ಮಂಗಳೂರು: ಭಾರತೀಯ ಸೇನೆಯಲ್ಲಿ ಶಸಸ್ತ್ರ ಸೀಮಾ ಬಲ್ ಯೋಧರಾಗಿ ಮಧ್ಯಪ್ರದೇಶದ ಭೋಪಾಲದಲ್ಲಿ ಸೇವಾ ನಿರತರಾಗಿದ್ದಾಗಲೇ ಹೃದಯಾಘಾತದಿಂದ ನಿಧನರಾದ ಶಕ್ತಿನಗರದ ವೀರ ಯೋಧ ಹವಲ್ದಾರ್ ಮುರಳೀಧರ ರೈ ಅವರ ಪಾರ್ಥಿವ ಶರೀರಕ್ಕೆ ಸಕಲ ಸರಕಾರಿ ಗೌರವ ಸಲ್ಲಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಶಾಸಕ ವೇದವ್ಯಾಸ್ ಕಾಮತ್ ಅವರು ವೀರ ಯೋಧ ಮುರಳೀಧರ ರೈ ಅವರಿಗೆ ಗೌರವ ಸಲ್ಲಿಸಿದರು.