ಮಂಗಳೂರು: 10.08.2022 ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ದುಬೈನಿಂದ ಸ್ಪೈಸ್ ಜೆಟ್ ವಿಮಾನ ಸಂಖ್ಯೆ ಎಸ್ ಜಿ-60 ಮೂಲಕ ದುಬೈನಿಂದ ಆಗಮಿಸಿದ ಕೇರಳದ ಕಾಸರಗೋಡಿನ ಪ್ರಯಾಣಿಕನಿಂದ 17,43,000 ರೂಪಾಯಿ ಮೌಲ್ಯದ 24 ಕ್ಯಾರೆಟ್ ಶುದ್ಧತೆಯ 332.000 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಘನ ಗಮ್ ನೊಂದಿಗೆ ಬೆರೆಸಿದ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಪ್ರಯಾಣಿಕ ಧರಿಸಿದ್ದ ಒಂದು ಜೋಡಿ ಚಪ್ಪಲಿಗಳ ಕೆಳ ಭಾಗದಲ್ಲಿ ಮರೆಮಾಡಲಾಗಿತ್ತು.