News Karnataka Kannada
Monday, April 29 2024
ಮಂಗಳೂರು

ಮಂಗಳೂರು: ಯೆನೆಪೋಯದಲ್ಲಿ “ರಾಷ್ಟ್ರೀಯ ವಿಜ್ಞಾನ ದಿನ-2023” ಆಚರಣೆ

Mangaluru: "National Science Day-2023" celebrated at Yenepoya
Photo Credit : News Kannada

ಮಂಗಳೂರು, ಫೆ.28: ರಾಷ್ಟ್ರೀಯ ವಿಜ್ಞಾನ ದಿನವನ್ನು ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವ ವಿದ್ಯಾಲಯ) ದೇರಳಕಟ್ಟೆ, ಮಂಗಳೂರು, ಇಲ್ಲಿ ಆಯೋಜಿಸಲಾಯಿತು.

ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ “ಗ್ಲೋಬಲ್ ಸೈನ್ಸ್ ಫಾರ್ ಗ್ಲೋಬಲ್ ವೆಲ್‌ಬೀಯಿಂಗ್” ಎಂಬ ವಿಷಯದ ಅಡಿಯಲ್ಲಿ
(ಎನ್‌ಎಸ್‌ಡಿ) ಕಾರ್ಯಕ್ರಮ ನಡೆಸಲಾಯಿತು.

1930 ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದ ಸರ್ ಸಿ ವಿ ರಾಮನ್ ಅವರ ರಾಮನ್ ಪರಿಣಾಮವನ್ನು ಕಂಡುಹಿಡಿದ
ಗೌರವಾರ್ಥವಾಗಿ ಪ್ರತಿ ವರ್ಷ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ.

ಎನ್ ಎಸ್ ಡಿ 2023 ಆಚರಣೆಯು ಅದರ ಅಧ್ಯಾಪಕರು ಮತ್ತು ವಿಭಾಗಗಳಿಗೆ ಸಂಶೋಧನಾ ಪ್ರಶಸ್ತಿಗಳ ವಿತರಣೆಯೊಂದಿಗೆ
ವಿವಿಧ ಸಮಾರಂಭಗಳನ್ನುಒಳಗೊಂಡಿತ್ತು. ಕಾರ್ಯಕ್ರಮವು ಯೆನೆಪೊಯ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ. ರೇಖಾ
ಪಿ ಡಿ ಅವರ ಸ್ವಾಗತ ಭಾಷಣದೊಂದಿಗೆ ಪ್ರಾರಂಭವಾಯಿತು, ಅವರು ರಾಮನ್ ಪರಿಣಾಮದ ಮಹತ್ವ ಮತ್ತು ರಸಾಯನಶಾಸ್ತ್ರ, ಔಷಧ ಮತ್ತು ಔಷಧೀಯ ಕ್ಷೇತ್ರಗಳು ಸೇರಿದಂತೆ ಸಮಕಾಲೀನ ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ತದ ನಂತರದ ಪ್ರಭಾವವನ್ನು ಒತ್ತಿ ಹೇಳಿದರು. ಯೆನೆಪೊಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ ) ದ ಗೌರವಾನ್ವಿತ ಉಪಕುಲಪತಿ
ಡಾ. ಎಂ. ವಿಜಯ್ ಕುಮಾರ್ ಅವರು ಅಧ್ಯಕ್ಷೀಯ ಭಾಷಣವನ್ನು ಮಾಡಿದರು. ತಮ್ಮ ಭಾಷಣದಲ್ಲಿ ಅವರು ವಿಜ್ಞಾನ,
ಆವಿಷ್ಕಾರ ಮತ್ತು ವೈದ್ಯಕೀಯ ಸಂಶೋಧನೆಗಳನ್ನು ಬೆಳೆಸುವಲ್ಲಿ ವಿಶ್ವವಿದ್ಯಾಲಯವು ಕೈಗೊಂಡ ಪ್ರಯತ್ನಗಳನ್ನು
ವಿವರಿಸಿದರು. ಸಾಮಾಜಿಕ ಮತ್ತು ವಾಣಿಜ್ಯ ಪ್ರಾಮುಖ್ಯತೆಯ ಕಲ್ಪನೆಗಳನ್ನು ಉತ್ಪನ್ನಗಳು ಮತ್ತು ಪ್ರಕ್ರಿಯೆಗಳಾಗಿ ರೂಪಿಸಿದ
ಯೆನೆಪೊಯದ ಇನ್ಕ್ಯುಬೇಟರ್ ತಂತ್ರಜ್ಞಾನದ ಸೇವೆಗಳನ್ನು ಅವರು ಶ್ಲಾಘಿಸಿದರು.

ಡಾ. ಕೆ. ಎಸ್. ಗಂಗಾಧರ ಸೋಮಯಾಜಿ, ರಿಜಿಸ್ಟ್ರಾರ್, ಯೆನೆಪೊಯ ( ಪರಿಗಣಿಸಲ್ಪಟ್ಟ ವಿಶ್ವ ವಿದ್ಯಾಲಯ ) ಅವರು
ಅತ್ಯುತ್ತಮ ಸಂಶೋಧನಾ ಪ್ರಕಟಣೆಗಳು, ಅತ್ಯುತ್ತಮ ಉಲ್ಲೇಖಿತ ಲೇಖನಗಳು, ಅತ್ಯುತ್ತಮ ಸಂಶೋಧಕರು ಮತ್ತು ಅವರ
ಸಂಶೋಧನಾ ಕೊಡುಗೆಗಳನ್ನು ಗುರುತಿಸಲು ಅತ್ಯುತ್ತಮ ವಿಬಾಗ ಪ್ರಶಸ್ತಿಗಳನ್ನು ಪ್ರಕಟಿಸಿದರು.

ಡಾ. ಎ.ವಿ.ಎಂ ಕುಟ್ಟಿ – ಮಾಜಿ ಕುಲಪತಿ ಮತ್ತು ಶೈಕ್ಷಣಿಕ ಸಲಹೆಗಾರ, ಡಾ. ಎಂ.ಎಸ್.ಮೂಸಬ್ಬ- ಯೆನೆಪೊಯ ವೈದ್ಯಕೀಯ
ಕಾಲೇಜಿನ ಪ್ರಾಂಶುಪಾಲರು, ಡಾ.ಶಾಮ್.ಎಸ್. ಭಟ್ – ಯೆನೆಪೋಯ ದಂತ ಮಹಾವಿದ್ಯಾಲಯದ ಡೀನ್, ಡಾ. ಪ್ರಶಾಂತ್ ಕುಮಾರ್ ಮೋದಿ – ಎನ್‌ಎಸ್‌ಡಿ 2023 ರ ಸಂಯೋಜಕರೊಂದಿಗೆ ಎಲ್ಲಾ ಘಟಕ ಕಾಲೇಜುಗಳ ಡೀನ್‌ಗಳು, ಹಿರಿಯ ಪ್ರಾಧ್ಯಾಪಕರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಈ ಸಮಾರಂಭವನ್ನು ಸಂಪನ್ನಗೊಳಿಸಿದರು. ವಿದ್ಯಾರ್ಥಿಗಳಿಗೆ ವಿಜ್ಞಾನ ದಿನಾಚರಣೆಯ

ಮಹತ್ವವನ್ನು ಸಾರುವ ರಸಪ್ರಶ್ನೆ, ಯುರೇಕಾ (ಐಡಿಯಾ ಪಿಚ್), ಮತ್ತು ಪದ ಅಲೆಗಳು (ಬ್ಲಾಗ್ ಬರವಣಿಗೆ) ಇತ್ಯಾದಿ
ಕಾರ್ಯಕ್ರಮಗಳನ್ನು ನಡೆಸಲಾಯಿತು ಮತ್ತು ವಿಜೇತರಿಗೆ ಸಮಾರಂಭದಲ್ಲಿ ಬಹುಮಾನಗಳನ್ನು ನೀಡಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು