News Karnataka Kannada
Tuesday, April 30 2024
ಮಂಗಳೂರು

ಮಂಗಳೂರು: ಗ್ಯಾಸ್ ಟ್ಯಾಂಕರ್ ನಲ್ಲಿ ಸೋರಿಕೆ ಸ್ಥಳೀಯರಲ್ಲಿ ಆತಂಕ

Leakage in gas tanker scares locals
Photo Credit : News Kannada

ಮಂಗಳೂರು: ನಗರದಿಂದ ಗ್ಯಾಸ್ ಟ್ಯಾಂಕರ್ ಹೊತ್ತೊಯ್ಯುತ್ತಿದ್ದ ರೈಲಿನಲ್ಲಿ ಸೋರಿಕೆಯುಂಟಾಗಿರುವ ಶಂಕೆ ವ್ಯಕ್ತವಾಗಿದೆ. ಹೆಚ್ ಪಿ ಸಿ ಎಲ್ ನಿಂದ ರೈಲಿನ ಮೂಲಕ ಗ್ಯಾಸ್ ರವಾನೆಯಾಗುತ್ತಿದ್ದ ವೇಳೆ ಸೋರಿಕೆಯ ಆತಂಕ ಎದುರಾಗಿದೆ.

7 ಕಿಲೋಮೀಟರ್ ತೆರಳಿದ ಬಳಿಕ ಸೋರಿಕೆ ಮಾಹಿತಿ ಲಭಿಸಿದೆ. ಮಾಹಿತಿ ತಿಳಿದ ತಕ್ಷಣ ಹೆಚ್ ಪಿ ಸಿ ಎಲ್ ಗೆ ಗ್ಯಾಸ್ ಟ್ಯಾಂಕರ್ ರೈಲು ಹಿಂತಿರುಗಿದೆ. ಜೋಕಟ್ಟೆ ಗ್ರಾಮದ ಬಳಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ರೈಲ್ವೇ ಗೇಟ್ ಬಳಿ ಅಗ್ನಿಶಾಮಕದಳ ನಿಯೋಜನೆ ಮಾಡಲಾಗಿದೆ. ರೈಲ್ವೇ ಹಳಿ ಪಕ್ಕ ಜನರು ಬಾರದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಗ್ಯಾಸ್ ಲೀಕೇಜ್ ಸುದ್ದಿಯಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು