News Karnataka Kannada
Wednesday, May 01 2024
ಮಂಗಳೂರು

ಮಂಗಳೂರಿನ ಸ್ಪೋಟ ಪ್ರಕರಣ: ಹಿಂದಿರುವ ಜಾಲ ಪತ್ತೆ ಹಚ್ಚಿ ಮೂಲಬೇಧಿಸಲು ಡಾ.ಭಟ್ ಆಗ್ರಹ‌

Mangaluru blast case: Dr Bhat demands to unearth the network behind it
Photo Credit :

ಬಂಟ್ವಾಳ: ಎರಡು ದಿನಗಳ ಹಿಂದೆ ಮಂಗಳೂರಿನ ನಾಗುರಿಯಲ್ಲಿ ಆಟೋರಿಕ್ಷಾದಲ್ಲಿ ನಡೆದ ಕುಕ್ಕರ್ ಸ್ಪೋಟ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಇದರ ಹಿಂದಿರುವ ವ್ಯವಸ್ಥಿತ ಜಾಲವನ್ನು ಪತ್ತೆ ಹಚ್ಚಿ ಭಯೋತ್ಪಾದಕ ಮೂಲವನ್ನು ಬೇಧಿಸಬೇಕು ಎಂದು ಆರ್ .ಎಸ್ .ಎಸ್ ಮುಖಂಡ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಅವರು ಒತ್ತಾಯಿಸಿದ್ದಾರೆ.

ನಂದಾವರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ದ.ಕ.ಜಿಲ್ಲೆ ಭಯೋತ್ಪಾದಕ ಸಂಘಟನೆಯ ತಾಣವಾಗುತ್ತಿರುವುದು ದುರ್ದೈವ ಸಂಗತಿಯಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ‌ ಇತ್ತೀಚೆಗೆ ನಡೆದಿರುವ ರಸ್ತೆ ಮೇಲಿನ ಬರಹ, ಶರತ್ ಮಡಿವಾಳ, ಪ್ರವೀಣ್ ನೆಟ್ಟಾರು, ಶಿವಮೊಗ್ಗ ದ ಹರ್ಷ ಕೊಲೆ ಕೃತ್ಯಗಳು ಜಿಲ್ಲೆಯಲ್ಲೂ ಭಯೋತ್ಪಾದಕ ಚಟುವಟಿಕೆ ಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎನ್ನುವುದನ್ನು ಪುಷ್ಠಿಕರಿಸುತ್ತಿದೆ ಎಂದರು.

ಮಿತ್ತೂರಿನಲ್ಲಿರುವ ಕಮ್ಯೂನಿಟಿ ಸಭಾಂಗಣದಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ತರಬೇತಿ ನೀಡುವ ಕೆಲಸ ನಡೆಯುತ್ತಿದ್ದು, ಇಂತಹ ಕೆಲಸಗಳು ಅಲ್ಲಲ್ಲಿ ನಡೆಯುವ ಬಗ್ಗೆ ಸಂಶಯ ವ್ಯಕ್ತಪಡಿಸಿದ ಅವರು ಭಯೋತ್ಪದಾನೆ ದೇಶಕ್ಕೆ ಕಂಟಕವಾಗಿದ್ದು, ಇದರ ನಿರ್ಮೂಲನೆಗೆ ಸರಕಾರ ಮುಂದಾಗಬೇಕು ಇದಕ್ಕೆ ಸಮಾಜಸಹಕರಿಸಬೇಕು ಎಂದರು.

ಹಿಂದೂ ಅಶ್ಲೀಲ ಪದದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ರಾಜಕಾರಣದ ಕಾರಣಕ್ಕಾಗಿ ಇಂತಹ ಹೇಳಿಕೆ ಕೊಡುತ್ತಿದ್ದಾರೆ.ಈ ರೀತಿ ಮಾತನಾಡುವುದೇ ಆಶ್ಲೀಲವಾಗಿದೆ ಎಂದರು.

ಶೃದ್ದಾ ಹತ್ಯೆ ಹಾಗೂ ಮಂಗಳೂರಿನಲ್ಲಾದ ಸ್ಪೋಟ ಪ್ರಕರಣ ದ ಬಗ್ಗೆ ಪ್ರಗತಿಪರರ ಈಗ ಯಾಕೆ ಮಾತನಾಡುವುದಿಲ್ಲ ಎಂದು ಅವರು ಪ್ರಶ್ನಿಸಿದ ಅವರು ಈ ನಿಟ್ಟಿನಲ್ಲಿ ಸಮಾಜ ಎಚ್ಚೆತ್ತುಕೊಳ್ಳ ಬೇಕಾಗಿದೆ ಎಂದರು.

ಮೈಸೂರಿನಲ್ಲಿ ಟಿಪ್ಪುವಿನ ಮೂರ್ತಿ ನಿರ್ಮಾಣವೇ ಹಾಸ್ಯಸ್ಪದ ಎಂದು ಪ್ರತಿಕ್ರಿಯಿಸಿದ ಡಾ.ಭಟ್ ಅವರು ಮುಸ್ಲಿಂ ಸಮುದಾಯದಲ್ಲಿ ಮೂರ್ತಿಪೂಜೆಗೆ ವಿರೋಧವಿರುವಾಗ ಟಿಪ್ಪು ಮೂರ್ತಿಗೆ ಸಿದ್ದರಾಮಯ್ಯರೇ ಪೂಜೆ ಮಾಡಬೇಕಾದೀತು ಎಂದು ಲೇವಡಿ ಮಾಡಿದರಲ್ಲದೆ ಇಲ್ಲಿ ಮೂರ್ತಿ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು