News Karnataka Kannada
Monday, April 29 2024
ಮಂಗಳೂರು

ಮಂಗಳೂರು: ನ.1 ರಂದು ಆಮ್ ಆದ್ಮಿ ಪಾರ್ಟಿ ಪಕ್ಷದ ಕಚೇರಿ ಉದ್ಘಾಟನೆ

Aap Mnglr
Photo Credit : News Kannada

ಮಂಗಳೂರು: ದೇಶದಲ್ಲಿ ಆಮ್ ಆದ್ಮಿ ಪಾರ್ಟಿ ವೇಗವಾಗಿ ಬೆಳೆಯುತ್ತಿರುವ ರಾಜಕೀಯ ಪಕ್ಷವಾಗಿದೆ. ಈಗಾಗಲೇ ಪಂಜಾಬ್ ಮತ್ತು ದೆಹಲಿ ರಾಜ್ಯಗಳಲ್ಲಿ ಬಲಿಷ್ಟ ರಾಡಕೀಯ ಸಂಘಟನೆಯಾಗಿದ್ದು, ಸರಕಾರವನ್ನು ರಚಿಸಿದ್ದು ಇತರ ರಾಜ್ಯಗಳಲ್ಲಿ ಕೂಡ ಜನ ಬೆಂಬಲವನ್ನು ಪಡೆಯುತ್ತಿದ್ದು, ಕರ್ನಾಟಕ ರಾಜ್ಯದಲ್ಲಿ ಕೂಡ ಆಮ್ ಆದ್ಮಿ ಪಾರ್ಟಿ ತನ್ನ ಸಂಘಟನೆಯನ್ನು ವಿಸ್ತರಿಸುತ್ತಿದೆ. ತಳಮಟ್ಟದಿಂದಲೇ ಸಂಘಟನೆಯನ್ನು ಬೆಳೆಸಲಾಗುತ್ತಿದೆ.

ನಮ್ಮ ಪಕ್ಷದ ರಾಷ್ಟರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಸಮರ್ಥ ನಾಯಕತ್ವದಲ್ಲಿ ಎಎಪಿಯು ದೇಶದ ಇತರ ರಾಜ್ಯಗಳಲ್ಲಿ ಕೂಡ ಪ್ರಬಲವಾಗಿ ಬೇರೂರುತ್ತಿದೆ. ಮುಂಬರುವ ಹಿಮಾಚಲ ಪ್ರದೇಶ ಮತ್ತು ಗುಜರಾತ್ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕೂಡ ನಮ್ಮ ಆಮ್ ಆದ್ಮಿ ಪಾರ್ಟಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ನಮ್ಮಲಿದೆ. ಇವೆರಡು ರಾಜ್ಯಗಳಲ್ಲಿ ಮಾತ್ರವಲ್ಲದೆ ದೇಶದ ಇತರೆಡ ಕೂಡ ಎಎಪಿ ಪರವಾದ ಅಲೆ ಇದ್ದು, ಮತದಾರರ ಒಲವು ಪಡೆಯುತ್ತಿದೆ.

ಕರ್ನಾಟಕ ರಾಜ್ಯದಲ್ಲಿ ಕೂಡ ಆಮ್ ಆದ್ಮಿ ಪಾರ್ಟಿ ತನ್ನ ಸಂಘಟನೆಯನ್ನು ವಿಸ್ತರಿಸುತ್ತಿದೆ. ತಳಮಟ್ಟದಿಂದಲೇ ಸಂಘಟನೆಯನ್ನು ಬೆಳೆಸಲಾಗುತ್ತಿದೆ. ಆಮ್ ಆದ್ಮಿ ಪಾರ್ಟಿ ರಾಜ್ಯ ಅಧ್ಯಕ್ಷರಾದ ಪೃಥ್ವಿ ರೆಡ್ಡಿ ಅವರ ಸಮರ್ಥ ನಾಯಕತ್ವದಲ್ಲಿ ನಮ್ಮ ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಲು ಗ್ರಾಮ ಸಂಪರ್ಕ ಅಭಿಯಾನವನ್ನುಆರಂಭಿಸಲಾಗಿದೆ. ನಮ್ಮ ಪಕ್ಷದ ಪರವಾಗಿ ಜನಸ್ಪಂದನೆ ತುಂಬಾ ಉತ್ತಮವಾಗಿದೆ.

ಆಮ್ ಆದ್ಮಿ ಪಾರ್ಟಿ ಈಗಾಗಲೇ ಮಹಿಳಾ, ಯುವ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಪಂಗಡ, ವ್ಯಾಪಾರಿಗಳು, ರೈತರು, ವೃತ್ತಿಪರರು ಸೇರಿರುವ ಹತ್ತು ಮಂಚೂಣಿ ಸಂಘಟನೆಗಳನ್ನು ರೂಪಿಸಿದೆ. ಆಮ್ ಆದ್ಮಿ ಪಾರ್ಟಿಯ ಸದಸ್ಯತನ ಅಭಿಯಾನ ಕೂಡ ಆರಂಭವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಕ್ಷದ ಸದಸ್ಯರಾಗಲು ಆಸಕ್ತಿ ತೋರಿಸಿದ್ದಾರೆ. ಸದಸ್ಯರಾಗಬಯುವವರು ಆನ್ ಲೈನ್ ಮೂಲಕ ಫಾರ್ಮ್ ಭರ್ತಿ ಮಾಡಬೇಕಾಗುತ್ತದೆ. ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ನಮ್ಮ ಸರಕಾರಗಳ ಸಾಧನೆಯನ್ನು ಗಮನಿಸಿ, ಆರೋಗ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ನಾವು ಮಾಡಿರುವ ಬದಲಾವಣೆಯನ್ನು ಗುರುತಿಸಿ ಜನರು ನಮ್ಮ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ.

ಆಮ್ ಆದ್ಮಿ ಪಾರ್ಟಿ ನಮ್ಮ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ನಮ್ಮ ವಿರುದ್ಧ ಇತರ ಪಕ್ಷಗಳು ನಡೆಸುತ್ತಿರುವ ಆರೋಪಗಳು, ಟೀಕೆ ಟಿಪ್ಪಣಿ, ರಾಜಕೀಯ ಷಡ್ಯಂತ್ರಗಳೇ ಸಾಕ್ಷಿ ಆಗಿವೆ. ರಾಜ್ಯದಲ್ಲಿ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲು ಅರ್ಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ. ನಮ್ಮದೊಂದು ಹೊಸ ಪಾರ್ಟಿ ಆಗಿರುವುದರಿಂದ ಹಲವು ಎಡರು ತೊಡರುಗಳನ್ನು ಎದುರಿಸಿಕೊಂಡು ಮುಂದೆ ಸಾಗಬೇಕಾಗಿದೆ. ನಾವು ಸರಿಯಾದ ದಿಕ್ಕಿನಲ್ಲಿ ಸಾಗಿದರೆ ನಾವು ತಲುಪಬೇಕಾದ ಗುರಿಯನ್ನು ತಲುಪಲಿದ್ದೇವೆ ಎಂಬ ಭರವಸೆ ನಮಗಿದೆ.

ಕಚೇರಿ ಆರಂಭಃ
ಮಂಗಳೂರು ನಗರದಲ್ಲಿ ನಾವು ಹೊಸ ಸುಸಜ್ಜಿತವಾದ ಪಕ್ಷದ ಕಚೇರಿಯನ್ನು ತೆರೆಯಲಿದ್ದೇವೆ. ಮಂಗಳೂರು ಬಲ್ಮಠ ರಸ್ತೆ ಸೋಜ ಆರ್ಕೇಡ್ (ಡಾ.ಅಂಬೇಡ್ಕರ್ ವೃತ್ತದ ಸಮೀಪ)ನಲ್ಲಿ ಸಿದ್ಧವಾಗಿರುವ ಪಕ್ಷದ ನೂತನ ಕಚೇರಿಯನ್ನು ಆಮ್ ಆದ್ಮಿ ಪಾರ್ಟಿಯ ಹಿತೈಷಿಗಳಾದ, ಅನಿವಾಸಿ ಭಾರತೀಯ ಶ್ರೀ ಮೈಕಲ್ ಡಿಸೋಜ ಅವರು ರಾಜ್ಯೋತ್ಸವ ದಿನದಂದು ಉದ್ಘಾಟಿಸಲಿದ್ದಾರೆ.

ಪಂಪ್ ವೆಲ್ ವೃತ್ತದಿಂದ ಬೃಹತ್ ಪಾದಯಾತ್ರೆ
ನವೆಂಬರ್ 1 ರಂದು ಸಂಜೆ ಗಂಟೆ 4.30ಕ್ಕೆ ಪಕ್ಷದ ಕಚೇರಿ ಉದ್ಘಾಟನೆ ಆಗಲಿದೆ. ಇದಕ್ಕು ಮುನ್ನ ನಗರದ ಪಂಪ್ ವೆಲ್ ವೃತ್ತದಿಂದ ಸಂಜೆ 3.30ಕ್ಕೆ ಪಾದಯಾತ್ರೆ ನಡೆಯಲಿದೆ. ಪಂಪ್ ವೆಲ್ ವೃತ್ತದ ಸಮೀಪ ಸಂಜೆ ಗಂಟೆ 3ಕ್ಕೆ ಪಕ್ಷದ ಮುಖಂಡರು, ಕಾರ್ಯಕರ್ತರು, ಹಿತೈಷಿಗಳುಒಟ್ಟು ಸೇರುವುದು. ಪಕ್ಷದ ಕಾರ್ಯಕರ್ತರು, ಹಿತೈಷಿಗಳು, ಬೆಂಬಲಿಗರು, ಸಾರ್ವಜನಿಕರು ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ. ಕಚೇರಿ ಉದ್ಘಾಟನೆಯಾದ ನಂತರ ಡಾನ್ ಬಾಸ್ಕೋ ಸಭಾಂಗಣದಲ್ಲಿ ಸಂಜೆ ಗಂಟೆ 5.15ಕ್ಕೆ ಸಾರ್ವಜನಿಕ ಸಮಾವೇಶ ನಡೆಯಲಿದೆ. ಎಎಪಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸಂತೋಷ್ ಕಾಮತ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾವೇಶದಲ್ಲಿ ಎಎಪಿ ಕರ್ನಾಟಕ ಅಧ್ಯಕ್ಷ ಪೃಥ್ವಿ ರೆಡ್ಡಿ, ಪಕ್ಷದ ಕೇಂದ್ರ ಸಮಿತಿ ಸದಸ್ಯ ಅಶೋಕ್ ಅದಮಲೆ, ರಾಜ್ಯ ಜಂಟಿ ಕಾರ್ಯದರ್ಶಿ ವಿವೇಕಾನಂದ ಸಾಲಿನ್ಸ್, ಮೈಕಲ್ ಡಿಸೋಜ ಮುಂತಾದವರು ಜನತೆಯನ್ನು ಉದ್ದೇಶಿಸಿ ಮಾತನಾಡಲಿರುವರು. ಇದೇ ಸಂದರ್ಭದಲ್ಲಿ ಕನ್ನಡ ರಾಜ್ಯತ್ಸವ ಕೂಡ ಆಚರಿಸಲಾಗುವುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು