News Karnataka Kannada
Friday, May 17 2024
ಮಂಗಳೂರು

ಮಂಗಳೂರು: ವಾರಸುದಾರರ ಮನೆ ಸೇರಿದ ಜ್ಞಾಪಕ ಶಕ್ತಿ ಕಳೆದುಕೊಂಡಿದ್ದ ವೃದ್ಧೆ

Mangaluru: Jagadish Shenava handed over an elderly woman who had lost her memory to his heirs
Photo Credit : News Kannada

ಮಂಗಳೂರು: ಮಂಗಳೂರು ಸರಕಾರಿ ವೆನ್ ಲಾಕ್ ಆಸ್ಪತ್ರೆಯಲ್ಲಿ ಕಳೆದ ನಾಲ್ಕೈದು ತಿಂಗಳುಗಳಿಂದ 70ವಯಸ್ಸು ಅಂದಾಜಿನ ವೃದ್ಧೆಯೋರ್ವಳು ಜ್ಞಾಪಕ ಶಕ್ತಿಯ ಕೊರತೆಯಿಂದಾಗಿ ದಾಖಲಾಗಿದ್ದರು. ತನ್ನ ಊರು ವಿಳಾಸದ ಹೆಸರನ್ನು ಮರೆತಿದ್ದ ವೃದ್ಧೆಯನ್ನು ಯಾರೋ ಓರ್ವರು ಉಡುಪಿಯಿಂದ ತಂದು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಿದ್ದರು.

ಸಾದಾರಣ 4 ತಿಂಗಳಿನಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವ ವೃದ್ಧೆಯನ್ನು ಕಂಡ ಕಾರ್ತಿಕ್ ಪಂಪವೆಲ್ ಜಿಲ್ಲಾ ಸಹ ಸೇವಾ ಪ್ರಮುಖ್ ಮತ್ತು ಅಧಿಕಾರೇತರ ಸದಸ್ಯರು ಆರೋಗ್ಯ ರಕ್ಷಣೆ ಸಮಿತಿ ವೆನ್ಲಾಕ್ ಜಿಲ್ಲಾಸ್ಪತ್ರೆ ಮಂಗಳೂರು ಇವರು ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ್ ಶೇಣವರಿಗೆ ವಿಷಯವನ್ನು ತಿಳಿಸಿದರು.

ಆಸ್ಪತ್ರೆಗೆ ಭೇಟಿ ನೀಡಿದ ಜಗದೀಶ್ ಶೇಣವ ವೃದ್ಧೆಯ ಫೋಟೋ ತೆಗೆದು ಅಲ್ಪ ಸ್ವಲ್ಪ ನೀಡಿದ ವಿಳಾಸದ ಪರಿಚಯ ತೆಗೆದುಕೊಂಡು ವಾಟ್ಸಪ್ ಮೂಲಕ ವೃದ್ಧೆ ಹೇಳಿದ ಕೋಲಾರ ವಿಳಾಸಕ್ಕೆ ಛಾಯಾಚಿತ್ರ ಸಹಿತ ಇತರ ಮಾಹಿತಿಯನ್ನು ವಿಳಾಸ ಹೇಳಿದ ಸ್ಥಳೀಯ ಪೊಲೀಸರಿಗೆ ಕಳುಹಿಸಿದರು. ಸ್ಥಳೀಯ ಠಾಣೆಯ ಪೋಲಿಸರು ಅರ್ಧಗಂಟೆಯಲ್ಲಿ ವೃದ್ಧೆಯ ಗುರುತು ಪರಿಚಯ ಪತ್ತೆ ಹಚ್ಚಿಕೊಂಡು ವಾರಿಸುದಾರರು ಯಾರೆಂಬುದನ್ನು ಜಗದೀಶ್ ಶೇಣವ ಅವರಿಗೆ ತಿಳಿಸಿದರು. ಜಗದೀಶ್ ಶೇಣವ ವಾರಿಸುದಾರರನ್ನು ಸಂಪರ್ಕ ಮಾಡಿ ವೃದ್ಧೆಯ ಬಗ್ಗೆ ತಿಳಿಸಿ ಅವರಿಗೆ ವಿಳಾಸವನ್ನು ನೀಡಿ, ಇಂದು ಮಂಗಳೂರಿಗೆ ಆಗಮಿಸಿದ ವಾರಸುದಾರರು ವೃದ್ಧೆಯನ್ನು ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ.

ವೃದ್ಧೆಯ ಮೊಮ್ಮಗ ಮತ್ತು ಸೊಸೆ ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್ತಿಗೆ ಈ ಸಂದರ್ಭದಲ್ಲಿ ಕೃತಜ್ಞತೆಯನ್ನು ಸಲ್ಲಿಸಿದರು. ಇದೆ ರೀತಿ ಅನೇಕ ಮಂದಿ ಗುರುತು ಪರಿಚಯ ಇಲ್ಲದೆ ಆಸ್ಪತ್ರೆಯಲ್ಲಿ ದಾಖಲಾಗಿದ್ದು. ಬೇರೆ ರೋಗಿಗಳಿಗೆ ಬೆಡ್ ಸಿಗದೇ ಕಾಯುವ ಸ್ಥಿತಿಯಲ್ಲಿದ್ದಾರೆ. ಇತರ ಸಂಘ ಸಂಸ್ಥೆಯವರು ಇತ್ತ ಗಮನಹರಿಸಿದರೆ ಗುರುತು ಪರಿಚಯ ಇಲ್ಲದವರ ವಿಳಾಸ ಪತ್ತೆಹಚ್ಚಿ ಕಳಿಸುವಲ್ಲಿ ಸಹಾಯ ವಾಗಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು