News Karnataka Kannada
Sunday, April 28 2024
ಮಂಗಳೂರು

ಮಂಗಳೂರು: ಡಿವೈಎಫ್ಐ ಜಪ್ಪಿನಮೊಗರು ಘಟಕದ ವತಿಯಿಂದ 21ನೇ ವರ್ಷದ ದಸರಾ ಕ್ರೀಡಾಕೂಟ

MANGALURU: Dyfi Jappinamogaru unit has organised the 21st annual Dasara Games.
Photo Credit : By Author

ಮಂಗಳೂರು: ಡಿವೈಎಫ್ಐ ಜಪ್ಪಿನಮೊಗರು ಘಟಕ ಇದರ ವತಿಯಿಂದ 21ನೇ ವರ್ಷದ ದಸರಾ ಕ್ರೀಡಾಕೂಟ ಇತ್ತೀಚೆಗೆ ಜಪ್ಪಿನಮೊಗರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಿತು.

ಕ್ರೀಡಾಕೂಟದ ಉದ್ಘಾಟಕರಾಗಿ ಹರೀಶ್ ಬೆನಕ (ಅಧ್ಯಕ್ಷರು, ಶ್ರೀ ಪಿಲಿಚಾಮುಂಡಿ ಕ್ಷೇತ್ರ ಜಪ್ಪಿನಮೊಗರು)ರವರು, ಸಮಾರಂಭದ ಅಧ್ಯಕ್ಷತೆಯನ್ನು ಡಿವೈಎಫ್ ಐ ಜಪ್ಪಿನಮೊಗರು ಘಟಕದ ಅಧ್ಯಕ್ಷರಾದ ಶಿವಾನ್ ಎನ್. ಅಮೀನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೆ.ಇಸ್ಮಾಯಿಲ್ (ಅಧ್ಯಕ್ಷರು , ಬದ್ರಿಯಾ ಜುಮ್ಮಾ ಮಸೀದಿ ಜಪ್ಪಿನಮೊಗರು) , ಶಾಹಿರ ಸ್ವರ್ಣಲತಾ (ಅಧ್ಯಕ್ಷರು, ಜನವಾದಿ ಮಹಿಳಾ ಸಂಘಟನೆ ಜಪ್ಪಿನಮೊಗರು), ರವೀಂದ್ರ ಮುನ್ನಿಪಾಡಿ (ನ್ಯಾಯವಾದಿ, ಮಂಗಳೂರು) ,  ದಿವ್ಯಾ ರತನ್ ಶೆಟ್ಟಿ (ಅಧ್ಯಕ್ಷರು, ಅರಸು ಫ್ರೆಂಡ್ಸ್ ಅಸೋಸಿಯೇಶನ್ ಜಪ್ಪಿನಮೊಗರು) ,  ರೇವಂತ್ ಕದ್ರಿ (ಕಾರ್ಯದರ್ಶಿ, ಎಸ್ ಎಫ್ ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ), ಚಂದ್ರಹಾಸ್ ಕುಲಾಲ್ (ಮಾಜಿ ಅಧ್ಯಕ್ಷರು , ಡಿವೈಎಫ್ ಐ ಜಪ್ಪಿನಮೊಗರು ಘಟಕ ) ಹಾಗೂ ದಿನೇಶ್ ಶೆಟ್ಟಿ (ಕಾರ್ಯದರ್ಶಿ, ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ , ಮಂಗಳೂರು ನಗರ) ಇವರುಗಳು ಭಾಗವಹಿಸಿದ್ದರು.

ಆರಂಭಿಕವಾಗಿ ಗುಡ್ಡಗಾಡು ಓಟ ಡಿವೈಎಫ್ಐ ಜಪ್ಪಿನಮೊಗರು ದಸರಾ ಕ್ರೀಡಾ ಕೂಟದ ಸ್ಥಾಪಕ ಅಧ್ಯಕ್ಷರಾದ ಚಂದ್ರಹಾಸ್ ಕುಲಾಲ್ ರವರು ಧ್ವಜ ಹಾರಿಸುವ ಮುಖಾಂತರ ಆರಂಭಿಸಿದರು. ಸಮಾರಂಭದ ಉದ್ಘಾಟನೆಯನ್ನು ಶ್ರೀ ಹರೀಶ್ ಬೆನಕರವರು ತೆಂಗಿನಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಪ್ಪಿನಮೊಗರಿನ ಸ್ಥಳೀಯ ಮಕ್ಕಳಿಗೆ, ಯುವಕ- ಯುವತಿಯರಿಗೆ ವಿವಿಧ ಕ್ರೀಡಾಕೂಟವನ್ನು ಏರ್ಪಡಿಸಲಾಯಿತು. ವಾಲಿಬಾಲ್ ನಡೆದ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಸೇವಾದಳ ಬಜಾಲ್ ದ್ವಿತೀಯ ಪಕ್ಕಲಡ್ಕ ಯುವಕ ಮಂಡಲ( ರಿ.). ತ್ರೋಬಾಲ್ ನಡೆದ ಪಂದ್ಯಾಟದಲ್ಲಿ ಪ್ರಥಮ ಜಪ್ಪಿನಮೊಗರು ಗ್ರಾಮ ಯುವಕ ಮಂಡಲ ( ರಿ.) ದ್ವಿತೀಯ ಜನವಾದಿ ಮಹಿಳಾ ಸಂಘಟನೆ ಜಪ್ಪಿನಮೊಗರು.

ಯುವಕರ ಹಗ್ಗಜಗ್ಗಾಟ ನಡೆದ ಪಂದ್ಯಾಟದಲ್ಲಿ ಪ್ರಥಮ ಜನತಾ ವ್ಯಾಯಾಮ ಶಾಲೆ ಬಜಾಲ್ ದ್ವಿತೀಯ ಮಲ್ಲಿಕಾರ್ಜುನ ಸೇವಾ ಸಂಘ( ರಿ.) ಕಡೆಕಾರ್ ಯುವತಿಯರ ಹಗ್ಗಜಗ್ಗಾಟ ನಡೆದ ಪಂದ್ಯಾಟದಲ್ಲಿ ಪ್ರಥಮ ಬಂಟರ ಸಂಘ (ರಿ.) ಜಪ್ಪಿನಮೊಗರು ದ್ವಿತೀಯ ಸಾರ್ವಜನಿಕ ಗಣೇಶೋತ್ಸವ ಸಮಿತಿ ಜಪ್ಪಿನಮೊಗರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಸಂತೋಷ್ ಬಜಾಲ್ (ಕಾರ್ಯದರ್ಶಿ, ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ)ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ  ದಯಾನಂದ ರಾವ್ (ಮಾಲಕರು, ಆಟೋ ಟ್ರೇಡ್ , ಗೋರಿಗುಡ್ಡ),  ಜೆ ರಾಘವ (ಮಾಲಕರು, ಪ್ರಗತಿ ಡ್ರೈವಿಂಗ್ ಸ್ಕೂಲ್ ಮಂಗಳೂರು),  ಸಂತೋಷ್ ಶೆಟ್ಟಿ ಕಡೆಕಾರು ( ಅಧ್ಯಕ್ಷರು, ಮಲ್ಲಿಕಾರ್ಜುನ ಸೇವಾ ಸಂಘ (ರಿ. )ಕಡೆಕಾರ್ ), ಶ್ರೀ ಬಾಲಕೃಷ್ಣ ಶೆಟ್ಟಿ (ಉಪಾಧ್ಯಕ್ಷರು, ನಾಗುರಿ ವ್ಯವಸಾಯ ಸೇವಾ ಸಹಕಾರಿ ಸಂಘ ಮಂಗಳೂರು ),  ಸತ್ಯಪ್ರಸಾದ್ ಶೆಟ್ಟಿ (ಅಧ್ಯಕ್ಷರು, ಬಂಟರ ಸಂಘ (ರಿ.) ಜಪ್ಪಿನಮೊಗರು) , ನಾಗರಾಜ್ ಬಿ.ವಿ. (ಅಧ್ಯಕ್ಷರು, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಜಪ್ಪಿನಮೊಗರು),  ಕೃಷ್ಣ ಶೆಟ್ಟಿ ( ಅಧ್ಯಕ್ಷರು, ಜಪ್ಪಿನಮೊಗರು ಯುವಕ ವೃಂದ) , ಅಕ್ಷಿತಾ ಎಲ್. ಕೊಟ್ಟಾರಿ (ತಂದೊಳಿಗೆ, ಜಪ್ಪಿನಮೊಗರು ),  ನವೀನ್ ಕಾರ್ಪೆಂಟರ್ ( ಅಧ್ಯಕ್ಷರು, ಜಪ್ಪಿನಮೊಗರು ಗ್ರಾಮ ಯುವಕ ಮಂಡಲ ರಿ.), ಉದಯ ಚಂದ್ರ ರೈ (ಕಾರ್ಯದರ್ಶಿ, ಸಿಪಿಐಎಂ ಜಪ್ಪಿನಮೊಗರು ಶಾಖೆ) ಇವರುಗಳು ಮುಖ್ಯ ಅತಿಥಿಗಳಾಗಿ ವೇದಿಕೆಯ ಉಪಸ್ಥಿತರಿದ್ದರು.

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅತಿಥಿಗಳು ಡಿವೈಎಫ್ಐ ಜಪ್ಪಿನಮೊಗರು ಘಟಕದ ಕ್ರೀಡಾಕೂಟ ಇತರ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು .ಹಾಗೂ ಜಪ್ಪಿನಮೊಗರು ಪ್ರದೇಶಕ್ಕೆ ಕ್ರೀಡೆ ಹಾಗೂ ಇತರ ಸಾರ್ವಜನಿಕ ಕಾರ್ಯಕ್ರಮ ನಡೆಸಲು ಸಾರ್ವಜನಿಕ ಮೈದಾನ ಆಗಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು. ಪ್ರಾರಂಭದಲ್ಲಿ ಸ್ವಸ್ತಿಕ್ ಎಸ್ .ಶೆಟ್ಟಿ , ಸೀತರಾಮ ಶೆಟ್ಟಿ ಯವರು ಸ್ವಾಗತಿಸಿದರು. ಮನೋಜ್ ಶೆಟ್ಟಿ, ಸವಿರಾಜ್, ಕೌಶಿಕ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಗಗನ್ ರವರು ಕ್ರೀಡಾ ವಿಜೇತರ ಹೆಸರನ್ನು ಓದಿದರು. ಪವನ್ ಸುಲಾಯ, ಪುನೀತ್ ನಾಯಕ್ ರವರು ಕೊನೆಗೆ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
15229
Jaya Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು