News Karnataka Kannada
Saturday, May 04 2024
ಮಂಗಳೂರು

ಮಂಗಳೂರು: ಈ ಬಾರಿಯ ಕರಾವಳಿ ಉತ್ಸವಕ್ಕೆ ನೂರೆಂಟು ವಿಘ್ನ

Mangaluru: karavali festival
Photo Credit : Facebook

ಮಂಗಳೂರು: ಕರಾವಳಿ ಉತ್ಸವವನ್ನು ಜಿಲ್ಲಾಡಳಿತ ಕಳೆದ ಮೂರು ದಶಕದಿಂದ ನಿರಂತರ ಆಯೋಜಿಸಿಕೊಂಡು ಬರುತ್ತಿತ್ತು. ಆದರೆ ಈ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರಾವಳಿ ಉತ್ಸವ ನಡೆಯುವುದಿಲ್ಲ ಎಂಬ ಊಹಪೋಹಗಳು ಹರಿದಾಡುತ್ತಿದೆ.

ಕರಾವಳಿ ಉತ್ಸವ 45 ದಿನಗಳ ಸುದೀರ್ಘ ಕಾರ್ಯಕ್ರಮವಾಗಿತ್ತು. ಪ್ರತಿವರ್ಷ ಡಿಸೆಂಬರ್‌ನಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿತ್ತು. ಕರಾವಳಿ ಉತ್ಸವ ಮೈದಾನದ ಪ್ರದರ್ಶನ ವೇದಿಕೆಯಲ್ಲಿ ಪ್ರತಿದಿನ ಸ್ಥಳೀಯ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿತ್ತು. ವಾರಾಂತ್ಯದಲ್ಲಿ ರಾಷ್ಟ್ರೀಯ ಮಟ್ಟದ ಕಲಾವಿದರ ಕಾರ್ಯಕ್ರಮವನ್ನು ಕದ್ರಿ ಪಾರ್ಕ್ನಲ್ಲಿ, ಸಮಾರೋಪ ಸಮಾರಂಭವನ್ನು ಬೀಚ್‌ನಲ್ಲಿ ಮೂರು ದಿನಗಳ ಉತ್ಸವವಾಗಿ, ಅಂತಾರಾಷ್ಟ್ರೀಯ ಕಲಾವಿದರ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿತ್ತು. ಆದರೇ ಕೊರೋನ ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ಕಾರಣದಿಂದ ಕರಾವಳಿ ಉತ್ಸವ ಮಾಡಲು ಸಾಧ್ಯವಾಗಲಿಲ್ಲ.

ನ್ಯೂಸ್ ಕನ್ನಡದ ಜೊತೆ ಮಾತನಾಡಿದ ‘ಟೈಮ್ ಆಂಡ್ ಟೈಡ್’ ಈವೆಂಟ್ಸ್, ಪ್ರಮೋಷನ್ಸ್, ಮಾರ್ಕೆಟಿಂಗ್, ಪಿಆರ್, ಮೀಡಿಯಾ ಕನ್ಸಲ್ಟೆನ್ಸಿಯ ಸ್ಥಾಪಕ ಮತ್ತು ಸಿಇಒ ಸುರೇಶ್ ರಾವ್ ಕೊಕ್ಕಡ, ಈ ಬಾರಿ ಕರಾವಳಿ ಉತ್ಸವ ನಡಿಯುವುದೇ ಡೌಟ್ ಎಂದರು. 2020-21ರ ಕರಾವಳಿ ಉತ್ಸವದ ವಸ್ತು ಪ್ರದರ್ಶನಕ್ಕೆ ಯಾರೂ ಬಿಡ್ ಸಲ್ಲಿಸದ ಕಾರಣ ಜಿಲ್ಲಾಡಳಿತವೇ ವಸ್ತು ಪ್ರದರ್ಶನ ಆಯೋಜಿಸಿತ್ತು. ಜೊತೆಗೆ ಕರಾವಳಿ ಉತ್ಸವ ಮೈದಾನದಲ್ಲಿ ಕನಿಷ್ಠ ಮೂಲ ಸೌಲಭ್ಯಗಳು ಇಲ್ಲ. ಶೌಚಾಲಯ, ಕುಡಿಯುವ ನೀರು ಹೀಗೆ ಯಾವುದೂ ಇಲ್ಲ ಎಂದರು.

ಕರಾವಳಿ ಉತ್ಸವಕ್ಕೆ ಸರಕಾರದಿಂದ ಅನುದಾನ ಬರುತ್ತದೆ. ಉಳಿದ ಮೊತ್ತವನ್ನು ಟೆಂಡರ್‌ನಿಂದ ಬರುವ ರಾಯಲ್ಟಿ ಮೊತ್ತ ಮತ್ತು ಖಾಸಗಿ ಉದ್ಯಮಿಗಳಿಂದ ಡೊನೇಷನ್ ಸಂಗ್ರಹಿಸಲಾಗುತ್ತದೆ ಎಂದರು.

ನ್ಯೂಸ್ ಕನ್ನಡದ ಜೊತೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಯತೀಶ್ ಬೈಕಂಪಾಡಿ, ಕಾರಾವಳಿ ಉತ್ಸವ ಮಾಡುವ ಅಗತ್ಯ ಇದೆ. ಇಂತಹ ಉತ್ಸವಗಳನ್ನು ಮಾಡೋದಿಲ್ಲ ಅನ್ನೋದು ಬೇಸರದ ಸಂಗತಿ. ಈ ಕರಾವಳಿ ಉತ್ಸವ ಅನ್ನೋದು ಟೂರಿಸಂಗೆ ಒಂದು ದೊಡ್ಡ ಆಸ್ತಿ ಇದ್ದಂತೆ. ಇದನ್ನ ಮಾಡದೇ ಇದ್ರೆ ದೊಡ್ಡ ನಷ್ಟ. ಉತ್ಸವಗಳು ಎಲ್ಲಾ ಜಿಲ್ಲೆಗಳಲ್ಲಿ ನಡತಾ ಇದೆ. ಕರ್ನಾಟಕದ ಅವಿಭಾಜ್ಯ ಅಂಗ ಆಗಿರುವ ಮಂಗಳೂರಿನಲ್ಲಿ ಆಗದಿದ್ದರೆ ಅದು ಬೇರೆ ಜಲ್ಲೆಗೆ ಒಂದು ನೀತಿ ನಮ್ಮ ಜಿಲ್ಲೆಗೆ ಇಂದು ನೀತಿ ಆದಹಾಗೆ ಆಗುತ್ತದೆ. ಇದು ಸರಿಅಲ್ಲ. ಈ ಕರಾವಳಿ ಉತ್ಸವ ಆದ್ರೆ ಒಳ್ಳೆಯದು, ಆಗ್ ಬೇಕು ಅನ್ನೋದು ನನ್ನ ಆಶಯ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು