ್ವ್‌ ಮಾಡುವ ಸಮಯದಲ್ಲಿ ಎದುರಾಳಿ ಸಿದ್ಧರಿರಲಿಲ್ಲ. ಆದರೆ ನೀವು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದ್ದೀರಿ ಎಂದು ಅಂಪೈರ್ ನನಗೆ ಹೇಳಿದರು. ಆ ಬಳಿಕ ಅಂಪೈರ್ ಇದ್ದಕ್ಕಿದ್ದಂತೆ ಅವಳಿಗೆ ಪಾಯಿಂಟ್ ನೀಡಿದರು ಇದು ನಿಜವಾಗಿಯೂ ನನಗೆ ಮಾಡಿದ ಅನ್ಯಾಯವಾಗಿದೆ. ನಾನು ಸೋಲಲು ಇದು ಮುಖ್ಯಕಾರಣವಾಯಿತು ಎಂದು ಭಾವಿಸುತ್ತೇನೆ ” ಎಂದು ಪಂದ್ಯ ಮುಗಿದ ಬಳಿಕ ಸಿಂಧು ಹೇಳಿದ್ದರು.

ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್‌ನ (ಬಿಡಬ್ಲ್ಯೂಎಫ್) ಅಥ್ಲೀಟ್‌ಗಳ ಆಯೋಗದ ಸದಸ್ಯರಾಗಿರುವ ಸಿಂಧು, ತಕ್ಷಣವೇ ವಿಶ್ವ ಹಾಗೂ ಮತ್ತು ಏಷ್ಯನ್ ಬ್ಯಾಡ್ಮಿಂಟನ್ ಒಕ್ಕೂಟಕ್ಕೆ ಪತ್ರ ಬರೆದು‌ ಅಂಪೈರ್‌ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

“ಈ ಬಗ್ಗೆ ಪತ್ರಮುಖೇನ ಕ್ಷಮೆಯಾಚಿಸಿರುವ ಬ್ಯಾಡ್ಮಿಂಟನ್ ಏಷ್ಯಾ ತಾಂತ್ರಿಕ ಸಮಿತಿಯ ಅಧ್ಯಕ್ಷ, ಚಿಹ್ ಶೆನ್ ಚೆನ್, ʼನಿಮಗೆ ಆದ ಅನ್ಯಾಯಕ್ಕೆ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಇದು ಕ್ರೀಡೆಯ ಒಂದು ಭಾಗವಾಗಿದೆ ಮತ್ತದನ್ನು ನೀವು ಕ್ರೀಡಾ ಮನೋಭಾವದಿಂದ ಸ್ವೀಕರಿಸಿದ್ದೀರಿ ಎಂದು ನಾವು ಭಾವಿಸುತ್ತೇವೆ. “ದುರದೃಷ್ಟವಶಾತ್, ಈ ಸಮಯದಲ್ಲಿ ಯಾವುದೇ ತಿದ್ದುಪಡಿ ಮಾಡಲು ಸಾಧ್ಯವಾಗಲಿಲ್ಲ. ಆದರೆ ನಾವು ಆ ಬಳಿಕ ಅಂತಹ ತಪ್ಪು ಪುನರಾವರ್ತನೆಯಾಗದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ” ಎಂದು ಸಿಂಧುಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Sneha Gowda

Recent Posts

ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್‌ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂ‍ಸ್ಥೆಗಳ…

5 hours ago

ಜಿಯೋ ಬಂಪರ್‌ ಆಫರ್‌ : 15 ಒಟಿಟಿ ಆ್ಯಪ್ಲಿಕೇಷನ್‌ ಜೊತೆ ಅನ್‌ಲಿಮಿಟೆಡ್ ಡೇಟಾ ಪ್ಲಾನ್

ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…

5 hours ago

ಕಾರಿನಲ್ಲಿ ಆಕಸ್ಮಿಕ ಬೆಂಕಿ : ವ್ಯಕ್ತಿ ಸಜೀವ ದಹನ

ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…

6 hours ago

ವಿಧಾನಪರಿಷತ್ ಚುನಾವಣೆ : ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 6 ಕ್ಷೇತ್ರಗಳ…

6 hours ago

ಹಾಡಹಗಲೇ ಚಾಕುವಿನಿಂದ ಇರಿದು ಯುವಕನ ಭೀಕರ ಹತ್ಯೆ

ಚಾಕುವಿನಿಂದ ಇರಿದು ಹಾಡಹಗಲೇ ಯುವಕನ ಭೀಕರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ‌ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಪ್ರೀತಿ…

6 hours ago

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಬಿತ್ತು ಧರ್ಮದೇಟು

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ ಘಟನೆ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಇಂದು ಸಂಭವಿಸಿದೆ

6 hours ago