ಬೆಳ್ತಂಗಡಿ : ಧರ್ಮಸ್ಥಳದಲ್ಲಿ 2023ರ ಮೇ 3ರಂದು ಸಂಜೆ 513 ವರ್ಷದ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ. ವರನಿಗೆ ಧೋತಿ ಮತ್ತು ಶಾಲು ಹಾಗೂ ವಧುವಿಗೆ ಸಿಲೆ ರವಿಕೆ ಕಣ, ಮಂಗಳಸೂತ್ರ ನೀಡಲಾಗುವುದು.
ಎರಡನೇ ವಿವಾಹಕ್ಕೆ ಅವಕಾಶ ಇಲ್ಲ. ಮದುವೆಯ ಎಲ್ಲ ವೆಚ್ಚವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವತಿಯಿಂದ ಧರ್ಮೋತ್ಥಾನ ಭರಿಸಲಾಗುವುದು. ಧರ್ಮಾಧಿಕಾರಿ ಡಾ| ಡಿ. ಹೆಗ್ಗಡೆಯವರು 1972ರಿಂದ ಸಾಮೂಹಿಕ ವಿವಾಹವನ್ನು ಪ್ರತೀ ವರ್ಷ ನಡೆಸುತ್ತಿದ್ದು, ಈ ತನಕ ಒಟ್ಟು 12,576 ಜೋಡಿ ವಿವಾಹದಲ್ಲಿ ಸಾಮೂಹಿಕ ನೆಮ್ಮದಿಯ ಮದುವೆಯಾಗಿ ಸುಖ-ಶಾಂತಿ, ಜೀವನ ನಡೆಸುತ್ತಿದ್ದಾರೆ.
ಇಲ್ಲಿ ಮದುವೆ ಆಗಲಿಚ್ಛಿಸುವವರು ಎ. 20ರೊಳಗೆ ಮಾಹಿತಿ ಹಾಗೂ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 08256-266644 ಸಂಪರ್ಕಿಸುವಂತೆ ಕ್ಷೇತ್ರದ ಪ್ರಕಟನೆ ತಿಳಿಸಿದೆ.