ಮಂಗಳೂರು: ಕಾವೂರಿನಲ್ಲಿ ಬುರ್ಖಾ ಧರಿಸಿದ್ದ ಮಹಿಳೆಯೊಬ್ಬರು ಬಟ್ಟೆ ಅಂಗಡಿಯಿಂದ ಬಟ್ಟೆ ಕಳವು ಮಾಡಿರುವ ಘಟನೆ ನಗರದಲ್ಲಿ ವರದಿಯಾಗಿದೆ.
ಈ ಘಟನೆ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಅಂಗಡಿಯ ಸಿಬ್ಬಂದಿ ಮತ್ತೋರ್ವ ಗ್ರಾಹಕರ ಬಳಿ ಹೋಗುತ್ತಿದ್ದಾಗ ಮಹಿಳೆ ಬಟ್ಟೆ ಕದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.